ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು, ರೇಣುಕಾಚಾರ್ಯ ಬುಸ್‌..ಬುಸ್..

Published : Apr 29, 2022, 01:02 PM IST
ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು, ರೇಣುಕಾಚಾರ್ಯ ಬುಸ್‌..ಬುಸ್..

ಸಾರಾಂಶ

* ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು * ಜಮೀರ್ ವಿರುದ್ಧ ಕಿಡಿಕಾರಿದ ಎಂಪಿ ರೇಣುಕಾಚಾರ್ಯ * ಕಲ್ಲು‌ ತೂರಿದವರಿಗೆ ಆರ್ಥಿಕ ನೆರವು ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನೆ

ಬೆಂಗಳೂರು, (ಏ.29): ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ (Hubblli Violence)  ಬಂಧನವಾಗಿರುವ ಆರೋಪಿಗಳ ಕುಟುಂಬಕ್ಕೆ ಸಹಾಯ ಮಾಡಲು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಮುಂದಾಗಿದ್ದಾರೆ. 

ಇಂದು(ಶುಕ್ರವಾರ) ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಸ್ಟೇಷನ್ ಹತ್ತಿರದ ಮಸ್ತಾನ್ ಶಾ ಶಾದಿಮಹಲ್‌ನಲ್ಲಿ ಆರೋಪಿಗಳ ಕುಟುಂಬಕ್ಕೆ ನಗದು ಹಾಗೂ ರಂಜಾನ್ ಕಿಟ್‌ ಸಹಾಯ ಹಸ್ತ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.  ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಂತ್ರಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಸಹ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ರೇಣುಕಾಚಾರ್ಯ, ಮಾನ್ಯ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರೇ ಹುಬ್ಬಳ್ಳಿಯಲ್ಲಿ ಕೋಮು ಗಲಭೆ ‌ಸೃಷ್ಟಿಸಿದ ಗಲಭೆಕೋರರಿಗೆ‌ ಆರ್ಥಿಕ ನೆರವು ಕೊಡಲು ಮುಂದಾಗಿರುವ ನೀವು ನಾಗರಿಕ ಸಮಾಜಕ್ಕೆ ‌ಏನು‌ ಸಂದೇಶ ಕೊಡಲು ಮುಂದಾಗಿದ್ದೀರಿ. ಈ ಹಿಂದೆ ಡಿಜೆ ಹಳ್ಳಿ ಹಾಗೂ ‌ಕೆ.ಜಿ‌ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಹಾಗೂ ‌ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದವರಿಗೂ ಇದೇ ರೀತಿ ‌ಆರ್ಥಿಕ ನೆರವು ಕೊಟ್ಟಿದ್ದೀರಿ. ಪರಿಣಾಮ ಏನಾಯಿತು ಎಂಬುದು ‌ನಿಮಗೆ ಗೊತ್ತಿಲ್ಲವೇ ಎಂದು ತಿವಿದಿದ್ದಾರೆ.

