ಮೊದಲ ಬಾರಿ ಸಚಿವ ಸ್ಥಾನದ ಆಸೆ ಕೈಬಿಟ್ಟ ಶಾಸಕ ಕುಮಾರಸ್ವಾಮಿ!

By Suvarna News  |  First Published May 12, 2022, 8:47 PM IST

- ಎಂಟು ತಿಂಗಳಲ್ಲಿ ಸೀಟು ಬಿಸಿ ಮಾಡಬಹುದು ಅಷ್ಟೆ 
- ಕುರ್ಚಿ ಮೇಲೆ ಕೂರಬಹುದು ಅಷ್ಟೆ, ಕ್ರಾಂತಿಕಾರಿ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ
- ಸಚಿವ ಸ್ಥಾನ ಸಿಕ್ಕರೂ ಈಗ ಎಂಟು ತಿಂಗಳಲ್ಲಿ ಸಾಧನೆ ಮಾಡಲು ಆಗಲ್ಲ
- ಕುಮಾರಸ್ವಾಮಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ


ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ. 12) : ರಾಜ್ಯದಲ್ಲಿ ಸಚಿವ ಸಂಪುಟದ (Cabinet Circus) ಕಸರತ್ತು ನಡೆಯುತ್ತಿದೆ. ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲ್ಲೂ ನಾನು ಕೂಡ ಸಚಿವ ಸ್ಥಾನ ಆಕ್ಷಾಂಕಿ ಎಂದು ಹೇಳುತ್ತಿದ್ದ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ  ಕುಮಾರಸ್ವಾಮಿ (mudigere mla MP kumaraswamy)ಮೊದಲ ಬಾರಿ ಸಚಿವ ಸ್ಥಾನದ ಆಸೆ ಕೈಬಿಟ್ಟಿದ್ದಾರೆ. ಸಚಿವ ಸ್ಥಾನದ ಸೀಟು ಬಿಸಿ ಮಾಡಬಹುದಷ್ಟೆ ಸಾಧನೆ ಮಾಡಲಾಗದು ಎನ್ನುವ ಹತಾಶ ನುಡಿಗಳನ್ನು ಹೊರಹಾಕಿದ್ದಾರೆ. 

Latest Videos

undefined

ರಾಜ್ಯದಲ್ಲಿ ಸಂಪುಟ ವಿಸ್ತರಣೆಯ (Cabinet Expansion) ಕಸರತ್ತು ನಡೆಯುತ್ತಿದೆ. ಸಚಿವ ಸ್ಥಾನದ ಆಕ್ಷಾಂಕಿಗಳು ಈಗಾಗಲೇ ಸಚಿವ ಸ್ಥಾನಕ್ಕಾಗಿ ಒಂದು ಸುತ್ತಿನ ವರಷ್ಠರನ್ನು ಈಗಾಗಲೇ ಬಿಜೆಪಿ ಶಾಸಕರು ಭೇಟಿ ಮಾಡಿ ಲಾಬಿ ನಡೆಸಿದ್ದಾರೆ. ಪ್ರತಿಭಾರಿಯೂ ಸಚಿವಸ್ಥಾನದ ಕಸರತ್ತು ನಡೆಯುವಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ನಾನು ಕೂಡ ಸಚಿವಸ್ಥಾನ ಆಕ್ಷಾಂಕಿ, ಬಲಗೈ ಸಮುದಾಯಕ್ಕೆ ಆದ್ಯತೆ ನೀಡುವಂತೆ ಮನವಿಯನ್ನು ಮಾಡುತ್ತಿದ್ದರು.

