ಡಿಕೆಶಿ, ಸಿದ್ದರಾಮಯ್ಯ ಮಧ್ಯೆ ಗುದ್ದಾಟವೂ ಇಲ್ಲ, ಮುದ್ದಾಟವೂ ಇಲ್ಲ: ನಲಪಾಡ್‌

By Suvarna NewsFirst Published Jul 19, 2022, 10:28 PM IST
Highlights

ಸಿದ್ದರಾಮಯ್ಯ ಅವರದ್ದು 75 ವರ್ಷದ ಜೀವನ ಸಾಧನೆ ಇದೆ. ಐದು ವರ್ಷ ಸಿಎಂ ಆದವರು ಅವರು ಹೀಗಾಗಿ ಅಭಿಮಾನಿಗಳು ಉತ್ಸವ ಮಾಡುತ್ತಿದ್ದಾರೆ: ನಲಪಾಡ್‌

ಗದಗ(ಜು.19):  ಯಾವದೋ ಒಂದು ಸಮಾಜದ ಬೆಂಬಲ ಕೇಳೋದು ತಪ್ಪಾ? ನಾನು ಮುಸಲ್ಮಾನ, ಮುಸಲ್ಮಾನರ ಸಪೋರ್ಟ್ ಕೇಳ್ತೇನೆ. ಡಿಕೆಶಿ ಮುಖ್ಯಮಂತ್ರಿ ಆಗೋದಕ್ಕೆ ಬೆಂಬಲ ಕೇಳಿಲ್ಲ, ಮುಂದೆ ಅವಕಾಶ ಇದೆ.. ಬೆಂಬಲಿಸಿ ಅಂತಾ ಕೇಳಿದ್ದಾರಷ್ಟೆ‌ ಅಂತ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ.  ಎಸ್.ಎಂ. ಕೃಷ್ಣ ಬಳಿಕ ಒಕ್ಕಲಿಗರೊಬ್ಬರಿಗೆ ಸಿಎಂ ಆಗುವ ಅವಕಾಶ ಇದೆ, ಸಮಾಜ ಅವಕಾಶ ತಪ್ಪಿಸಿಕೊಳ್ಳಬಾರದು ಅಂತ ಹೇಳುವ ಮೂಲಕ ಒಕ್ಕಲಿಗ ಸಮಾಜದ ಬೆಂಬಲ ಕೇಳಿದ್ದ ಡಿಕೆ ಶಿವಕುಮಾರ್ ಹೇಳಿಕೆಗೆ ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಾಯಕರಾದ ಡಿಕಿಶಿ, ಸಿದ್ದರಾಮಯ್ಯ ಅವರ ಫೇಸ್ ಚೆನ್ನಾಗಿದೆ. ಮಾಧ್ಯಮದವರು ಅವ್ರನ್ನ ತೋರಸುತ್ತಿದ್ದೀರಾ, ತುಂಬಾ ಸಂತೋಶ.. ಆದ್ರೆ ಅವ್ರ ಪ್ರೀತಿ ತೋರಿಸಿ.. ಅವ್ರ ಜಗಳ ತೋರಸ್ಬೇಡಿ..ಅವ್ರು ಇಬ್ಬರು ಫೋಟೋ ಇದೆ.. ಅದನ್ನ ತೋರಿಸಿ ಅಂತಾ ಹೇಳಿದ್ರು.. 

