ಸಿದ್ದರಾಮಯ್ಯ ಸೇರಿ ಎಲ್ಲ ಕಾಂಗ್ರೆಸ್‌ನವರಿಗೆ ಸಭ್ಯತೆ, ಸಂಸ್ಕೃತಿ ಪಾಠ ಮಾಡ್ತೇನೆ: ಸಂಸದ ಅನಂತ ಕುಮಾರ ಹೆಗಡೆ

By Sathish Kumar KH  |  First Published Jan 16, 2024, 12:08 PM IST

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರೆಲ್ಲರಿಗೂ ನಾನು ಸಂಸ್ಕೃತಿ ಮತ್ತು ಸಭ್ಯತೆಯ ಬಗ್ಗೆ ಪಾಠ ಮಾಡ್ತೇನೆ ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. 


ಉತ್ತರ ಕನ್ನಡ (ಜ.16): ಸಂಸ್ಕೃತಿ ಬಗ್ಗೆ ಸಿದ್ಧರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಸಿದ್ದರಾಮಯ್ಯ ಸೇರಿಂದತೆ ಕಾಂಗ್ರೆಸ್ ಎಲ್ಲ ನಾಯಕರು ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ, ಸಂಸ್ಕೃತಿ ಎಂದರೇನು ಅಂತಾ ನಾನು ಅವರಿಗೆ ಪಾಠ ಮಾಡ್ತೀನಿ ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸ್ಕೃತಿ ಬಗ್ಗೆ ಸಿದ್ಧರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಇದರ ಎಲ್ಲದರ ಬಗ್ಗೆ ನಾವಿಬ್ರೂ ಕುತ್ಕೊಂಡು ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕುತ್ಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ. ಯಡಿಯೂರಪ್ಪನವರ ಬಗ್ಗೆ, ಮೋದಿಯವರ ಬಗ್ಗೆ ನಮ್ಮ ದೇವಸ್ಥಾನದ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದರು. ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು? ನಮ್ಮ ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಯಾರೆಲ್ಲಾ ಏನೇನ್ ಮಾತಾಡಿದಾರೆ ಹೇಳಬೇಕಾ.? ಎಂದು ಕಿಡಿಕಾರಿದರು.

Tap to resize

Latest Videos

undefined

ಹಿಂದು ಸಮಾಜವೆಂದ್ರೆ ಬೇವರ್ಸಿ ಸಮಾಜನಾ? 20% ಮತಕ್ಕಾಗಿ ಜೊಲ್ಲು ಸುರಿಸ್ತಾರೆ: ಅನಂತ್ ಕುಮಾರ್ ಹೆಗಡೆ

ಸಲ್ಮಾನ್ ಖುರ್ಷಿದ್ ಕಪ್ಪೆ, ಮಂಗ,  ನಪುಂಸಕ ಎಂದು  ಕರೆದರು. ಶರದ್ ಪವಾರ ಮೋದಿಯರನ್ನು ಹಿಟ್ಲರ್ ಅಂತಾ ಕರೆದರು. ಕಾಂಗ್ರೆಸ್ ಬಹುತೇಕ ನಾಯಕರು ಇವರನ್ನು ಹಿಟ್ಲರ್ ಎಂದು ಕರೆದರು. ಇದಕ್ಕೆಲ್ಲಾ ಮಿಡಿಯಾದೇ ದಾಖಲೆಗಳು ಇವೆ. ಇನ್ನು ಸಂಸ್ಕೃತಿ ಬಗ್ಗೆ ಹೇಳುವ ಸಿಎಂ ಸಿದ್ಧರಾಮಯ್ಯ ಮೋದಿಯವರನ್ನು ಏಕವಚನದಲ್ಲಿ ಮಾಸ್ ಮರ್ಡರರ್ ಎಂದು ಕರೆದರು. ಕಾಂಗ್ರೆಸ್ ನವರಿಗೆ ಸಿದ್ಧರಾಮಯ್ಯನವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ? ಇದು ನನ್ನ ಪ್ರಧಾನಿ, ನನ್ನ ದೇಶ ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಸವಾಲು ಹಾಕಿದರು.

ದಿಗ್ವಿಜಯ ಸಿಂಗ್ ಮೋದಿಯವರನ್ನ ರಾವಣ ಅಂತಾ ಕರೆದರು. ಜಯರಾಂ ರಮೇಶ್ ಭಸ್ಮಾಸುರ ಅಂತಾ ಕರೆದರು. ಮನೀಶ್ ಅಯ್ಯರ್ ವಿಷ ಸರ್ಪ ಅಂತಾ ಕರೆದರು. ಇನ್ನೂ ಏನ್ರಿ ಹೇಳಿಸಿಕೊಳ್ಳಬೇಕು ನಾವು? ಕಾಂಗ್ರೆಸ್ ನಾಯಕರು ಎಲ್ರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಂಸ್ಕೃತಿ, ಸಭ್ಯತೆ ಎಂದ್ರೆ ಏನು ಅಂತಾ ನಾನು ಪಾಠ ಮಾಡ್ತೀನಿ. ಏನೂ ಮಾತನಾಡಬೇಕು ಅಂತಾ ನಾನು ಹೇಳ್ತಿನಿ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಸಭ್ಯತೆ ಅಂದ್ರೆ ಏನು ಎಂಬುವುದನ್ನು ನೀವೂ ತಿಳಿದುಕೊಳ್ಳಿ. ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಮೋದಿಯವರಿಗೆ ಏಕವಚನದಲ್ಲಿ ಏನೆಲ್ಲಾ ಮಾತಾಡಿದ್ದರು ಗೊತ್ತಿಲ್ವಾ? ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ?ಅದೆಲ್ಲಾ ನಮಗೆ ಗೊತ್ತಿಲ್ಲ, ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು ಎಂದು ಹೇಳಿದರು.

ಅನಂತ್ ಕುಮಾರ್ ಹೆಗಡೆ ಅವರದ್ದು ವೈಯಕ್ತಿಕ ಹೇಳಿಕೆ, ಪಕ್ಷದ್ದಲ್ಲ: ಸಂಸದರಿಗೆ ಕೈಕೊಟ್ರಾ ರಾಜ್ಯಧ್ಯಕ್ಷ ವಿಜಯೇಂದ್ರ!

ಇದು ನನ್ನ ವೈಯಕ್ತಿಕ ಹೇಳಿಕೆ ಬೈಟ್ ಕಟ್‌ ಮಾಡದೇ ಹಾಕಿಕೊಳ್ಳಿ: ಇನ್ನು ಎಲ್ಲ ಮಾಧ್ಯಮಗಳು ಕೂಡ ನಾನು ಹೇಳಿದಷ್ಟನ್ನು ರಿಕಾರ್ಡ್ ಮಾಡಿಕೊಳ್ಳಿ ಹಂಗೆ ಹಾಕಿಕೊಳ್ಳಿ. ನೀವು ನನ್ನ ಹೇಳಿಕೆಯನ್ನು ಕಟ್ ಮಾಡಿದ್ರೆ, ನಾನು ನನ್ನ ಸೋಶಿಯಲ್ ಮಿಡಿಯಾದಲ್ಲಿ ಬಿಡ್ತೇನೆ. ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ಹೇಳಿಕೆ, ಇದು ಪಕ್ಷದ ಹೇಳಿಕೆ ಅಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದು ಹೇಳಿದರು. ಈ ಮೂಲಕ ತಮ್ಮ ಬೆಂಬಲಕ್ಕೆ ರಾಜ್ಯಾಧ್ಯಕ್ಷ ನಿಂತುಕೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

click me!