
ಹಾವೇರಿ(ಜ.16): ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಕೊಡುಗೆ ಏನು?. ಅವರು ಏನಾದರೂ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರಾ? ಬಡ ವರ ಕಷ್ಟವನ್ನು ಕೇಳಿದ್ದಾರಾ? ಇದೀಗ ಲೋಕಸಭೆ ಚುನಾವಣೆ ಬಂದಿರುವುದರಿಂದ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. ತಾಲೂಕಿನ ನರಸೀಪುರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ಸಂಸ್ಕೃತಿ' ಎಂಬ ಪದವಿದೆ ಎಂಬುದು ಗೊತ್ತಾಯಿತಲ್ಲ ಎಂಬ ಸಂಸದರ ಟೀಕೆಗೆ ಪ್ರತಿಕ್ರಿಯಿಸಿ, ಅನಂತಕುಮಾರ ಹೆಗಡೆ ಅವರು ಇಷ್ಟು ದಿನ ಎಲ್ಲಿದ್ದರು? ಅವರ ಪತ್ತೆಯೇ ಇರಲಿಲ್ಲ. ಅವರನ್ನು ಬಹುಮತದಿಂದ ಆರಿಸಿ ಕಳುಹಿಸಿದ ಕ್ಷೇತ್ರದ ಜನರಿಗೆ ಏನಾದರೂ ಸಹಾಯ ಮಾಡಿದ್ದಾರಾ? ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರಿಂದ ರಾಜಕೀಯವಾಗಿ ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧವೂ ಹರಿಹಾಯ್ದರು.
ಟಿಪ್ಪುವಿನ ಹೆಸರನ್ನು ಬಳಸಿ ಸಿದ್ದು ರಾಜಕಾರಣ: ಸಂಸದ ಅನಂತಕುಮಾರ ಹೆಗಡೆ
• ಲೋಕಸಭೆ ಚುನಾವಣೆ ಬಂದಿರುವುದರಿಂದ ಅನಂತ್ ಕುಮಾರ್ ಹೆಗಡೆ ಏನೇನೋ ಮಾತನಾಡುತ್ತಿದ್ದಾರೆ
. ಬಹುಮತದಿಂದ ಆರಿಸಿ ಕಳುಹಿಸಿದ ಉತ್ತರ ಕನ್ನಡ ಜನರಿಗೆ ಅವರು ಏನು ಸಹಾಯ ಮಾಡಿದ್ದಾರೆ?
• ಕ್ಷೇತ್ರದ ಬಡವರ ಕಷ್ಟ ಕೇಳಿದ್ದಾರಾ? ಕ್ಷೇತ್ರಕ್ಕೆ ಏನಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರಾ?
• ಕೇಂದ್ರ ಸಚಿವ ಜೋಶಿಯವರು ಅನಂತ್ ಹೆಗಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರಿಗೂ ಸಂಸ್ಕೃತಿ ಇಲ್ಲ
• ಸಂಸ್ಕೃತಿ ಎಂದರೆ ಮನುಷ್ಯತ್ವ, ಮನುಷ್ಯಗೆ ಮನುಷ್ಯತ್ವವೇ ಮುಖ್ಯ: ಟೀಕಾ ಪ್ರಹಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.