Karnataka Politics: ಸಾವಿನಲ್ಲೂ ಹಣ ಗಳಿಸುತ್ತಿರುವ ಬಿಜೆಪಿ ಸರ್ಕಾರ: ನಲಪಾಡ್‌

By Girish Goudar  |  First Published May 13, 2022, 12:20 PM IST

*   ಕೊರೋನಾ ಕಾಲದಲ್ಲಿ ಸರ್ಕಾರದಿಂದ ಭ್ರಷ್ಟಾಚಾರ
*  ಸರ್ಕಾರದ ವಿರುದ್ಧ ಹೋರಾಟ ನಡೆಸಲು ಎಲ್ಲಾ ರೀತಿಯ ಪ್ರಯತ್ನ 
*  ಯುವ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ದಾಖಲು


ಮಡಿಕೇರಿ(ಮೇ.13):  ಕೋವಿಡ್‌ನಿಂದ(Covid-19) ಬಲಿಯಾದವರಿಗೆ ಪರಿಹಾರ ನೀಡದೆ ಸುಳ್ಳು ಮಾಹಿತಿ ನೀಡಿ ಸಾವಿನಲ್ಲೂ ಹಣ ಗಳಿಸುವ ಕೆಲಸ ಬಿಜೆಪಿ(BJP) ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ನಲಪಾಡ್‌(Mohammed Haris Nalapad) ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ(Coronavirus) ಸಂಕಷ್ಟ ಕಾಲದಲ್ಲಿ ಸರ್ಕಾರ ಭ್ರಷ್ಟಾಚಾರವೆಸಗಿದೆ. ವಿಶ್ವ ಆರೋಗ್ಯ ಸಂಸ್ಥೆ(WHO) ವರದಿ ಭಾರತದಲ್ಲಿ(India) 47 ಲಕ್ಷ ಮಂದಿ ಕೋವಿಡ್‌ ನಿಂದ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ಕೋವಿಡ್‌ ನಿಂದಾಗಿ 4.7 ಲಕ್ಷ ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಸಾವಿನ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆ. ಪರಿಹಾರ ನೀಡಬೇಕೆಂಬ ಕಾರಣಕ್ಕೆ ಕಡಿಮೆ ಸಂಖ್ಯೆ ತೋರಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ ನೇರ ಹೊಣೆ. ಮೃತರ ಕುಟುಂಬಕ್ಕೆ ಸರ್ಕಾರ ಪರಿಹರ ನೀಡದೆ ಸಾವಿನಲ್ಲೂ ಹಣ ಗಳಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

Tap to resize

Latest Videos

ಬೆಂಟ್ಲಿ ಕಾರಿಗೆ ಬೆಚ್ಚಿಬಿದ್ದ ಗನ್‌ಮ್ಯಾನ್; ವಿಚಾರಣೆಯಲ್ಲಿ ಹೇಳಿದ ಇದಕ್ಕೆ ಕಾರಣ ನಲಪಾಡ್!

ಯುವಜನರ ಆತ್ಮಹತ್ಯೆ:

ಕೋವಿಡ್‌ ನೆಪದಲ್ಲಿ ಈಗಾಗಲೇ ದೇಶದಲ್ಲಿ 2 ಕೋಟಿ ಯುವರು ಉದ್ಯೋಗವನ್ನು ಕಳೆದುಕೊಂಡು ಸಾವಿಗೆ ಶರಣಾಗುತ್ತಿದ್ದಾರೆ. ಜತೆಗೆ ಕೋವಿಡ್‌ನಿಂದಾಗಿ ದೇಶದ ಜನ ನರಕ ಅನುಭವಿಸಿದ್ದು, ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದೀಗ ಕೋವಿಡ್‌ ನಾಲ್ಕನೇ ಅಲೆ ಎಂದು ಜನರನ್ನು ಹೆದರಿಸುತ್ತಿದ್ದು, ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ದೂರಿದರು.

Ramya vs Nalapad ಹಲ್ಲೆ ಕೇಸ್‌ನಲ್ಲಿ ಬೇಲ್ ಮೇಲಿರುವ ನಲಪಾಡ್‌ನಿಂದ ನನ್ನ ನೈತಿಕತೆ ಪಶ್ನೆ, ರಮ್ಯಾ ತರಾಟೆ!

ಶೇ.40 ಕಮಿಷನ್‌(40% Commission) ದಂಧೆ ರಾಜ್ಯ ವ್ಯಾಪಿ ನಡೆಯುತ್ತಿದ್ದು, ಸರ್ಕಾರದ ವಿರುದ್ಧ ಹೋರಾಟ ನಡೆಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದ ನಲಪಾಡ್‌, ಯುವ ಕಾಂಗ್ರೆಸ್‌(Congress) ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ದಾಖಲಿಸಲಾಗುತ್ತಿದೆ ಎಂದರು.

ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ಗೌಡ ಮಾತನಾಡಿ, ಕೊಡಗಿನ ಇಬ್ಬರು ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಗಮನ ಹರಿಸುವ ಬದಲು ಭ್ರಷ್ಟಾಚಾರಕ್ಕೆ ಅಡಿಗಲ್ಲು ಹಾಕಿಕೊಟ್ಟಿದ್ದಾರೆ. ಕೋವಿಡ್‌, ಪ್ರಾಕೃತಿಕ ವಿಕೋಪದ ಸಂದರ್ಭ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ವಸ್ತುಗಳನ್ನು ಪೂರೈಸಿದ್ದು, ಕೊಡಗಿನ ಜನತೆಯೊಂದಿಗೆ ಕೈಜೊಡಿಸುವ ಕೆಲಸವನ್ನು ಮಾಡಿದ್ದೇವೆ ಎಂದರು. ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹನೀಫ್‌, ನಾಪೋಕ್ಲು ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಶಿರಾಜ್‌, ಪ್ರಮುಖರಾದ ಅಶ್ರಫ್‌ ಇದ್ದರು.
 

click me!