ಕೇಂದ್ರ ಸಚಿವ, ಬಿಜೆಪಿ ನಾಯಕರಿಂದ ಸ್ಟಿಂಗ್ ಸುಪಾರಿ! ವಾರದೊಳಗೆ ಪೆನ್‌ಡ್ರೈವ್ ದಾಖಲೆ ಬಿಚ್ಚಿಡ್ತೀನಿ- ಶಾಸಕ ಗಣಿಗ ರವಿ

Published : Oct 09, 2026, 10:43 AM IST
Mandya MLA Ganiga Ravikumar Gowda

ಸಾರಾಂಶ

ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ವಿಪಕ್ಷ ನಾಯಕರು ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ನೀಡಿದ್ದಾರೆ ಎಂದು ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುತಂತ್ರದ ಬಗ್ಗೆ ಸಿಸಿಟಿವಿ, ಆಡಿಯೋ ಮತ್ತು ವಿಡಿಯೋ ದಾಖಲೆಗಳಿರುವ ಪೆನ್‌ಡ್ರೈವ್ ಅನ್ನು ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ (ಅ.09): ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಅಭಿವೃದ್ಧಿ ಕಾರ್ಯಗಳು ಶರವೇಗ ಪಡೆದುಕೊಂಡಿವೆ. ಇದನ್ನು ಸಹಿಸಿಕೊಳ್ಳಲಾಗದೇ ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ಕೊಟ್ಟು ಸಿಎಂ ಅವರನ್ನು ಸ್ಟಿಂಗ್ ಮಾಡಲು ವಿಪಕ್ಷ ನಾಯಕರು ಕುತಂತ್ರ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರೀತಿಯಲ್ಲಿ ಪೆನ್‌ಡ್ರೈವ್ ಪ್ರದರ್ಶನ ಮಾಡಿ ಸ್ಟಿಂಗ್ ಆಪರೇಷನ್‌ ಮಾಡಲು ಕುಮ್ಮಕ್ಕು ನೀಡಿದವರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಂಡ್ಯ ಶಾಸಕ ಗಣಿಗ ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದೆಹಲಿ ಮೂಲದ ಏಜೆನ್ಸಿಗೆ ಸ್ಟಿಂಗ್ ಆಪರೇಷನ್

ಮಂಡ್ಯದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ರೀತಿ ಪೆನ್‌ಡ್ರೈ ಪ್ರದರ್ಶಿಸಿ ದಾಖಲೆ ಬಿಡುಗಡೆ ಮಾಡ್ತೀನಿ. ಇನ್ನೊಂದು ವಾರದಲ್ಲಿ ಸ್ಟಿಂಗ್ ಕುತಂತ್ರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಡಿ.ಕೆ. ಶಿವಕುಮಾರ್ ಸಿಎಂ ಆದಮೇಲೆ ಅಭಿವೃದ್ಧಿ ಶರವೇಗ ಪಡೆದುಕೊಂಡಿದೆ. ವಿಪಕ್ಷಗಳು ಸಹಿಸಲಾಗದೆ ಅಪಪ್ರಚಾರ ಮಾಡ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಲು, ದೆಹಲಿ ಮೂಲದ ಏಜೆನ್ಸಿಗೆ ಸುಫಾರಿ ಕೊಟ್ಟಿದ್ದಾರೆ. ಬೆಂಗಳೂರಿನ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಹಣ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದರು.

ಕೇಂದ್ರ ಸಚಿವ, ರಾಜ್ಯದ ಬಿಜೆಪಿ ನಾಯಕ ಸೇರಿ ಸ್ಟಿಂಗ್ ಸುಪಾರಿ

ಕೇಂದ್ರ ಸರ್ಕಾರದ ಸಚಿವರೊಬ್ಬರು ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರು ಸೇರಿ ಸುಫಾರಿ ಕೊಟ್ಟಿದ್ದಾರೆ‌. ಸಚಿವರನ್ನು ಸ್ಟಿಂಗ್ ಮಾಡಿ ಸರ್ಕಾರಕ್ಕೆ ಮುಜುಗರ ತರುವುದು ಇವರ ಪ್ಲಾನ್ ಆಗಿದೆ. ಆದರೆ ನಮ್ಮ ಸಚಿವರು ಕ್ಲೀನ್ ಇದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್‌ ಮಾಡಿಸಲು ಸುಫಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ‌. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೀನಿ ಎಂದು ಪೆನ್‌ಡ್ರೈ ತೋರಿಸಿದರು. ಇದು ಹಿಟ್ ರನ್ ಆಗಲ್ಲ. ಯಾವ ಏಜೆನ್ಸಿ, ಯಾರೆಲ್ಲಾ ಭಾಗಿಯಾಗಿದ್ದಾರೆ, ಎಷ್ಟು ಹಣ ಕೊಟ್ಟಿದ್ದಾರೆ ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ, ಯಾವ್ಯಾವ ನಾಯಕರ ಪಿಎಗಳಿದ್ದರು ಎಲ್ಲಾ ದಾಖಲೆಗಳಿವೆ ಎಂದರು.

