
ಚೆನ್ನೈ (ಅ.11): ’ಮಾಡಿದ ಅಪರಾಧಕ್ಕೆ ಮೋದಿ ಬೆಲೆ ತೆರುವಂತೆ ಮಾಡುತ್ತೇವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಶನಿವಾರ ಸಂಜೆ ಚೆನ್ನೈನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ವಿರುದ್ಧ ಪ್ರಧಾನಿ ಮೋದಿ ಮಾಡಿದ ಅಪರಾಧಗಳಿಗೆ ಅವರು ಬೆಲೆ ತೆರುವಂತೆ ಮಾಡುತ್ತೇವೆ. ನೀವು ಯಾವುದಕ್ಕೂ ಹೆದರಬೇಕಾಗಿಲ್ಲ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರನ್ನು ನ್ಯಾಯದ ಮುಂದೆ ತರಲಾಗುವುದು’ ಎಂದರು.
‘ಮೋದಿ ಈಗ ಅಸ್ತಿತ್ವಕ್ಕೆ ಹೋರಾಡುತ್ತಿದ್ದಾರೆ. ಅವರ ವಿರೋಧಿ ಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿದೆ. ಸಮಸ್ಯೆ ಎಂದರೆ ತಮ್ಮ ಗೇಮ್ ಮುಗಿದಿದೆ ಎಂದು ಮೋದಿ ಅರ್ಥಮಾಡಿಕೊಂಡಿಲ್ಲ’ ಎಂದರು.
ದೆಹಲಿ ಜಿರಳೆ ಪ್ರತಿಭಟನೆ ಪ್ರಸ್ತಾಪಿಸಿದ ಅವರು, ‘ಇಡೀ ದೆಹಲಿ ಬಂದ್ ಆಗಿದೆ. ಪೊಲೀಸರು ಮತ್ತು ಬಿಜೆಪಿಯ ‘ಗೂಂಡಾಗಳು’ ವಿದ್ಯಾರ್ಥಿಗಳನ್ನು ಹೊಡೆಯುತ್ತಿದ್ದಾರೆ’ ಎಂದರು.
ತಮಿಳುನಾಡಿನ ಬಗ್ಗೆ ಮಾತನಾಡುತ್ತಾ ‘ತಮಿಳು ಸಂಸ್ಕೃತಿ, ಭಾಷೆ ಮತ್ತು ಇತಿಹಾಸದ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆದಿದೆ. ಮೋದಿ ಅವರು ತಮಿಳು ಸಂಸ್ಕೃತಿ, ಭಾಷೆ ಮತ್ತು ಇತಿಹಾಸದ ಮೇಲೆ ದಾಳಿ ಮಾಡಲು ನಾವು ಅನುಮತಿಸುವುದಿಲ್ಲ’ ಎಂದರು.
ಸಂವಿಧಾನವು ಪ್ರಶ್ನೆ ಕೇಳುವ ನಿಮ್ಮ ಹಕ್ಕನ್ನು ರಕ್ಷಿಸುತ್ತದೆ. ಮತದಾನವು ಅಧಿಕಾರದಲ್ಲಿರುವವರಿಂದ ಉತ್ತರ ಪಡೆಯಲು ನಿಮಗೆ ಅವಕಾಶ ನೀಡುತ್ತದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಸಂವಿಧಾನದ ಅಡಿಪಾಯವನ್ನು ನಾಶಪಡಿಸುತ್ತಿದ್ದಾರೆ. ಪ್ರಶ್ನೆ ಕೇಳುವುದು ಪ್ರಗತಿಯ ಅಡಿಪಾಯ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.