ಡಿಕೆಶಿ, ಸಿದ್ದರಾಮಯ್ಯ ಮಧ್ಯೆ ಗುದ್ದಾಟ ಮುದ್ದಾಟ ಇಲ್ಲ 

ಅವ್ರು ಒಗ್ಗಟ್ಟಾಗಿದ್ದಾರೆ.. ನಾವೆಲ್ಲ ಕಾಂಗ್ರೆಸ್ ಗೆ ನಿಂತ್ತಾಗಿದ್ದೇವೆ.. ಕಾಂಗ್ರೆಸ್ ಸಾಮೂಹಿತ ನಾಯಕತ್ವದಲ್ಲೇ ಎಲೆಕ್ಷನ್ ಮಾಡೋದು ಅಂತಾ ಹೇಳಿದ್ರು.. ಸಿದ್ದರಾಮಯ್ಯ ಉತ್ಸವದ ರೀತಿಯಲ್ಲಿ ಶಿವಕುಮಾರ್ ಉತ್ಸವ ಮಾಡಲು ಕೆಲವರು ಹೇಳಿದ್ರು.. ಪಕ್ಷದ ಉತ್ಸವ ಅಗ್ಬೇಕು ಅಂತಾ ಡಿಕೆಶಿ ಹೇಳಿಕೆ ನೀಡಿದ್ದಾರೆ. ಪಕ್ಷದ ಉತ್ಸವ ಮಾಡ್ಬೇಕು ಅಂತಾ ಡಿಕೆ ಶಿವಕುಕಾರ್ ಹೇಳಿದ್ದರು..ಇನ್ನು, ಸಿದ್ದರಾಮಯ್ಯ ಅವರದ್ದು 75 ವರ್ಷದ ಜೀವನ ಸಾಧನೆ ಇದೆ. ಐದು ವರ್ಷ ಸಿಎಂ ಆದವರು ಅವರು ಹೀಗಾಗಿ ಅಭಿಮಾನಿಗಳು ಉತ್ಸವ ಮಾಡುತ್ತಿದ್ದಾರೆ. ಉತ್ಸವ ಕಮೀಟಿ ಬೇರೆಯಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆ ಬೇರೆಯಲ್ಲ.. ಉತ್ಸವ ಕಮೀಟಿಯಲ್ಲಿದ್ದವರು ಮುಂದೆ ಪಕ್ಷ ಸಂಘಟನೆ ಮಾಡ್ತಾರೆ. ನಾನೂ ಮೂಲ ಕಾಂಗ್ರೆಸ್ಸಿಗ. ನಾನೂ ಕಮೀಟಿಯಲ್ಲಿದ್ದೇನೆ ಅಂತಾ ಹೇಳಿದ್ರು. 

ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ಗೆ ಸಿದ್ದರಾಮೋತ್ಸವ ಬೇಕಾ? ಸಚಿವ ಸಿಸಿ ಪಾಟೀಲ್ ಪ್ರಶ್ನೆ

'ಗಬ್ಬರ್ ಸಿಂಗ್ ಟ್ಯಾಕ್ಸ್' ವಿರುದ್ಧ ಹೊರಾಟ 

ಜಿಎಸ್ ಟಿಯನ್ನ ಗಬ್ಬರ್ ಸಿಂಗ್ ಟ್ಯಾಕ್ಸ್‌ಗೆ ಹೋಲಿಸಿದ ನಲಪಾಡ್, ಯಾರಿಗಾಗಿ ಟ್ಯಾಕ್ಸ್ ಕಟ್ ಮಾಡ್ರಿದಾರೆ, ಯಾರಿಗಾಗಿ ಸಂಗ್ರಹ ಮಾಡ್ತಿದ್ದಾರೆ ಅನ್ನೊದು ಗೊತ್ತಾಗ್ತಿಲ್ಲ.. ಬಿಜೆಪಿ ಪಿಕ್ ಪ್ಯಾಕೆಟ್ ಸರ್ಕಾರ ಅಂತಾ ಘೋಷಣೆ ಹಾಕ್ತೀನಿ.. ಹಾಲು, ಮೊಸರಿನಲ್ಲಿ 5 ಪರ್ಸೆಂಟ್ ಜಿಎಸ್ ಟಿ ನಿಗದಿ ಮಾಡಿದೆ.. ಡಿಜಿಟಲ್ ಇಂಡಿಯಾ ಅಂತಾ ಹೇಳ್ತಾ ಬ್ಯಾಂಕ್ ಚೆಕ್ ಲೀಫ್ ಗೆ 18 ಪರ್ಸೆಂಟ್ ಜಿಎಸ್ ಟಿ ಹಾಕಿದ್ದಾರೆ ಅಂತಾ ತೀವ್ರ ವಾಗ್ದಾಳಿ ನಡೆಸಿದ್ರು.. ಮುಂದಿನ ದಿನಗಳಲ್ಲಿ ಟ್ಯಾಕ್ಸ್ ಏರಿಕೆ ಖಂಡಿಸಿ ಉಗ್ರ ಹೋರಾಟ ಮಾಡ್ತೇವೆ.. ಜಿಎಸ್ ಟಿ ಎಷ್ಟು ಲಕ್ಷ ಕೋಟಿ ಕಲೆಕ್ಟ್ ಮಾಡಿದ್ದೀರಿ.. ಕರ್ನಾಟಕದ ಪಾಲು ಎಷ್ಟು ಅಂತಾ ಸರ್ಕಾರ ಸ್ಪಷ್ಟ ಪಡಿಸಬೇಕು.. ಕರ್ನಾಟಕದ ಪಾಲು ತರಲು ಮುಖ್ಯಮಂತ್ರಿಗಳಿಗೆ, ಸಂಸದರಿಗೆ ಆಗಿಲ್ಲ ಅಂತಾ ನಲ್ಪಾಡ್ ಆರೋಪಿಸಿದ್ರು. 
 

click me!