ಚಿತ್ತಾಪುರದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರು ಬಿಜೆಪಿಯ ಅಬ್ಬರಕ್ಕೆ ಬೆಚ್ಚಿದ್ದಾರೆ, ಖರ್ಗೆ ಸೇರಿದಂತೆ ಕಾಂಗ್ರೆಸ್ಸಿಗರ ಈ ಸ್ಥಿಯನ್ನು ಮನೋವಿಜ್ಞಾನದಲ್ಲಿ ಮಾನಸಿಕ ಒತ್ತಡಕ್ಕೊಳಗಾಗೋದು ಎಂದು ಕರೆಯುತ್ತಾರೆಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಲೇವಡಿ ಮಾಡಿದ್ದಾರೆ.
ಕಲಬುರಗಿ (ನ.13): ಚಿತ್ತಾಪುರದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರು ಬಿಜೆಪಿಯ ಅಬ್ಬರಕ್ಕೆ ಬೆಚ್ಚಿದ್ದಾರೆ, ಖರ್ಗೆ ಸೇರಿದಂತೆ ಕಾಂಗ್ರೆಸ್ಸಿಗರ ಈ ಸ್ಥಿಯನ್ನು ಮನೋವಿಜ್ಞಾನದಲ್ಲಿ ಮಾನಸಿಕ ಒತ್ತಡಕ್ಕೊಳಗಾಗೋದು ಎಂದು ಕರೆಯುತ್ತಾರೆಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಲೇವಡಿ ಮಾಡಿದ್ದಾರೆ. ಇಂದಿಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾವಿನ್ನೂ ಏನೂ ಮಾಡೇ ಇಲ್ಲ. ತುಂಬ ದಿನ ಬಾರದೆ ಹೋದರೆ ಕಾಣೆಯಾಗಿದ್ದಾರೆ ಅನ್ನೋದು ಸಹಜ ತಾನೆ? ಅದನ್ನೇ ನಮ್ಮವರು ಚಿತ್ತಾಪುರದಲ್ಲಿ ಹೇಳಿದ್ದಾರೆ.
ಅದಕ್ಕೇ ಇವರು ಈ ಪರಿಯಾಗಿ ಬೆರಿದ್ದಾರೆಂದು ಹೇಳುತ್ತ ಹೆಸರು ಹೇಳದೆಯೇ ಮಾತಿನಲ್ಲೇ ಪ್ರಿಯಾಂಕ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕುಟುಕಿದರು. ನಾನಂತೂ ಹಳೆಯ ಕ್ಷೇತ್ರ ಚಿಂಚೋಳಿಯನ್ನು ಮರೆತಿಲ್ಲ, ನನ್ನ ಮಗನ ಕ್ಷೇತ್ರವಾಗಿದೆ ಈಗ. ಮಗ ಹಾಗೂ ನಾನು ಇಬ್ಬರು ಮೇಲಿಂದ ಮೇಲೆ ಕ್ಷೇತ್ರ ಸಂಚಾರ ಮಾಡುತ್ತೇವೆ. ಕ್ಷೇತ್ರ ಮರೆಯೋದು, ಜನರನ್ನ ಮರೆಯೋದು ಅಂದರೆ ರೋಹ ಮಾಡಿದಂತೆ. ಪ್ರಿಯಾಂಕ್ ಒಂದೂವರೆ ತಿಂಗಳು ಕ್ಷೇತ್ರ ಮರೆತಿದ್ದಾರೆಂದು ಬಿಜೆಪಿಯ ಮುಖಂಡರು ಆರೋಪಿಸಿದ್ದಾರೆ.
ಬಿಜೆಪಿ ಗೂಂಡಾ ಸಂಸ್ಕೃತಿ ಹುಟ್ಟು ಹಾಕುತ್ತಿದೆ: ಪ್ರಿಯಾಂಕ್ ಖರ್ಗೆ
ಇದಕ್ಕೆ ಕೋಪಗೊಂಡರೆ ಹೆಗೆಂದು ಪರೋಕ್ಷವಾಗಿ ಕಾಂಗ್ರೆಸ್ಸಿನ ಹೋರಾಟವನ್ನು ಡಾ. ಜಾಧವ್ ಟೀಕಿಸಿದರು. ಕಲಬುರಗಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಹವಾ ಇದೆ. ಇದನ್ನೇ ನಾವು ಮುಂದಿನ 6 ತಿಂಗಳು ಪೋಷಿಸಿಕೊಂಡು ಹೋಗೋ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾರ್ಯಕರ್ತರು ಯಾ ಕಾರಣಕ್ಕೂ ಹೆರದಂತೆ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಕಮಲ ಅರಳಿಸುವ ಮೂಲಕ ಮೋದಿಯವರ, ಬೊಮ್ಮಾಯಿಯವರ ಕೈ ಬಲಪಡಿಸಬೇಕು. ಕಲಬುರಗಿ ಓಬಿಸಿ ಸಮಾವೇಶ ಯಶ ಕಂಡಿದೆ. ಇದರಿಂದಾಗಿ ಪಕ್ಷ ಸಂಘಟನೆಯಲ್ಲಿ ಕಲಬುರಗಿಗೆ ಮಹತ್ವ ಬಂದಿದೆ ಎಂದು ಎಲ್ಲರನ್ನು ಅಭಿನಂದಿಸಿದರು.
