ಯತ್ನಾಳ್ ಹೇಳಿಕೆ ವಿಚಾರವಾಗಿ ಕೆಲ ಕಡೆಗಳಲ್ಲಿ ಊಹಾಪೋಹಗಳು ಹರಡುತ್ತಿರುತ್ತವೆ. ಆದರೂ ಒಳಗೊಳಗೆ ಏನಾದ್ರೂ ಇರಬಹುದೆಂದು ಅನಿಸುತ್ತದೆ. ಎಲ್ಲರೂ ಆ ರೀತಿ ಹೇಳುತ್ತಾರೆ ಅಷ್ಟೆ, ನಾವು ಹೇಳುತ್ತೇವೆ. ಸರ್ಕಾರ ಉರುಳುತ್ತೆ. ಆದರೆ, ಸಾಧ್ಯವಾಗುತ್ತೋ ಇಲ್ಲೋ ಎಂಬುವುದು ಅಂದು ಗೊತ್ತಾಗೊದು ಎಂದ ಸಂಸದ ಅಣ್ಣಾಸಾಹೇಬ್ ಜೊಲ್ಲೆ
ಚಿಕ್ಕೋಡಿ(ಆ.16): ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇವಲ 5 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಹೇಳಿಕೆ ಬರಿ ಊಹಾಪೋಹ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ವಿಚಾರವಾಗಿ ಕೆಲ ಕಡೆಗಳಲ್ಲಿ ಊಹಾಪೋಹಗಳು ಹರಡುತ್ತಿರುತ್ತವೆ. ಆದರೂ ಒಳಗೊಳಗೆ ಏನಾದ್ರೂ ಇರಬಹುದೆಂದು ಅನಿಸುತ್ತದೆ. ಎಲ್ಲರೂ ಆ ರೀತಿ ಹೇಳುತ್ತಾರೆ ಅಷ್ಟೆ, ನಾವು ಹೇಳುತ್ತೇವೆ. ಸರ್ಕಾರ ಉರುಳುತ್ತೆ. ಆದರೆ, ಸಾಧ್ಯವಾಗುತ್ತೋ ಇಲ್ಲೋ ಎಂಬುವುದು ಅಂದು ಗೊತ್ತಾಗೊದು ಎಂದರು.
ಯತ್ನಾಳ್ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು
ರಮೇಶ ಜಾರಕಿಹೊಳಿ ಹಾಗೂ ಬಿ.ಎಲ್.ಸಂತೋಷ ಭೇಟಿ ವಿಚಾರ ಅವರು, ಪಕ್ಷದ ಮುಖಂಡರು ನಾವು ಭೇಟಿಯಾಗುತ್ತೇವೆ ಅವರು ಸಹ ಭೇಟಿ ಆಗ್ತಾರೆ ಇದು ಸಹಜ. ಲಕ್ಷ್ಮಣ ಸವದಿ ಪೆನ್‌ಡೈವ್ ವಿಚಾರ ಅದು ಹಾಸ್ಯಾಸ್ಪದ ಹೇಳಿಕೆ. ಯಾರ ಹತ್ತಿರನೂ ಪೆನ್‌ಡೈವ್ ಇಲ್ಲ. ಬರಿ ಸುಮ್ಮನೆ ಹೇಳುತ್ತಾರೆ ಎಂದು ತಿಳಿಸಿದರು.