Karnataka Politcs: ಡಿಕೆಶಿಗೆ ತಮ್ಮ ಮುಖಂಡರು, ಶಾಸಕರ ಮೇಲೂ ಅನುಮಾನ: ವಿ​ಜ​ಯೇಂದ್ರ

By Girish Goudar  |  First Published May 13, 2022, 5:56 AM IST

*  ಸಿಎಂ ಕುರ್ಚಿಗೆ ಡಿಕೆಶಿ ಕನಸು: ವಿಜಯೇಂದ್ರ ಪರೋಕ್ಷ ವ್ಯಂಗ್ಯ
*  ಸಂಪುಟ ಸೇರ್ಪಡೆ ವಿಚಾರಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ
*  ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ
 


ತುಮಕೂರು(ಮೇ.13):  ಕಾಂಗ್ರೆಸ್‌ನ ಮಹಾನ್‌ ನಾಯಕ ಅಂದುಕೊಂಡವರು ಕೇವಲ ಬಿಜೆಪಿಯವರ ವಿರುದ್ಧ ಮಾತ್ರ​ವಲ್ಲ, ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧವೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾ​ಧ್ಯಕ್ಷ ಬಿ.ವೈ.​ವಿ​ಜ​ಯೇಂದ್ರ(BY Vijayendra) ವ್ಯಂಗ್ಯ​ವಾ​ಡಿ​ದ್ದಾರೆ. ಈ ಮೂಲಕ ಪರೋ​ಕ್ಷ​ವಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿ​ವ​ಕು​ಮಾರ್‌(DK Shivakumar) ಕಾಲೆ​ಳೆ​ದಿ​ದ್ದಾ​ರೆ.

ನಗ​ರ​ದ​ಲ್ಲಿ ಗುರು​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ಕಾಂಗ್ರೆಸ್‌ನ(Congress) ಮಹಾನ್‌ ನಾಯ​ಕ​ರೊ​ಬ್ಬರು ಯಾವಾಗ ಮುಖ್ಯಮಂತ್ರಿ ಗಾದಿ ಮೇಲೆ ಕೂರುತ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಅವರು ತಮ್ಮ ಪಕ್ಷದವರ ವಿರು​ದ್ಧವೇ ಅನು​ಮಾನ ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ. ಕಾಂಗ್ರೆಸ್‌ ಪಕ್ಷದ ಒಳಜಗಳ ಮುಂದಿನ ದಿನ​ಗ​ಳಲ್ಲಿ ಬಿಜೆಪಿಗೆ ವರವಾಗಲಿದೆ ಎಂದ​ರು.

Tap to resize

Latest Videos

ಚುನಾವಣೆ ವರ್ಷವಾಗಿರೋ ಕಾರಣ ವಿರೋಧ ಪಕ್ಷದವರು ಬೇಕಾದಂತೆ ಮಾತನಾಡ್ತಾರೆ!

ನಾಯ​ಕರ ನಿರ್ಧಾ​ರ: 

ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಈಗಾಗಲೇ ನಿಭಾಯಿಸುತ್ತಾ ಇದ್ದೇನೆ. ಮುಂದೆಯೂ ನಿಭಾಯಿಸುತ್ತೇನೆ. ಸಚಿವ ಸಂಪುಟ(Cabinet Expansion) ಸೇರ್ಪಡೆಗೆ ಸಂಬಂಧಿಸಿ ರಾಜ್ಯ ನಾಯಕರ ಅಪೇಕ್ಷೆ ಏನಿದೆ ಎಂಬುದನ್ನು ಸಮಯ, ಸಂದರ್ಭ ನೋಡಿಕೊಂಡು ನಿರ್ಧಾರ ಮಾಡಲಾಗು​ತ್ತದೆ ಎಂದ​ರು.

ಮುಂದಿನ ಸಿಎಂ ವಿಜಯೇಂದ್ರಗೆ ಜೈ!

ಹರಿಹರದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ ಗೌಡ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆ​ಪಿ ರಾಜ್ಯ ಉಪಾ​ಧ್ಯಕ್ಷ ಬಿ.ವೈ.​ವಿ​ಜ​ಯೇಂದ್ರ ಅವ​ರಿಗೆ ದಾವ​ಣ​ಗೆರೆ ನಗ​ರದ ಹೊರ​ವ​ಲ​ಯ​ದಲ್ಲಿ ಅಭಿ​ಮಾ​ನಿ​ಗಳು ಅದ್ಧೂರಿ ಸ್ವಾಗತ ನೀಡಿ, ‘ಮುಂದಿನ ಮುಖ್ಯ​ಮಂತ್ರಿ ​ವಿ​ಜ​ಯೇಂದ್ರ​ ಅ​ವ​ರಿಗೆ ಜಯ​ವಾ​ಗಲಿ’ ಎಂಬ ಘೋಷಣೆ ಕೂಗಿದರು.