ಅದಕ್ಕಾಗಿ ದೆಹಲಿ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದರೂ ಆದ್ರೆ ಭಾರೀ ಯಾಕೋ ಕುಮಾರಸ್ವಾಮಿ ಸಚಿವ ಸ್ಥಾನ ಆಸೆಯನ್ನು ಕೈ ಬಿಟ್ಟಿದ್ದಾರೆ.ಸಚಿವ ಸಂಪುಟ ವಿಸ್ತರಣೆಯಿಂದ ಸೀಟು ಬಿಸಿ ಮಾಡಬಹುದೇ ಹೊರತು ಸಾಧನೆ ಮಾಡಲಾಗದು ಎನ್ನುವ ಹತಾಶ ನುಡಿಗಳನ್ನು ಹೊರಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿ ಸಚಿವ ಸಂಪುಟ ವಿಸ್ತರಣೆ ವೇಸ್ಟ್ ಎಂದು ಏನೂ ಅಲ್ಲ ಆಸೆ ಇರುವವರಿಗೆ ಅನುಕೂಲ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಮಂತ್ರಿಗಿರಿಗಾಗಿ ಒತ್ತಡ ಮಾಡಲು ಹೋಗಲ್ಲ: ಎಂ.ಪಿ ಕೆ: ಮೂಡಿಗೆರೆ ಕ್ಷೇತ್ರದಿಂದ ಮೂರು ಭಾರೀ ಅಯ್ಕೆ ಆಗಿರುವ ಕುಮಾರಸ್ವಾಮಿ ಸಚಿವ ಸ್ಥಾನ ಪ್ರಬಲ ಆಕ್ಷಾಂಕಿ ಆಗಿದ್ದರು. ಇದೀಗ ಅವರ ಹತಾಶೆ ನುಡಿ ಸಚಿವನಾಗಿರುವುದರಿಂದ ಸಾಧನೆ ಮಾಡಲಾಗದು ಮಹತ್ವದ ಕ್ರಾಂತಿಕಾರಿ ಬದಲಾವಣೆ ಆಗದು ಕೇವಲ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು ಹೊರತು  ಸೀಟೂ ಬಿಸಿಯಾಗದು ಎಂದರು. ಸಚಿವ ಸ್ಥಾನ ಕೊಡಿ ಎಂದು ತಾನು ಕೇಳಿಲ್ಲ, ಕೊಡುವುದು ಬಿಡುವುದು ವರಿಷ್ಕರಿಗೆ ಬಿಟ್ಟದ್ದು ಮಂತ್ರಿಗಿರಿಗಾಗಿ ಒತ್ತಡ ಮಾಡಲು ಹೋಗಲ್ಲ .

ಕ್ಷೇತ್ರದಲ್ಲಿ ತುಂಬಾ ಕೆಲಸ ಇದೆ, ಸಚಿವ ಸ್ಥಾನ ಕೊಡೋದು-ಬಿಡೋದು ವರಿಷ್ಠರಿಗೆ ಬಿಟ್ಟದ್ದು:  ಸಚಿವಸ್ಥಾನದ ಲಾಬಿಗಾಗಿ ದೆಹಲಿಗೆ  ಹೋಗಿಲ್ಲ, ಬೇರೆ ಕೆಲಸದ ನಿಮ್ಮಿತ್ತ ಗಡ್ಕರಿ ಭೇಟಿಗೆ ಹೋಗಿದ್ದೆ ಅಷ್ಟೇ.ಮಂತ್ರಿಗಿರಿ ಬೇಡ ಅಂತಲ್ಲ,ಆಸೆ ಇರುವವರಿಗೆ ಮಾಡಲಿ ಎಂದರು.  ಕ್ಷೇತ್ರದ ಅಭಿವೃದ್ಧಿ ಕಡೆ ವಿಶೇಷ ಗಮನ ಹರಿಸಬೇಕಾಗಿದ್ದು ಈ ಹಿಂದೆ ಒಂದೆರಡು ಬಾರಿ ಸಚಿವ ಸ್ಥಾನಕ್ಕೆ ಪ್ರಯತ್ನಿಸಿ ನಿರಾಶರಾಗಿರುವ ಮೂಡಿಗೆರ ಶಾಸಕ ಎಂ. ಪಿ. ಕುಮಾರಸ್ವಾಮಿ ಈ ಬಾರಿಯೂ ಸಚಿವ ಸ್ಥಾನ ಸಿಗದು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದಂತಿದೆ.

click me!