ಕಲಬುರಗಿಗೆ ಮೋದಿ ಆಗಮನ ಹಿನ್ನೆಲೆ; ಇದು ಚುನಾವಣೆ ಗಿಮಿಕ್ ಎಂದ ರಾಠೋಡ

By Kannadaprabha News  |  First Published Jan 19, 2023, 7:41 AM IST

ತಾಲೂಕಿನಲ್ಲಿ ಈಗಾಗಲೇ ಕಂದಾಯ ಗ್ರಾಮಗಳಾಗಿ ಅಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮತ್ತೆ ಹಕ್ಕುಪತ್ರಗಳನ್ನು ನೀಡುವದರ ಮೂಲಕ ಬಿಜೆಪಿ ಸರ್ಕಾರವು ಚುನಾವಣೆ ಗಿಮಿಕ್‌ಗಾಗಿ ಈ ಕೆಲಸ ಮಾಡುತ್ತಿದೆ ಎಂದು ಮಾಜಿ ತಾಪಂ ಸದಸ್ಯ ಹಾಗೂ ಬಂಜಾರ ಸಮನ್ವಯ ಸಮಿತಿ ಮುಖಂಡ ನಾಮದೇವ ರಾಠೋಡ ಆರೋಪಿಸಿದ್ದಾರೆ.


ಚಿತ್ತಾಪುರ (ಜ.19) : ತಾಲೂಕಿನಲ್ಲಿ ಈಗಾಗಲೇ ಕಂದಾಯ ಗ್ರಾಮಗಳಾಗಿ ಅಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮತ್ತೆ ಹಕ್ಕುಪತ್ರಗಳನ್ನು ನೀಡುವದರ ಮೂಲಕ ಬಿಜೆಪಿ ಸರ್ಕಾರವು ಚುನಾವಣೆ ಗಿಮಿಕ್‌ಗಾಗಿ ಈ ಕೆಲಸ ಮಾಡುತ್ತಿದೆ ಎಂದು ಮಾಜಿ ತಾಪಂ ಸದಸ್ಯ ಹಾಗೂ ಬಂಜಾರ ಸಮನ್ವಯ ಸಮಿತಿ ಮುಖಂಡ ನಾಮದೇವ ರಾಠೋಡ ಆರೊಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬಂಜಾರ ಸಮುದಾಯ(Banjar community)ದವರು ತಾಂಡಾಗಳಲ್ಲಿ ಕಳೆದ 50-60 ವರ್ಷಗಳಿಂದ ವಾಸಿಸುತ್ತಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿಯೇ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿದ್ದು ನಾವುಗಳು ಈಗಾಗಲೇ ಗ್ರಾಪಂ, ಕಂದಾಯ ಇಲಾಖೆಗಳಲ್ಲಿ ನಮ್ಮ ಆಸ್ತಿಗಳನ್ನು ನೊಂದಣೆ ಮಾಡಿದಲ್ಲದೇ ಕಂದಾಯ, ಕರವನ್ನು ಕಟ್ಟುತ್ತಾ ಬರುತ್ತಿದ್ದೇವೆ. ಈಗ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಅದೇ ಜಾಗಕ್ಕೆ ಹೊಸದಾಗಿ ಹಕ್ಕುಪತ್ರಗಳನ್ನು ನೀಡಿದಲ್ಲದೇ ಸೆಕ್ಷನ್‌ 94(ಡಿ) ಕರಾರುಗಳನ್ನು ವಿಧಿಸಿರುವುದು ನಮ್ಮ ಸಮಾಜದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