ಹಿಟ್ ಅಂಡ್ ರನ್ ಮಾಡೊಲ್ಲ, ದಾಖಲೆ ಬಿಡುಗಡೆ ಮಾಡ್ತೇನೆ

ಇನ್ನು ಸ್ಟಿಂಗ್ ಮಾಡುವುದರ ಕುರಿತ ಪ್ಲ್ಯಾನ್ ಮಾಡಿದವರ ಸಿಸಿಟಿವಿ, ಆಡಿಯೋ, ವೀಡಿಯೋ ಸಮೇತ ದಾಖಲೆ ಇದೆ. ದಾಖಲೆ ಇರುವುದರಿಂದಲೇ ಸಿಎಂ ಕ್ಯಾಬಿನೆಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಒಂದು ವಾರದೊಳಗೆ ದೂರು ಕೊಡ್ತೀವಿ. ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಇಡ್ತೀವಿ‌. ನಾನು ಇದುವರೆಗೂ ಹಿಟ್‌ ಅಂಡ್ ರನ್ ಮಾಡಿಲ್ಲ. ಮಾಧ್ಯಮಗಳ ಮುಂದೇನೆ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ನಾನಾ ಆಮಿಷಗಳನ್ನ ಒಡ್ಡಿದರೂ ನಮ್ಮ ಸಚಿವರು ಬಗ್ಗಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕಲ್ವಾ? ಎಂದು ತಿಳಿಸಿದರು.

ಸಿದ್ದರಾಮಯ್ಯ ಮೇಲೆ ಹೆಚ್‌ಡಿಕೆಗೆ ದಿಢೀರ್ ಪ್ರೀತಿ

ಈ ಹಿಂದೆ ಸಿಡಿ ಮಾಡಿಸಲು ಬಂಡವಾಳ ಹೂಡಿದ್ದೇ ಬಿಜೆಪಿ. ಮೂಡಾ ಹಗರಣದಲ್ಲಿ ಸ್ನೇಹ ಮಯಿ ಕೃಷ್ಣಗೆ ದಾಖಲೆ ನೀಡಿದ್ಯಾರು? ಮಾಜಿ ಸಿಎಂ ಸಿದ್ದರಾಮಯ್ಯರ ಮೇಲೆ ಕುಮಾರಸ್ವಾಮಿಯವರಿಗೆ ದಿಢೀರ್ ಪ್ರೀತಿ ಬಂದಿದೆ. ಅವರ ವಿರುದ್ಧ ಯಾವ ಸ್ಟಿಂಗ್ ಆಗಿಲ್ಲ. ಸಿದ್ದರಾಮಯ್ಯ ನಿಷ್ಕಳಂಕ ವ್ಯಕ್ತಿ. ಸುಮ್ಮನೆ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ವಿಪಕ್ಷದವರ ನಾಟಕ ಜನಕ್ಕೆ ಗೊತ್ತಾಗಿದೆ. ಇದು AI ಯುಗ ಏನು ಬೇಕಾದರೂ ಸೃಷ್ಟಿ ಮಾಡ್ತಾರೆ. ಅದಕ್ಕಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಎಲ್ಲ ಸಚಿವರಿಗೆ ಹುಷಾರಾಗಿರುವಂತೆ ಎಚ್ಚರಿಸಿದ್ದಾರೆ ಎಂದು ಶಾಸಕ ಗಣಿಗ ರವಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ಸಿಎಂ, ಸಚಿವರ ಸ್ಟಿಂಗ್ ಮಾಡಲು ಯತ್ನಿಸಿದವರ ರಹಸ್ಯ ಬಿಚ್ಚಿಟ್ಟ ಸಚಿವ ಸತೀಶ್ ಜಾರಕಿಹೊಳಿ!
'ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ' ಭೀಕರ ಬರಗಾಲ ಪರಿಶೀಲನೆ ವೇಳೆ ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿಕೆ