ಕಾಂಗ್ರೆಸ್ ನಾಯಕರು ರಾಮಮಂದಿರ, ಹಿಂದೂ ಸಮಾಜದ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ರು. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? ಕೇವಲ 20% ಮತಕ್ಕಾಗಿ ಜೊಲ್ಲು ಸುರಿಸುತ್ತಾರೆ.
ಉತ್ತರ ಕನ್ನಡ (ಜ.16): ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ರಾಮ ಮಂದಿರ ಬಗ್ಗೆ ಎಷ್ಟು ಅವಹೇಳನಕಾರಿಯಾಗಿ ಮಾತಾಡಿದರು. ಹಿಂದೂ ಸಮಾಜದ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ರು. ಯಾಕೆ ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? ಕೇವಲ 20% ಮತಕ್ಕಾಗಿ ಎಷ್ಟೊಂದು ಜೊಲ್ಲು ಸುರಿಸುತ್ತಾ ಮಾತನಾಡುತ್ತಾರೆ. 80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರಾಮ ಮಂದಿರ ಹಾಗೂ ಹಿಂದೂ ಸಮಾಜದ ಬಗ್ಗೆ ಎಷ್ಟು ಅವಹೇಳನಕಾರಿಯಾಗಿ ಮಾತಾಡಿದರು. ಯಾಕೆ ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? ಕೇವಲ 20% ಮತಕ್ಕಾಗಿ ಎಷ್ಟೊಂದು ಜೊಲ್ಲು ಸುರಿಸುತ್ತಾ ಮಾತನಾಡುತ್ತಾರೆ. 80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಕಿಡಿಕಾರಿದರು.
undefined
ಅನಂತ್ ಕುಮಾರ್ ಹೆಗಡೆ ಅವರದ್ದು ವೈಯಕ್ತಿಕ ಹೇಳಿಕೆ, ಪಕ್ಷದ್ದಲ್ಲ: ಸಂಸದರಿಗೆ ಕೈಕೊಟ್ರಾ ರಾಜ್ಯಧ್ಯಕ್ಷ ವಿಜಯೇಂದ್ರ!
ನನ್ನ ಧ್ವನಿ ಇದೆ ಏಕವಚನದಲ್ಲಿ ನೀವೂ ಮಾತನಾಡಿದ್ದೂ ಸರಿ ಆಗಿದ್ದರೆ, ನಾನು ಮಾತನಾಡಿದ್ದೂ ಕೂಡಾ ಸರಿ. ಯಾರೂ ನನ್ನ ಒಪ್ಕೊತಾರೆ ಬಿಡ್ತಾರೊ ಗೊತ್ತಿಲ್ಲ, ಆ ದೇವರು ಒಪ್ಕೊಳ್ತಾನೆ. ಹಿಂದೂ ಸಮಾಜದ ಜನರು ಒಪ್ಪಿಕೊಳ್ಳುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ನೋಡಲಿ ಯಾರೂ ಎಏನೂ ಅಂತಾ ಗೊತ್ತಾಗಲಿ. ಸಂಸ್ಕೃತಿ ಬಗ್ಗೆ ಮಾತನಾಡುವವ ಸಿದ್ಧರಾಮಯ್ಯನವರೇ ನನ್ನ ಮುಂದೆ ಬರಲಿ. ಲೈವ್ ಡಿಬೆಟ್ ಮಾಡೋಣ ಎಂದು ಸವಾಲು ಹಾಕಿದರು.
ಇವರು ನಾಲ್ಕೂವರೆ ವರ್ಷ ಎಲ್ಲಿದ್ದರೋ ಕುಂಭಕರ್ಣ ಎಂದು ಕಾಂಗ್ರೆಸ್ ಟೀಕೆ ಮಾಡಿದೆ, ಇದಕ್ಕೆಲ್ಲಾ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ. ಎಲ್ಲದಕ್ಕೂ ಉತ್ತರ ಕೊಡ್ತೇನೆ, ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟಿಕೊಳ್ಳುವ ಪ್ರಶ್ನೆ ಇಲ್ಲ. ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ. ಆರೋಗ್ಯದಲ್ಲಿ ಯಾವುದೇ ಸಂಶಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ, ಗೆಲ್ಲಿಸುತ್ತೇವೆ. ನನ್ನ ಟಿಕೆಟ್ ಬಗ್ಗೆ ಬೇರೇಯವರಿಗ್ಯಾಕೆರೀ ಚಿಂತೆ. ನನ್ನ ಟಿಕೆಟ್ ಬಗ್ಗೆ ನನಗೆ ಚಿಂತೆ ಆಗಬೇಕು. ಟಿಕೆಟ್ ಬಗ್ಗೆ ಯೋಚನೆ ಮಾಡೋಕೆ ಹೈಕಮಾಂಡ್ ಇದೆ, ನನ್ನ ಟಿಕೆಟ್ ಬಗ್ಗೆ ಬೇರೆಯವರಿಗ್ಯಾಕೆ ಚಿಂತೆ? ಅವರ ಕೆಲಸ ಅವರು ನೋಡಿಕೊಳ್ಳಲಿ ಎಂದು ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.
ಉತ್ತರ ಕನ್ನಡಕ್ಕಾಗಿ ಅನಂತ ಕುಮಾರ್ ಹೆಗಡೆ ಏನು ಮಾಡಿದ್ದಾರೆ?: ಸಿಎಂ ಸಿದ್ದರಾಮಯ್ಯ
ಇದು ನನ್ನ ವೈಯಕ್ತಿಕ ಹೇಳಿಕೆ ಬೈಟ್ ಕಟ್ ಮಾಡದೇ ಹಾಕಿಕೊಳ್ಳಿ: ಇನ್ನು ಎಲ್ಲ ಮಾಧ್ಯಮಗಳು ಕೂಡ ನಾನು ಹೇಳಿದಷ್ಟನ್ನು ರಿಕಾರ್ಡ್ ಮಾಡಿಕೊಳ್ಳಿ ಹಂಗೆ ಹಾಕಿಕೊಳ್ಳಿ. ನೀವು ನನ್ನ ಹೇಳಿಕೆಯನ್ನು ಕಟ್ ಮಾಡಿದ್ರೆ, ನಾನು ನನ್ನ ಸೋಶಿಯಲ್ ಮಿಡಿಯಾದಲ್ಲಿ ಬಿಡ್ತೇನೆ. ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ಹೇಳಿಕೆ, ಇದು ಪಕ್ಷದ ಹೇಳಿಕೆ ಅಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದು ಹೇಳಿದರು. ಈ ಮೂಲಕ ತಮ್ಮ ಬೆಂಬಲಕ್ಕೆ ರಾಜ್ಯಾಧ್ಯಕ್ಷ ನಿಂತುಕೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.