Grama Vastavya: ಮಾಚನಾಳ ತಾಂಡಾ ಅಭಿವೃದ್ಧಿಗೆ 1 ಕೋಟಿ ವಿಶೇಷ ಅನುದಾನ: ಸಚಿವ ಅಶೋಕ ಘೋಷಣೆ

ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ. ರಾಜೀವ್‌(P Rajeev) ಅವರು ನಮ್ಮ ಸಮಾಜಕ್ಕೆ 75 ವರ್ಷದ ನಂತರ ನ್ಯಾಯ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಕಳೆದ ಎಂಟು ವರ್ಷಗಳಿಂದ ಮತ್ತು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿಮ್ಮದೇ ಬಿಜೆಪಿ ಪಕ್ಷವು ಅಧಿಕಾರ ನಡೆಸುತ್ತಿದ್ದು ಇಲ್ಲಿಯವರೆಗೆ ಯಾಕೆ ನ್ಯಾಯ ಒದಗಿಸಿಲ್ಲಾ ಎಂದು ಪ್ರಶ್ನಿಸಿದರು. ಬಂಜಾರ ಸಮಾಜಕ್ಕೆ ನ್ಯಾಯ ಒದಗಿಸುವ ನಿಜವಾದ ಕಾಳಜಿ ಇದ್ದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಗೈರಾಣು ಭೂಮಿಯಲ್ಲಿ ಉಳುಮೆ ಮಾಡಿ ಅಲ್ಲಿ ವಾಸಿಸುತ್ತಿರುವವರಿಗೆ ನ್ಯಾಯ ನೀಡಿ ಹಕ್ಕುಪತ್ರವನ್ನು ನೀಡಿದಲ್ಲಿ ಅವರ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು. 

ಪ್ರಧಾನಿ ಮೋದಿ ಭೇಟಿ: ಸಂಚಾರ ಬದಲಾವಣೆ

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ.19ರಂದು ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಠಿಯಿಂದ ಸೇಡಂ-ಕಲಬುರಗಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ವಾಹನಗಳು ಈ ಕೆಳಕಂಡಂತೆ ಪರಾರ‍ಯಯ ಮಾರ್ಗದಲ್ಲಿ ಸಂಚರಿಸಬೇಕೆಂದು ಕರ್ನಾಟಕ ಪೊಲೀಸ್‌ ಕಾಯ್ದೆ 1963 ಕಲಂ 31ರ ಅನ್ವಯ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಅವರು ಆದೇಶ ಹೊರಡಿಸಿದ್ದಾರೆ.

ಜ.19ಕ್ಕೆ ಕಲಬುರಗಿ, ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ: ಲಂಬಾಣಿ ಧಿರಿಸಲ್ಲಿ 50000 ಮಹಿಳೆಯರು ಸ್ವಾಗತಕ್ಕೆ ಸಜ್ಜು

ಪರಾರ‍ಯಯ ಮಾರ್ಗದ ವಿವರ: ಕಲಬುರಗಿಯಿಂದ ಮಳಖೇಡಕ್ಕೆ ಹಾಗೂ ಸೇಡಂ ಮಾರ್ಗವಾಗಿ ಹೈದ್ರಾಬಾದ್‌ಗೆ ಹೋಗುವ ಭಾರಿ ವಾಹನಗಳು ಟೆಂಗಳಿ ಕ್ರಾಸ್‌ದಿಂದ ಟೆಂಗಳಿ, ಮಂಗಲಗಿ, ರಾಯಕೊಡ್‌, ಭೂತಪೂರ, ಯಲ್ಲಮ್ಮಾ ಗೇಟ್‌, ಸೇಡಂ ಚಿಂಚೋಳಿ ಕ್ರಾಸ್‌, ವಿಸಿಎಫ್‌ ಮಾರ್ಗವಾಗಿ ಹೈದ್ರಾಬಾದ್‌ಗೆ ತೆರಳಬೇಕು. ಹೈದ್ರಾಬಾದ್‌ದಿಂದ ಸೇಡಂ ಕಲಬುರಗಿ ಕಡೆಗೆ ಬರುವ ಭಾರಿ ವಾಹನಗಳು ರಿಬ್ಬನಪಲ್ಲಿ ಕ್ರಾಸ್‌ದಿಂದ ಮೆದಕ, ಯಾನಾಗುಂದಿ, ಗುರುಮಿಠಕಲ್‌, ಗಾಜರಕೋಟ, ಭೀಮಳ್ಳಿ ಕ್ರಾಸ್‌, ಚಿತ್ತಾಪೂರ, ರಾವೂರ ಹಾಗೂ ಶಹಾಬಾದ ಮಾರ್ಗವಾಗಿ ಕಲಬುರಗಿಯ ಕಡೆಗೆ ಸಾಗಬೇಕು. ಸೇಡಂದಿಂದ ಕಲಬುರಗಿ ಕಡೆಗೆ ಬರುವ ಭಾರಿ ವಾಹನಗಳು ಊಡಗಿ, ಹಂಗನಳ್ಳಿ, ಆರ್‌.ಸಿ.ಎಫ್‌. ದರ್ಗಾ ಕ್ರಾಸ್‌, ಚಿತ್ತಾಪೂರ ರೋಡ, ದಂಡೋತಿ ಕ್ರಾಸ್‌, ದಂಡೋತಿ, ಟೆಂಗಳಿ ಕ್ರಾಸ್‌ದಿಂದ ಕಲಬುರಗಿಗೆ ತಲುಪಬೇಕು.

click me!