ಮತಾಂತರ ನಿಷೇಧ ಕಾಯ್ದೆ ಬಹಳ ವರ್ಷಗಳಿಂದ ಕೂಗಾಗಿತ್ತು. ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಈ ಕಾಯ್ದೆ ಜಾರಿಗೆ ತರುವುದು ಬಹಳಷ್ಟು ಅವಶ್ಯಕತೆ ಇದೆ. ಸುಗ್ರೀವಾಜ್ಙೆ ಮೂಲಕ ಜಾರಿ ಮಾಡಿರುವುದು ಸ್ವಾಗತಾರ್ಹ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ವರದಿ - ವರದರಾಜ್, ದಾವಣಗೆರೆ
ದಾವಣಗೆರೆ (ಮೇ12): ದಾವಣಗೆರೆ ಜಿಲ್ಲೆ ಹರಿಹರದಲ್ಲಿ (Harihara) ಬಿಜೆಪಿ ರಾಜ್ಯ ಉಪಾಧ್ಯಕ್ಷ (bjp state vice president) ಬಿವೈ ವಿಜಯೇಂದ್ರಗೆ (BY Vijayendra) ಅದ್ದೂರಿ ಸ್ವಾಗತ ದೊರೆತಿದೆ.ಹರಿಹರ ನಗರದಲ್ಲಿ ಮಾಜಿ ಶಾಸಕ ಬಿ ಪಿ ಹರೀಶ್ (BP Harish)ಹುಟ್ಟುಹಬ್ಬದ ಅಂಗವಾಗಿ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಬಿ ವೈ ವಿಜಯೆಂದ್ರಗೆ ಹೂವಿನ ಮಳೆಗೆರೆಯಲಾಗಿದೆ. ಹರಿಹರ ನಗರದ ಸರ್ಕಲ್ ನಿಂದ ಸಿದ್ದೇಶ್ವರ್ ಪ್ಯಾಲೇಸ್ ವರೆಗೂ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಜೆಸಿಬಿ ಮೂಲಕ ಪುಷ್ಪಿವೃಷ್ಟಿ ಮಾಡಿ ಅಭಿನಂದಿಸಲಾಗಿದೆ. ಡೊಳ್ಳು ಹೊಡೆದು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಜೈ ಜೈ ವಿಜಯೇಂದ್ರ ಎಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ ಕ್ಯಾಬಿನೆಟ್ ಲ್ಲಿ ಹಾಗೂ ಮುಂದಿನ ಚುನಾವಣೆಯಲ್ಲಿ ಈ ಬಾರಿ ಯುವಕರಿಗೆ ಪಕ್ಷದ ವರಿಷ್ಠರು ಹೆಚ್ಚು ಆದ್ಯತೆ ನೀಡಲಿದ್ದಾರೆ ಎಂದರು.
ಮತಾಂತರ ನಿಷೇಧ ಕಾಯ್ದೆ ಸ್ವಾಗತಿಸಿದ ವಿಜಯೇಂದ್ರ: ಮತಾಂತರ ನಿಷೇಧ ಕಾಯ್ದೆ ಬಹಳ ವರ್ಷಗಳಿಂದ ಕೂಗಾಗಿತ್ತು. ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಈ ಕಾಯ್ದೆ ಜಾರಿಗೆ ತರುವುದು ಬಹಳಷ್ಟು ಅವಶ್ಯಕತೆ ಇದೆ. ಸುಗ್ರೀವಾಜ್ಙೆ ಮೂಲಕ ಜಾರಿ ಮಾಡಿರುವುದು ಸ್ವಾಗತಾರ್ಹ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ: ಬಹಳಷ್ಟು ಶಾಸಕರು ಅಕಾಂಕ್ಷಿಗಳು ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ. ಇನ್ನೇರಡು ದಿನಗಳಲ್ಲಿ ಯಾರಿಗೆ ಕೊಡಬೇಕು ಎನ್ನುವುದು ತಿಳಿಸುತ್ತಾರೆ. ಯಡಿಯೂರಪ್ಪನವರು ಕೂಡ ಸಿಎಂ ಹೇಳಿದಂತೆ ಪುನರುಚ್ಚಾರ ಮಾಡಿದ್ದಾರೆ ಅಷ್ಟೇ. ಇನ್ನೆರೆಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು. ನಾನು ಸಹ ಸಚಿವ ಸ್ಥಾನ ಅಕಾಂಕ್ಷಿ. ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಆಗಿದ್ದೇನೆ. ಪಕ್ಷ ಏನೇ ಜವಾಬ್ದಾರಿ ನೀಡಿದರು ಅದನ್ನು ಸಂತೋಷದಿಂದ ಒಪ್ಪಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂದು ಒಪ್ಪಿಕೊಂಡರು.
