ಚಿತ್ತಾಪುರ ತಾಲೂಕಿನಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ಹುಟ್ಟಹಾಕುತ್ತಿದೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಶಹಾಬಾದ (ನ.13): ಚಿತ್ತಾಪುರ ತಾಲೂಕಿನಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ಹುಟ್ಟಹಾಕುತ್ತಿದೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಅವರು, ವಾಡಿ ಪಟ್ಟಣದಲ್ಲಿ 2021-22ನೇ ಸಾಲಿನ 15ನೇ ಹಣಕಾಸು ಅನುದಾನದಲ್ಲಿ 8.67 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಮತ್ತು ವಿವಿಧ ಸೌಲಭ್ಯಗಳ ವಿತರಣೆಯ ಸಮಾರಂಭದಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ನನ್ನ ಮತಕ್ಷೇತ್ರಕ್ಕೆ ನೀಡಬೇಕಾದ ಎಲ್ಲಾ ಅನುದಾನ ತಡೆಹಿಡಿದಿದೆ, ಕಾರಣ ಏನೆಂದರೆ ರಾಜ್ಯ ಸರ್ಕಾರದ ಶೇ.40 ಭ್ರಷ್ಟಾಚಾರ ವಿರುದ್ಧ ನಾನು ತೊಡೆತಟ್ಟಿನಿಂತಿದ್ದೇನೆ. ನನ್ನ ಹೋರಾಟದಿಂದ ಬಿಜೆಪಿ ನಿಜ ಬಣ್ಣ ರಾಜ್ಯದ ಜನರಿಗೆ ಅರ್ಥವಾಗಿದೆ. ಇದರಿಂದ ತೀವ್ರ ಮುಜುಗುರಕ್ಕೆ ಒಳಗಾಗಿರುವ ಸರ್ಕಾರ ನನ್ನನ್ನು ಸೋಲಿಸಲು ಎಲ್ಲಾ ಷಡ್ಯಂತ್ರ ಮಾಡುತ್ತಿದೆ. ನನ್ನ ಅಭಿವೃದ್ಧಿಯ ಬಗ್ಗೆ ಮಾತನಾಡದ ಸ್ಥಳೀಯ ಬಿಜೆಪಿ ನಾಯಕರು ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ನಾಗಾವಿ ನಾಡಿನಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ ಇದಕ್ಕೆ ಕಾರಣ ಯಾರು?
ಅಪ್ಪ, ಮಗ ಗೆದ್ದಿದ್ದರೂ ಹಿಂದುಳಿದ ಕರ್ನಾಟಕ ಪಟ್ಟ ಏಕೆ?: ಸಿ.ಸಿ.ಪಾಟೀಲ್
ಅಧಿಕಾರಕ್ಕೆ ಬರಬೇಕಾದರೆ ಚುನಾವಣೆಗೆ ನಿಂತು ಗೆದ್ದು ಬನ್ನಿ ಎಂದು ಸವಾಲು ಹಾಕಿದರು. ನನ್ನ ಬಗ್ಗೆ ಮಿಸ್ಸಿಂಗ ಪೋಸ್ಟರ ಅಂಟಿಸಿ ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಸರ್ಕಾರ ಬಂದ ಮೇಲೆ ವಿದ್ಯಾರ್ಥಿಗಳು ಕೃಷಿಕರು, ಕೂಲಿ ಕಾರ್ಮಿಕರು, ಯಾರೊಬ್ಬರು ನೆಮ್ಮದಿಯಿಂದ ಇಲ್ಲ, ಸಮಾಜ ಕಲ್ಯಾಣ ಇಲಾಖೆ ಆರು ತಿಂಗಳಿನಿಂದ ಬಾಡಿಗೆ ಕೊಟ್ಟಿಲ್ಲ ಎಂದು ವಿದ್ಯಾರ್ಥಿಯರನ್ನು ಕಟ್ಟಡ ಮಾಲೀಕರ ಹೊರಗೆ ಹಾಕಿದ್ದರಿಂದ ಅವರೆಲ್ಲ ಬಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ, ಇಂತಹ ಪರಿಸ್ಥಿತಿ ನಮ್ಮ ಸರ್ಕಾರ ಇದ್ದಾಗ ಇತ್ತಾ ಎಂದು ಪ್ರಶ್ನಿಸಿದರು.
ಸುಳ್ಳಲ್ಲಿ ಮೋದಿಗಿಂತಲೂ ಬೊಮ್ಮಾಯಿ ನಿಸ್ಸೀಮರು: ಪ್ರಿಯಾಂಕ್ ಖರ್ಗೆ
ಪುರಸಭೆ ಮುಖ್ಯಾಧಿಕಾರಿ ವಿಠಲ ಹಾದಿಮನಿ, ಮಾಜಿ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಮಾತನಾಡಿದರು. ಚಿತ್ತಾಪುರ ತಹಶೀಲ್ದಾರ ಉಮಾಕಾಂತ ಹಳ್ಳೆ, ತಾಲೂಕ ವೈದ್ಯಾಧಿಕಾರಿ ಡಾ.ಅಮರದೀಪ ಪವಾರ, ಸಮೂದಾಯ ಆರೋಗ್ಯ ಕೇಂದ್ರ ಡಾ.ದೀಪಕ ಪಾಟೀಲ, ಅಧ್ಯಕ್ಷೆ ಝರೀನಾ ಬೇಗಂ, ಸದಸ್ಯರಅದ ಶರಣು ನಾಟೀಕಾರ, ಮಲ್ಲ್ಯ ಗುತ್ತೇದಾರ, ಮ.ಗೌಸ, ಸಮುದಾಯ ಸಂಘಟಕ ಕಾರ್ತಿಕ ಪಾಟೀಲ, ನೋಡಲ ಅಧಿಕಾರಿ ಮನೋಜಕುಮಾರ ಹಿರೋಳ್ಳಿ, ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ, ಎಸಐ ಬಸವರಾಜ ಪೂಜಾರಿ, ಬಿಸಿಸಿ ಅಧ್ಯಕ್ಷ ಮಹಿಮೂದ ಸಾಹೇಬ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಟೋಪಣ್ಣ ಕೋಮಟೆ, ಸಿದ್ದುಗೌಡ ಅಫಜಲ್‌ಪೂರಕರ, ಮ.ಆಶ್ರಫ್, ಶರಣು ವಾರದ, ಸಂಜಯ ಬುಳಕರ, ಸೂರ್ಯಕಾಂತ ರದ್ದೇವಾಡಿ, ವಿನಾಯಕ ಮಠಪತಿ, ಸಂದೀಪ ಸಿಂಘೆ, ಜಗದೀಶ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಹಾರಕೂಡ ಸ್ವಾಗತಿಸಿದರು. ಮಲ್ಲಿಕಾರ್ಜುನ ಯಳಸಂಗಿ ನಿರೂಪಿಸಿದರು.