ತಿಂಗಳಲ್ಲಿ 1 ವಾರ ಕೆಸಿಆರ್‌ ಇನ್ನು ದಿಲ್ಲಿಯಲ್ಲಿ ಬಿಡಾರ

Published : Dec 18, 2022, 07:14 AM IST
ತಿಂಗಳಲ್ಲಿ 1 ವಾರ ಕೆಸಿಆರ್‌ ಇನ್ನು ದಿಲ್ಲಿಯಲ್ಲಿ ಬಿಡಾರ

ಸಾರಾಂಶ

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಬದಲಿಸಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ (ಕೆಸಿಆರ್‌) ಅವರು ಇನ್ನು ಮುಂದೆ ತಿಂಗಳಲ್ಲಿ ಒಂದು ವಾರವನ್ನು ದೆಹಲಿಯಲ್ಲಿ ಕಳೆಯಲಿದ್ದಾರೆ.

ಹೈದರಾಬಾದ್‌: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಬದಲಿಸಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ (ಕೆಸಿಆರ್‌) ಅವರು ಇನ್ನು ಮುಂದೆ ತಿಂಗಳಲ್ಲಿ ಒಂದು ವಾರವನ್ನು ದೆಹಲಿಯಲ್ಲಿ ಕಳೆಯಲಿದ್ದಾರೆ. ಪಕ್ಷದ ರಾಷ್ಟ್ರೀಯ ಕಚೇರಿ ಉದ್ಘಾಟನೆ ಸಲುವಾಗಿ ದೆಹಲಿಯಲ್ಲಿ ಒಂದು ವಾರದಿಂದ ಬೀಡುಬಿಟ್ಟಿದ್ದ ಕೆಸಿಆರ್‌ ಶುಕ್ರವಾರ ಹೈದರಾಬಾದ್‌ಗೆ ಮರಳಿದ್ದಾರೆ. 

ದೆಹಲಿ ವಾಸ್ತವ್ಯದ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರು ಹಾಗೂ ರೈತ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಜನವರಿಯಿಂದ ತಿಂಗಳಲ್ಲಿ ಒಂದು ವಾರ ದೆಹಲಿಯಲ್ಲಿರುತ್ತೇನೆ. ತೆಲಂಗಾಣದ ಬಜೆಟ್‌ ಅಧಿವೇಶನ ಮಾರ್ಚ್‌ನಲ್ಲಿ ನಡೆಯಲಿದ್ದು, ಆನಂತರ ತಿಂಗಳಲ್ಲಿ 2 ವಾರ ದೆಹಲಿಯಲ್ಲಿ ಲಭ್ಯ ಇರುತ್ತೇನೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ. 2023ರ ಡಿಸೆಂಬರ್‌ಗೆ ತೆಲಂಗಾಣ ವಿಧಾನಸಭೆ ಹಾಗೂ 2024ರ ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಬೇಕಿದೆ. ಹೀಗಾಗಿ ಎರಡೂ ಚುನಾವಣೆಗಳತ್ತ ಸಮಾನ ಗಮನಹರಿಸಲು ಹೈದರಾಬಾದ್‌-ದೆಹಲಿ ಮಧ್ಯೆ ಓಡಾಡುವುದು ಕೆಸಿಆರ್‌ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ ಕವಿತಾ ವಿಚಾರಣೆ

ಟಿಆರ್‌ಎಸ್‌ ಈಗ ಅಧಿಕೃತವಾಗಿ ಬಿಆರ್‌ಎಸ್‌, ರಾಜ್ಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!