ನಾವೆಲ್ಲರೂ ಆರ್ಥಿಕವಾಗಿ ಇಹಂದುಳಿದವರೇ: ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೂಳಿದ ಜನಾಂಗ ನಾವಲ್ಲೆರೂ ಆಗಿದ್ದೇವೆ ಎಂದು ಸಂಸದರಾದ ಡಾ. ಉಮೇಶ ಜಿ. ಜಾಧವ ಅವರು ಹೇಳಿದರು. ಡಾ.ಎಸ್.ಎಂ. ಪಂಡಿತ್ ರಂಗಮಂದಿರಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ಸಂತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸ ಸಮಿತಿ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಗೌರವ ನಮನ ಸಲ್ಲಿಸಿ ಮಾತನಾಡಿದರು.
535ನೇ ಕನಕದಾಸರ ಜಯಂತಿಯಾಗಿದ್ದು, ಬಂಜಾರ ಸಮಾಜ, ಕುರುಬಗೊಂಡ ಸಮಾಜ ನಾವೆಲ್ಲರೂ ಹಿಂದೂಳಿದ ಜನಾಂಗಗಳಾಗಿದ್ದೇವೆ ನಾವು ನೀವು ಅರಣ್ಯದಲ್ಲಿ ಹುಟ್ಟಿಬೆಳೆದವರಾಗಿದ್ದೇವೆ ನಾನು ಚಿಂಚೋಳಿಯಲ್ಲಿ ಶಾಸಕನಾಗಿದ್ದಾಗ ನಾನು ಗೊಂಡ ಕುರುಬ ಸಮಾಜಕ್ಕೆ ಅನೇಕ ಕೆಲಸಗಳನ್ನು ಮಾಡಿದ್ದೇನೆ ತಿಳಿಸಿದರು. ಅಫಜಲಪೂರ ಶಾಸಕರಾದ ಎಂ.ವೈ ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕನಕದಾರ ಮಹತ್ವದ ಜಯಂತಿ ಇದು ಆಗಿದೆ. ಅವರು ನೀಡಿದ ಕೊಡುಗೆ ಜನರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ನಾಡಿಗೆ ಶರಣರು ನೀಡಿದ ಕೊಡುಗೆ ಅಪಾರವಿದೆ. ಅವರ ತತ್ವಗಳಿಂದ ನಾವೆಲ್ಲರೂ ನೆಮ್ಮದಿ ಜೀವನ ಸಾಗಿಸುತ್ತದೆ ಎಂದರು.
ಸುಳ್ಳಲ್ಲಿ ಮೋದಿಗಿಂತಲೂ ಬೊಮ್ಮಾಯಿ ನಿಸ್ಸೀಮರು: ಪ್ರಿಯಾಂಕ್ ಖರ್ಗೆ
ಕಲಬುರಗಿ ಕೃಷಿ ಮಹಾವಿದ್ಯಾಲಯ ಉಪನ್ಯಾಸಕರಾಗಿ ಡಾ.ಡಿ.ಎಸ್. ವಗ್ಗಿ ಮಾತನಾಡಿ, ವಿಶ್ವಕ್ಕೆ ಮೌಲ್ಯಗಳನ್ನು ಬಿತ್ತಿದ ಮಹಾನ್‌ದಾರ್ಶನಿಕರಾದ ಬುದ್ದ, ಬಸವ ಅಂಬೇಡ್ಕರ್, ಸ್ವಾಮಿವಿವೇಕಾನಂದರು, ಕನಕದಾಸ ಪುರಂದರದಾಸರು ನೂಲಿ ಚನ್ಯಯ ಇತ್ಯಾದಿ ಸಮಾಜಕ್ಕೆ ಕೊಟ್ಟಕೊಡುಗೆ ಅಪಾರವಾಗಿದೆ ಓದು ಬಲ್ಲವರೆ ನಾವುಗಳ ತ್ವತ್ವ ಸಿದ್ಧಾಂತಗಳು ಮರೆತು ನಡೆಯುತ್ತಿವೆ ಎಂದರು. ಕಲಬುರಗಿ ಕಾಗಿನೆಲೆ ಕನಕಗುರು ಪೀಠ ತಿಂಥಣಿ ಬ್ರಿಡ್ಜ್‌ನ ಸಿದ್ಧರಾಮನಂದಪುರಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.