ಐಟಿ ದಾಳಿ ವೇಳೆ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅದು ಬಿಜೆಪಿ ನಾಯಕರಿಗೆ ಸೇರಬೇಕಾದ ಹಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಮೈಸೂರು (ಅ.15): ಐಟಿ ದಾಳಿ ವೇಳೆ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅದು ಬಿಜೆಪಿ ನಾಯಕರಿಗೆ ಸೇರಬೇಕಾದ ಹಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು. ಮೈಸೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಐಟಿ ದಾಳಿ ಆಗುವುದು ಸಾಮಾನ್ಯ. ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿದೆ. ನಾಲ್ಕು ಗಂಟೆ ಹಿಂದೆ ಆ ಹಣ ಎಲ್ಲಿತ್ತು? ಯಾವ ಪಕ್ಷದವರು ಕೊಟ್ಟರು ಯಾರಿಗಾಗಿ ಇಟ್ಟುಕೊಂಡಿದ್ದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಅದು ಬಿಜೆಪಿ ನಾಯಕರಿಗೆ ಸೇರಬೇಕಾದ ಹಣ. ಆ ಹಣದ ಮೂಲ ಯಾವುದು ಅದನ್ನು ತಿಳಿಸಿ ಕೊಡಬೇಕು. ಆ ಹಣದ ವಿಚಾರದಲ್ಲಿ ಇಲ್ಲ ಸಲ್ಲದ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್, ಮಹಿಷ ದಸರಾ ವಿರೋಧಿಸಿ ಅದನ್ನು ಅದ್ದೂರಿಯಾಗಿ ಮಾಡಲು ಸಹಕರಿಸಿದರು. ಬರೀ ಕಿಡಿ ಹತ್ತಿಸುವ ಕೆಲಸವನ್ನೇ ಮಾಡುತ್ತಾ ಬಂದಿದ್ದಾರೆ ಅದನ್ನು ಬಿಟ್ಟು ಅವರ ಕೊಡುಗೆ ಮೈಸೂರಿಗೆ ಏನು ಇಲ್ಲ ಎಂದು ಕಿಡಿಕಾರಿದರು.
undefined
ನಾಯಕನಿಲ್ಲದ ಬಿಜೆಪಿ ಶಿಥಿಲವಾಗುತ್ತಿದೆ: ಆಯನೂರು ಮಂಜುನಾಥ್ ವ್ಯಂಗ್ಯ
ಕಾಂಗ್ರೆಸ್ ಸರ್ಕಾರ ಯಾವ ಜಾತಿಯನ್ನು ನಿರ್ಲಕ್ಷಿಸಿಲ್ಲ: ಕಾಂಗ್ರೆಸ್ ಸರ್ಕಾರ ಯಾವ ಜಾತಿಯನ್ನು ನಿರ್ಲಕ್ಷಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಆಧಾರದ ಮೇಲೆ ಹುದ್ದೆ ಕೊಡಲಾಗುವುದಿಲ್ಲ. ಅಲ್ಲದೆ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಕ್ಕೆ ನಿಯೋಜಿಸಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು. 40 ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿ 10 ಲಿಂಗಾಯತ, 41 ವಿವಿಗಳ ಕುಲಪತಿಗಳ ಪೈಕಿ 14 ಲಿಂಗಾಯತರು, ಕರ್ನಾಟಕದ 87 ಐಎಎಸ್ ಅಧಿಕಾರಿಗಳಲ್ಲಿ 22 ಲಿಂಗಾಯತರು, ನಾಲ್ವರು ಜಿಲ್ಲಾಧಿಕಾರಿಗಳಾಗಿದ್ದಾರೆ. 10 ಜನರು ಜಿಪಂ ಸಿಇಒಗಳಾಗಿದ್ದಾರೆ. 439 ಕೆಎಎಸ್ ಶ್ರೇಣಿಯ ಅಧಿಕಾರಿಗಳಿದ್ದಾರೆ. ಇವರ ಪೈಕಿ 102 ಲಿಂಗಾಯತರಿದ್ದಾರೆ ಎಂದು ವಿವರಿಸಿದರು.
ಹೌಸಿಂಗ್ ಬೋರ್ಡ್, ತೋಟಗಾರಿಕೆ, ಕೃಷಿ, ಕ್ರೆಡಾಲ್, ಸೆಸ್ಕ್, ಬೆಸ್ಕಾಂ, ನೀರಾವರಿ ಮಂಡಲಿಗಳಲ್ಲಿ ಮುಖ್ಯಸ್ಥ ಸ್ಥಾನಗಳಲ್ಲಿ ಲಿಂಗಾಯತರಿದ್ದಾರೆ. ಇವು ಆಯಕಟ್ಟಿನ ಹುದ್ದೆಗಳಲ್ಲವೇ? ಎಂದು ಪ್ರಶ್ನಿಸಿದರು. ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೋ ಧಿಕ್ಕು ತಪ್ಪಿಸುತ್ತಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದೆ. ನಿಮ ಖುಷಿಗೋ ತೆವಲಿಗೋ ಹೇಳಿಕೆ ಕೊಟ್ಟು ಜೆಡಿಎಸ್- ಬಿಜೆಪಿಗೆ ಆಹಾರ ಕೊಡಬೇಡಿ. ಅಸಮಾಧಾನ ಇದ್ದರೆ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಹೇಳಿದರು.
ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ
ಕಾಂಗ್ರೆಸ್ ಸರ್ಕಾರ ಪ್ರತಿ ಸಮುದಾಯವನ್ನೂ ಒಟ್ಟಿಗೆ ಕೊಂಡೊಯ್ಯುತ್ತಿದೆ. ಸಿದ್ದರಾಮಯ್ಯ ಎಂದೂ ಜಾತಿ ರಾಜಕೀಯ ಮಾಡಿಲ್ಲ. ಕುರುಬರೇ ಸರ್ಕಾರ ನಡೆಸುತ್ತಿರುವುದು ಎನ್ನುವುದು ತಪ್ಪು. ಮುಖಂಡರು ಭಿನ್ನಾಭಿಪ್ರಾಯ ಸೃಷ್ಟಿಸುವ ಹೇಳಿಕೆ ಕೊಡುವುದು ಸರಿಯಲ್ಲ ಎಂದರು. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅವರು ಟೀಕಿಸಿದರು.