ಸಮಯ ನೋಡ್ಕಂಡು ವರಿಷ್ಠರ ನಿರ್ಧಾರ

ಸಚಿವ ಸಂಪುಟ ಸೇರ್ಪಡೆಗೆ ಸಂಬಂಧಿಸಿದಂತೆ ರಾಜ್ಯ ನಾಯಕರ ಅಪೇಕ್ಷೆ ಏನಿದೆ ಎಂಬುದನ್ನು ಸಮಯ, ಸಂದರ್ಭ ನೋಡಿಕೊಂಡು ನಿರ್ಧಾರ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಅವರು ತುಮಕೂರಿನಲ್ಲಿ(Tumakuru) ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ, ನಿಭಾಯಿಸ್ತಾ ಇದೀನಿ, ಮುಂದೆನು ನಿಭಾಯಿಸುವುದಾಗಿ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಲವೇ ಉತ್ತರ ನೀಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಶಿರಾ ಮತ್ತು ಕೆಆರ್‌ ಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದಕ್ಕೆ ಸಂತೋಷವಿದೆ ಎಂದರು. ಶಿವಕುಮಾರ ಸ್ವಾಮೀಜಿ ಅವರ ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಿಎಸ್‌ಐ ನೇಮಕಾತಿಯಲ್ಲಿ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ(BJP Government) ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ ಅವರು ಕಾಂಗ್ರೆಸ್‌ ಮುಖಂಡರು ಮೂರ್ಖರಿದ್ದಾರೆ ಎಂದು ಹರಿಹಾಯ್ದರು. 50ರಿಂದ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಚುನಾವಣೆ ಯಾವಾಗ ಬರುತ್ತೆ, ಮತ್ತೆ ಯಾವಾಗ ಅಧಿಕಾರಕ್ಕೆ ಬರುತ್ತೀವೋ ಎನ್ನುವ ಆತುರದಲ್ಲಿ ಹಗಲುಗನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗವುದಿಲ್ಲ ಎಂದ ಅವರು ಬಿಜೆಪಿ ಮತ್ತೆ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Karnataka Politics: ನುಗ್ಗೆಕೇರಿ ಘಟ​ನೆಗೆ ರಾಜ​ಕೀಯ ಬಣ್ಣ: ಬಿ.ವೈ ವಿಜಯೇಂದ್ರ

ಕಾಂಗ್ರೆಸ್‌ ಮಹಾನ್‌ ನಾಯಕರು ಅಂದುಕೊಂಡವರು, ಯಾವಾಗ ಮುಖ್ಯಮಂತ್ರಿ ಗಾದಿ ಮೇಲೆ ಕೂರುತ್ತೀವಿ ಅಂತಾ ಕನಸು ಕಾಣುತ್ತಿದ್ದಾರೆ. ಈ ಮಹಾನ್‌ ನಾಯಕರು ಕೇವಲ ಬಿಜೆಪಿ ಪಕ್ಷದವರ ವಿರುದ್ಧ ಮಾತ್ರವಲ್ಲ, ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧವೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷದ ಒಳಜಗಳ ಮತ್ತು ಪಕ್ಷದ ನಡುವೆ ಆವಿಶ್ವಾಸ ಬರುವ ದಿನಗಳಲ್ಲಿ ಬಿಜೆಪಿಗೆ ವರವಾಗುತ್ತೆ ಎಂದ ಅವರು ಈ ಕಾಂಗ್ರೆಸ್‌ ಮಹಾ ನಾಯಕರು ಯಾವುದೇ ರೀತಿಯ ರಿವೇಂಜ… ತೀರಿಸ್ಕೊಂಡರೂ ಕೂಡ ರಾಜ್ಯದ ಪ್ರಜ್ಞಾವಂತ ಜನರು ಇದೆಲ್ಲದನ್ನು ವೀಕ್ಷಣೆ ಮಾಡುತ್ತಾ ಇರುತ್ತಾರೆ. ಇವೆಲ್ಲವೂ ಬಿಜೆಪಿಗೆ ವರವಾಗುತ್ತದೆ ಎಂದರು.
 

click me!