ಮೈಸೂರು ಭಾಗದಲ್ಲಿ ಸ್ಪರ್ಧೆ ವಿಚಾರ: ಅದನ್ನು ಪಕ್ಷ ನಿರ್ಧಾರ ಮಾಡುತ್ತದೆ ಹೈ ಕಮಾಂಡ್ ಎಲ್ಲಿ ಹೇಳುತ್ತದೋ ಅಲ್ಲಿ ಸ್ಪರ್ಧಿಸುತ್ತೇನೆ.ಚುನಾವಣೆಯಲ್ಲಿ ಯುವಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದಿದ್ದಾರೆ.ಕೇಂದ್ರ ವರಿಷ್ಠರು ಕೂಡ ಇದರ ಬಗ್ಗೆ ಚರ್ಚೆ ಮಾಡ್ತಾರೆ.
ಕುಮಾರಸ್ವಾಮಿ ಹೆಸರು ಹೇಳಲಿ ಆಮೇಲೆ ಮಾತನಾಡುತ್ತೇನೆ: ಪಿಎಸ್ ಐ ಹಗರಣದಲ್ಲಿ ರಾಜಕೀಯ ಮುಖಂಡರ ಮಗ ಇದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಯಾರ ಬಗ್ಗೆ ಹೇಳ್ತಾರೆ ಗೊತ್ತಿಲ್ಲ.ಬರುವ ದಿನಗಳಲ್ಲಿ ಅವರ ಹೆಸರು ಹೇಳಲಿ ಎಂದು ಆಶಿಸುತ್ತೇನೆ.ಅವರು ಹೆಸರು ಹೇಳಲಿ ಅಮೇಲೆ ನಾನು ಮಾತನಾಡುತ್ತೇನೆ. ವಿರೋಧ ಪಕ್ಷಗಳಿಗೆ ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದೆ. ಚುನಾವಣೆ ವರ್ಷ ವಾಗಿರುವುದರಿಂದ ಮನಬಂದಂತೆ ಮಾಡುತ್ತಿದ್ದಾರೆ.ಮುಂದಿನ ಚುನಾವಣೆಯಲ್ಲಿ ಗದ್ದುಗೆ ಹಿಡಿಯಬೇಕು ಎನ್ನುವ ಹಪಾಹಪಿಯಿಂದ ಹೀಗೆ ಮಾತನಾಡುತ್ತಾರೆ. ಚುನಾವಣೆ ವರ್ಷವಾದದ್ದರಿಂದ ಈ ರೀತಿಯಾಗಿ ಆರೋಪ ಸಹಜ. ಮತ್ತೆ ಬಿಜೆಪಿ ಅಧಿಕಾಕ್ಕೆ ಬಂದು ಇದಕ್ಕೆಲ್ಲ ಉತ್ತರ ನೀಡುತ್ತದೆ ಎಂದರು. ಐಜಿಪಿ ರವೀಂದ್ರನಾಥ್ ರಾಜೀನಾಮೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.