ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಮತ್ತು ಸಚಿವ ಅಶ್ವತ್ಥನಾರಾಯಣ ಭೇಟಿ ವಿಚಾರದಲ್ಲಿ ರಾಜಕೀಯ ಹೇಳಿಕೆ-ಪ್ರತಿಹೇಳಿಕೆ ಗಳು ದಿನಂಪ್ರತಿ ಕೇಳಿಬರುತ್ತಿವೆ. ಈ ನಡುವೆ ತನ್ನ ಟ್ವೀಟ್ ಮೂಲಕ ಡಿಕೆಶಿಗೆ ನಟಿ ಕಂ ರಾಜಕಾರಣಿ ರಮ್ಯಾ ಡಿಚ್ಚಿ ಹೊಡದಿದ್ದರು! ಇದೀಗ ಡಿಕೆಶಿ ಪರ ಅವರ ಬಲಗೈ ಬಂಟ ಮೊಹಮ್ಮದ್ ನಲಪಾಡ್ ರಮ್ಯಾಗೆ ಚಾಟಿ ಬೀಸಿದ್ದಾರೆ.
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮೇ. 12): ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ (MB Patil) ಹಾಗೂ ಸಚಿವ ಅಶ್ವತ್ಥ್ ನಾರಾಯಣ್ (CN Ashwath Narayan) ಭೇಟಿ ವಿಚಾರದಲ್ಲಿ ರಾಜಕೀಯ ಹೇಳಿಕೆ-ಪ್ರತಿಹೇಳಿಕೆಗಳು ದಿನೇ ದಿನೇ ಕೇಳಿಬರುತ್ತಿದೆ. ಈ ನಡುವೆ ತನ್ನ ಟ್ವೀಟ್ ಮೂಲಕ ಡಿಕೆಶಿಗೆ (DKS) ನಟಿ ಕಂ ರಾಜಕಾರಣಿ ರಮ್ಯಾ (Ramya) ಡಿಚ್ಚಿ ಹೊಡದಿದ್ದರು! ಇದೀಗ ಡಿಕೆಶಿ ಪರ ಅವರ ಬಲಗೈ ಬಂಟ ಮೊಹಮ್ಮದ್ ನಲಪಾಡ್ (Mohammed Nalapad) ರಮ್ಯಾಗೆ ಚಾಟಿ ಬೀಸಿದ್ದಾರೆ.
ಈ ಟ್ವೀಟ್ ವಾರ್ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಯುವ ಕಾಂಗ್ರೆಸ್ ಅಧ್ಯಕ್ಷ (Youth Congress President) ಮೊಹಮ್ಮದ್ ನಲಪಾಡ್, ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ, ಇಷ್ಟು ತಿಂಗಳು ಇಷ್ಟು ವರ್ಷ ರಮ್ಯಾ ಎಲ್ಲಿದ್ದರೂ ಏನೋ? ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಪ್ರತ್ಯಕ್ಷರಾದ್ರೋ ಗೊತ್ತಿಲ್ಲ, ರಮ್ಯಾ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ? ಎಂದು ಪ್ರಶ್ನಿಸಿದ್ದರು.
ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ . ರಮ್ಯಾ ಬಂದದ್ದು ಯಾಕೆ; ಹೀಗೆಲ್ಲ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಮೊದಲು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರು ಬಹಳ ಕ್ಲಿಯರಾಗಿ ಇವತ್ತು ಒಂದು ವಿಚಾರ ಸ್ಪಷ್ಟಪಡಿಸಿದ್ದಾರೆ. ಎಂಬಿ ಪಾಟೀಲ್ ಅಶ್ವತ್ ನಾರಾಯಣ್ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ, ಹೌದಪ್ಪ.. ಬಂದಿರಬಹುದು ರಕ್ಷಣೆಗೋಸ್ಕರ ಎಂದಷ್ಟೇ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಎಂಬಿ ಪಾಟೀಲ್ ಅಶ್ವತ್ಥ್ ನಾರಾಯಣ ಭೇಟಿಗೆ ಹೋಗಿದ್ದಾರೆ ಎಂದು ಎಲ್ಲೂ ಡಿಕೆ ಶಿವಕುಮಾರ್ ಹೇಳಿಲ್ಲ ಎಂದು ನಲಪಾಡ್ ಸ್ಪಷ್ಟಪಡಿಸಿದರು.
