ಸುಳ್ಳು ಭರವಸೆಗಳನ್ನು ನೀಡುವ ಪಕ್ಷ ನಮ್ಮದಲ್ಲ: ಸಚಿವ ಸತೀಶ್ ಜಾರಕಿಹೊಳಿ

By Kannadaprabha News  |  First Published Oct 15, 2023, 3:40 AM IST

ರಾಜ್ಯದಲ್ಲಿ ಜನಪರವಾದ ಆಡಳಿತ ನಮ್ಮದಾಗಿದೆ. ಇದನ್ನು ಸಹಿಸದವರು ಹೇಳುವ ಮಾತುಗಳಿಗೆ ಜನ ಬೆಲೆ ಕೊಡುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ಲೋಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ದೊಡ್ಡಬಳ್ಳಾಪುರ (ಅ.15): ರಾಜ್ಯದಲ್ಲಿ ಜನಪರವಾದ ಆಡಳಿತ ನಮ್ಮದಾಗಿದೆ. ಇದನ್ನು ಸಹಿಸದವರು ಹೇಳುವ ಮಾತುಗಳಿಗೆ ಜನ ಬೆಲೆ ಕೊಡುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ಲೋಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಅವರು ತಾಲೂಕಿಗೆ ಸಮೀಪದ ಮಾರಸಂದ್ರದ ಬಳಿ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಬ್ಲಾಕ್ ವತಿಯಿಂದ ಶನಿವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಹಂತ ಹಂತವಾಗಿ ಮುಂದಿನ ಐದು ವರ್ಷಗಳ ಆಡಳಿತದಲ್ಲಿ ಈಡೇರಿಸಲಿದ್ದಾರೆ. 

ಸುಳ್ಳು ಭರವಸೆಗಳನ್ನು ನೀಡುವ ಪಕ್ಷ ನಮ್ಮದಲ್ಲ, ನುಡಿದಂತೆ ನಡೆಯುವ ಪಕ್ಷ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಂತಹ ಕೆಲಸಗಳನ್ನು ರಾಜ್ಯದಲ್ಲಿ ಮಾಡಿ ತೋರಿಸಲಾಗುವುದು ಎಂದರು. ಕೆಪಿಸಿಸಿ ಮಾಧ್ಯಮ ವಕ್ತಾರ ಮಂಜುನಾಥ ಎಂ.ಅದ್ದೆ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಮೂಲಕ ಈ ನಾಡಿನಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುತ್ತಿರುವ ಹಾಗೂ ಅಂಬೇಡ್ಕರ್ ಅವರ ಸಂವಿಧಾನದಿಂದ ಮಾತ್ರ ಬಹುಜನರ ಏಳಿಗೆ ಸಾಧ್ಯವಾಗಲಿದೆ ಎನ್ನುವ ನಂಬಿಕೆ ಸತೀಶ್‌ ಜಾರಕಿಹೊಳಿ ಅವರದ್ದು. ಈ ನಾಡಿನ ಉನ್ನತ ಹುದ್ದೆಯನ್ನು ನಿರ್ವಹಿಸುವ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿರುವ ಪ್ರಮುಖರಾಗಿರುವ ಅವರು, ಇಡೀ ಮಾನ ಸಮುದಾಯ ಸಮಾನತೆಯಿಂದ ಬದುಕಬೇಕಿದೆ ಎನ್ನುವ ಆಶಯವನ್ನು ಹೊಂದಿದ್ದಾರೆ. 

Tap to resize

Latest Videos

undefined

ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ

ಸರ್ಕಾರದಲ್ಲಿ ಸದ್ದುಗದ್ದಲ ಇಲ್ಲದೆ ಕಾರ್ಯನಿರ್ವಹಿಸುತ್ತಿವುದು ಲೋಕೋಪಯೋಗಿ ಇಲಾಖೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸಚಿವ ಕೆ.ಎಚ್.ಮುನಿಯಪ್ಪ, ಹೆಸರಘಟ್ಟ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಾಗರಾಜಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣ, ಪ್ರಕಾಶ್, ಮುಖಂಡರಾದ ಸತೀಶ್ಸಾದೇನಹಳ್ಳಿ, ರಮೇಶ್, ರಾಜಾನುಕುಂಟೆ ಚಂದ್ರಶೇಖರ್, ಇಟ್ಟಗಲ್ಲಪುರ ಮುನಿಕೃಷ್ಣ, ವಿರೂಪಾಕ್ಷ, ಚಂದ್ರಶೇಖರ್ ಇತರರಿದ್ದರು.

ಶಾಮನೂರು ಹೇಳಿಕೆ ಸರಿಯಲ್ಲ: ‘ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಮನೂರು ಅವರ ನಡುವಿನ ವಿಚಾರ. ಇದನ್ನು ರಾಜ್ಯದ ಸಮಸ್ಯೆಯಾಗಿ ಬಿಂಬಿಸಲು ಸಾಧ್ಯವಿಲ್ಲ. ಯಾರೋ ನಾಲ್ಕು ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಸಿಕ್ಕಲಿ ಎಂದು ಮಾತನಾಡಲು ಆಗುವುದಿಲ್ಲ. ಈ ವಿಚಾರದಲ್ಲಿ ಶಾಮನೂರು ಅವರ ಹೇಳಿಕೆ ಸರಿಯಲ್ಲ’ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ಯಾಯ ಆದಾಗ ಎಲ್ಲ ಸಮಾಜದವರು ಮಾತನಾಡುತ್ತಾರೆ. ಇದು ಮುಖ್ಯಮಂತ್ರಿ ಹಾಗೂ ಅವರ ನಡುವಿನ ವಿಚಾರ. 

ನಾಯಕನಿಲ್ಲದ ಬಿಜೆಪಿ ಶಿಥಿಲವಾಗುತ್ತಿದೆ: ಆಯನೂರು ಮಂಜುನಾಥ್‌ ವ್ಯಂಗ್ಯ

ಸರ್ಕಾರದಲ್ಲಿ ಜಾತಿ ಆಧಾರದ ಮೇಲೆ ಹುದ್ದೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಶಾಮನೂರು ಅವರ ಹೇಳಿಕೆ ಸರಿಯಲ್ಲ. ಯಾರೋ ನಾಲ್ಕು ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಸಿಕ್ಕಿಲ್ಲ ಎಂದು ಮಾತನಾಡಬಾರದು. ಎಲ್ಲರಿಗೂ ಚಿಕ್ಕಪೇಟೆ, ಕಬ್ಬನ್‌ಪೇಟೆಯೇ ಬೇಕು ಎಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂತಹ ಹೇಳಿಕೆಗಳು ಹಿಂದೆಯೂ ಬಹಳಷ್ಟು ಸಲ ಬಂದಿವೆ. ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಹತ್ತಿರದವರು ಹಾಗೂ ಬಹಳ ಆಪ್ತರು. ಹೀಗಾಗಿ ಅವರ ಹೇಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ಇದನ್ನು ಅವರವರೇ ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಅದು ಅವರ ಖಾಸಗಿ ವಿಚಾರ ಎಂದು ಹೇಳಿದರು.

click me!