Hubli Riots: ಗಲಭೆಕೋರರಿಗೆ ಇಫ್ತಿಯಾರ್‌ ಕೂಟ ನೀಡಲು ಮುಂದಾದ AIMIM ಮುಖಂಡರು

ಯಾವುದೇ ಒಬ್ಬ ಶಂಕಿತ ಆರೋಪಿಯನ್ನು ಪೊಲೀಸರು‌ ಆಧಾರರಹಿತವಾಗಿ ಇಲ್ಲವೇ ಸುಖಾಸುಮ್ಮನೇ ಬಂಧಿಸುವುದಿಲ್ಲ. ಹುಬ್ಬಳ್ಳಿಯಲ್ಲಿ ಹಾಡುಹಗಲೇ ಬೀದಿಯಲ್ಲಿ ನಿಂತು‌ ಬೆಂಕಿ ಹಚ್ಚಲು,‌ ಕಲ್ಲು ತೂರಾಟ ನಡೆಸಲು ಕರೆ ಕೊಟ್ಟವರು‌ ರಾಷ್ಟಪೀತ ಮಹಾತ್ಮ ಗಾಂಧೀಜಿಯವರ ಅನುಯಾಯಿಗಳೇ ಇಲ್ಲವೇ ಶಾಂತಿಧೂತರೇ. ಬೆಂಕಿ ಹಚ್ಚುವವರು, ಕೊಲೆ ಮಾಡುವವರು, ಸಾರ್ವಜನಿಕರ ಆಸ್ತಿ ಪಾಸ್ತಿ, ಹಾಳು ಮಾಡುವವರು ಠಾಣೆಗೆ ನುಗ್ಗಿ ಬೆಂಕಿ ಹಚ್ಚುವವರಿಗೆ ಉದಾರವಾಗಿ ನೀವು‌ ಹಣಕಾಸಿನ ನೆರವು ಕೊಟ್ಟಿದ್ದರಿಂದಲೇ "ಪ್ರೇರಣೆ " ಪಡೆದ ದೇಶದ್ರೋಹಿಗಳೇ  ಹುಬ್ಬಳ್ಳಿಯಲ್ಲೂ ಬೆಂಕಿ  ಹಚ್ವಲು ಮುಂದಾದರು ಎಂಬುದನ್ನು ಮರೆಯಬೇಡಿ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಬಂಧಿತರಾಗಿರುವವರು‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡ ಮಾಡಿದವರೇ, ಪಾಕಿಸ್ತಾನ ‌ವಿರುದ್ದ ಗಡಿಯಲ್ಲಿ ನಿಂತು‌ ಶತ್ರುಗಳ ಮೇಲೆ ತಾಯ್ನಾಡಿಗಾಗಿ ಹೋರಾಡಿ ಜೈಲಿಗೆ ಹೋಗಿದ್ದರೆ? ಯಾವ ಕಾರಣಕ್ಕಾಗಿ ಈ ದೇಶದ್ರೋಹಿಗಳಿಗೆ ಹಣದ ನೆರವುಕೊಡುತ್ತಿದ್ದೀರಿ. ಸಂಕಷ್ಟದಲ್ಲಿದ್ದವರಿಗೆ ಹಣಕಾಸಿನ ನೆರವು ಕೊಟ್ಟರೆ‌ ನಮ್ಮದೇನು‌ ತಕರಾರು ಇಲ್ಲ. ಆದರೆ, ನಾಗರಿಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ , ಆಸ್ಪತ್ರೆ , ಹಿಂದೂ‌ ದೇವಾಲಯಗಳ ಮೇಲೆ ಕಲ್ಲು ತೂರಿ, ಮನೆಗಳ  ಮೇಲೆ ‌ಕಲ್ಲು‌ ತೂರಿದವರಿಗೆ ಆರ್ಥಿಕ ನೆರವು ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.

ಈಗಲಾದರೂ ನಿಮ್ಮ ಓಲೈಕೆ ರಾಜಕಾರಣ ನಿಲ್ಲಿಸಿ.ಇನ್ನು ‌ಎಷ್ಟು ದಿನ ಈ ಬೂಟಾಟಿಕೆ ಮಾಡುತ್ತೀರಿ. ನೀವು ಇಂತಹ ದೇಶದ್ರೋಹಿಗಳಿಗೆ ಮತ್ತೆ ಮತ್ತೆ  ಬಿರಿಯಾನಿ, ಕಬಾಬ್ ಕೊಡಲು ಮುಂದಾದರೆ, ಕಾಂಗ್ರೆಸ್  ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವೇ ಬೇಡ. ಜಮೀರ್ ಅಹ್ಮದ್ ಖಾನ್ ದೇಶದ್ರೋಹಿಗಳಿಗೆ ಬೆಂಬಲವಾಗಿ ನಿಲ್ಲುತ್ತಾರೆ . ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!