ರಮ್ಯಾಗೆ ಅಟೆಂಶನ್ ಸೀಕಿಂಗ್ ಪ್ರಾಬ್ಲೆಮ್: ಕಾಂಗ್ರೆಸ್‌ಪಕ್ಷದಲ್ಲಿ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದಾರೆ. ಡಿಕೆಶಿ ಎಂ.ಬಿ.ಪಾಟೀಲ್ ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ. ಸುಮ್ಮನೆ ಡಿಸ್ಟರ್ಬೆನ್ಸ್ ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಮ್ಯಾಗೆ ಅಟೆಂಶನ್ ಸೀಕಿಂಗ್ ಸಮಸ್ಯೆ ಇರ್ಬೇಕು ರಮ್ಯಾಗೆ ಸಂಥಿಂಗ್ ಅಟೆಂಶನ್ ಸಿಕಿಂಗ್ ಇದೆ ಅನ್ಸುತ್ತೆ! ರಮ್ಯಾ ನಾನು ಇನ್ನೂ ಇದ್ದೀನಿ ಎಂದು ತೋರಿಸಿ ಕೊಳ್ಳುತ್ತಿರಬಹುದು.ನನಗೂ ಒಂದು ಕುರ್ಚಿ ಕೊಡಿ ಎಂದು ಟವಲ್ ಹಾಕುತ್ತಿರಬಹುದು. ಈ ವಿಚಾರಕ್ಕೂ ರಮ್ಯಾಗೂ ಏನು ಸಂಬಂಧ? ರಮ್ಯಾ ಅವರ ಹಳೆಯ ಟ್ವೀಟ್ ಗಳನ್ನು ತೆಗೆದುಕೊಂಡು ನೋಡಿ ,ಯಾವುದೋ ಸಿನಿಮಾಗಳ ಬಗ್ಗೆ ಮಾತ್ರ ಟ್ವೀಟ್ ಮಾಡಿಕೊಂಡಿದ್ದರು.. ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್ ಗಳನ್ನು ಮಾಡಿಲ್ಲ. ಈಗ ಇದ್ದಕ್ಕಿದ್ದಂತೆ ಎಚ್ಚರವಾಗಿ ದ್ದಾರೆ ಎಂದರು. ರಮ್ಯಾ ಸಡನ್ನಾಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೆ. ಇದರಲ್ಲಿ ಯಾವುದೋ ಒಳ ಉದ್ದೇಶ ಇದೆ. ನಟಿ ರಮ್ಯಾಗೆ ಯಾರು ಹೆಚ್ಚು ಇಂಪಾರ್ಟೆನ್ಸ್ ಕೊಡಬಾರದು ಎಂದು ಕೈಮುಗಿದು ಮಾಧ್ಯಮದವರಲ್ಲಿ ಕೇಳಿಕೊಂಡರು.
FREE LPG CYLINDERS ಅಂತ್ಯೋದಯ ಕಾರ್ಡ್‌ದಾರರಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ!
ರಮ್ಯಾ ಅವರು ಒಳ್ಳೆಯವರೇ,ಚಿಕ್ಕ ವಯಸ್ಸಿನಲ್ಲಿ ಸಂಸದರಾದವರು. ರಮ್ಯಾ ಈಗಾಗಲೇ ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ. ನಾನು ರಮ್ಯಾ ಅವರ ವಿರುದ್ಧ ಇಲ್ಲ, ನಟಿ ರಮ್ಯಾ ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು. ನಟಿ ರಮ್ಯಾ ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಹೇಳಿದರು.
ಹೆಂಡತಿಗೆ ಹೊಡೆಯೋದ್ರಲ್ಲಿ ಕರ್ನಾಟಕವೇ ನಂಬರ್ 1
ಬಂಡೆನ ಹಂಗೆಲ್ಲ ಒಡಿಯೋಕೆ ಆಗಲ್ಲ: ಡಿಕೆ ಶಿವಕುಮಾರ್ ಗೆ ಪಕ್ಷದೊಳಗೆ ಡ್ಯಾಮೇಜ್ ಮಾಡುವ ಕೆಲಸ ಆಗುತ್ತಿದೆಯಾ? ಎಂಬ ಪ್ರಶ್ನೆಗೆ ಮಹಮ್ಮದ್ ನಲಪಾಡ್ ಉತ್ತರಿಸಿದರು.ಯಾರು ಮುಂದಿನ ಮುಖ್ಯಮಂತ್ರಿ ಅನ್ನೋದು ಮುಖ್ಯ ಅಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಇದ್ದರೆ ಮಾತ್ರ ರಾಜ್ಯ ಮತ್ತು ರಾಷ್ಟ್ರದಲ್ಲಿ ಜನಪರ ಕೆಲಸ ಆಗಲು ಸಾಧ್ಯ.ಕಾಂಗ್ರೆಸ್ ಪಕ್ಷ ಇದ್ದಿದ್ದರೆ ದೇಶದ ನಿರುದ್ಯೋಗ ಸಮಸ್ಯೆ ಇರುತ್ತಿರಲಿಲ್ಲ. ಅಂದ್ರು, ಇಷ್ಟಕ್ಕೂ ಬಂಡೆ ನಾ ಹಂಗೆಲ್ಲಾ ಒಡೆಯಕ್ಕೆ ಆಗಲ್ಲ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು.