15 ದಿನಗಳಲ್ಲಿ ಸರಿಯಾಗದಿದ್ದರೆ ಮತ್ತಷ್ಟುವಿಚಾರ ಬಹಿರಂಗ: ಬಿಜೆಪಿಗೆ ಪ್ರದೀಪ್‌ ಶೆಟ್ಟರ್‌ ಎಚ್ಚರಿಕೆ

By Kannadaprabha NewsFirst Published Sep 5, 2023, 3:40 AM IST
Highlights

ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿರುವ ಕುರಿತು ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧ. ಹದಿನೈದು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಒಂದು ವೇಳೆ ಸರಿಯಾಗದಿದ್ದಲ್ಲಿ ಕಾದು ನೋಡಿ ಎನ್ನುವ ಮೂಲಕ ವಿಧಾನಪರಿಷತ್‌ ಸದಸ್ಯ ಪ್ರದೀಪ್‌ ಶೆಟ್ಟರ್‌ಅವರು ಹೈಕಮಾಂಡ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 
 

ಹುಬ್ಬಳ್ಳಿ (ಸೆ.05): ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿರುವ ಕುರಿತು ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧ. ಹದಿನೈದು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಒಂದು ವೇಳೆ ಸರಿಯಾಗದಿದ್ದಲ್ಲಿ ಕಾದು ನೋಡಿ ಎನ್ನುವ ಮೂಲಕ ವಿಧಾನಪರಿಷತ್‌ ಸದಸ್ಯ ಪ್ರದೀಪ್‌ ಶೆಟ್ಟರ್‌ ಅವರು ಹೈಕಮಾಂಡ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ವಿರುದ್ಧ ಭಾನುವಾರವಷ್ಟೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರದೀಪ ಶೆಟ್ಟರ್‌, ಸೋಮವಾರ ಕೂಡ ತಮ್ಮ ಅಸಮಾಧಾನ ಮುಂದುವರಿಸಿದರು. ಆಹ್ವಾನದ ಮೇರೆಗೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ನಾನು ನೀಡಿದ ಹೇಳಿಕೆ ನಂತರ ಪಕ್ಷದ ಹಲವು ಮುಖಂಡರು ನನ್ನ ಜೊತೆಗೆ ಮಾತನಾಡಿದ್ದಾರೆ. ಹದಿನೈದು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಒಂದು ವೇಳೆ ಸರಿಯಾಗದಿದ್ದಲ್ಲಿ ಮತ್ತೆ ಮಾಧ್ಯಮಗಳ ಮುಂದೆ ಬರುತ್ತೇನೆ, ಸಾಕಷ್ಟು ವಿಚಾರ ಹಂಚಿಕೊಳ್ಳುವುದಿದೆ ಎಂದು ಸೂಚ್ಯವಾಗಿ ಹೇಳಿದರು. ವಿನಾಕಾರಣ ಯಡಿಯೂರಪ್ಪ ಅವರನ್ನು ಸಿಎಂ ಪದವಿಯಿಂದ ಕೆಳಗಿಳಿಸಲಾಯಿತು. ಶೆಟ್ಟರ್‌, ಸವದಿಗೆ ಟಿಕೆಟ್‌ ತಪ್ಪಿಸಲಾಯಿತು. ಪಕ್ಷದಲ್ಲಿನ ವಾತಾವರಣಕ್ಕೆ ಬೇಸತ್ತು ಸಾಕಷ್ಟುಜನ ಲಿಂಗಾಯತ ಮುಖಂಡರು ಹೊರನಡೆದಿದ್ದಾರೆ. 

Latest Videos

ಶೆಟ್ಟರ್‌ ಬಳಿಕ ಈಗ ಸೋದರನಿಂದಲೂ ಬಿಜೆಪಿ ವಿರುದ್ಧ ಕಿಡಿ: ಪಕ್ಷದಲ್ಲಿ ಲಿಂಗಾಯತರ ಕಡೆಗಣನೆ

ಅವರನ್ನೆಲ್ಲ ಪಕ್ಷದಲ್ಲೇ ಉಳಿಸಿಕೊಳ್ಳುವ ಕೆಲಸವಾಗಬೇಕು.  ಪಕ್ಷವನ್ನು ಮತ್ತೆ ಕಟ್ಟುವ ಕೆಲಸವಾಗಬೇಕು. ಅದಕ್ಕಾಗಿ ಪಕ್ಷದ ಹೈಕಮಾಂಡ್‌ ಗಮನ ಹರಿಸಬೇಕು. ಪರಿಸ್ಥಿತಿಯನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಬೇಡಿಕೆ ಎಂದರು. ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕಿತ್ತು ಎಂಬ ಪಕ್ಷದ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ವೇದಿಕೆಯಲ್ಲಿ ಸಾಕಷ್ಟುಸಲ ಚರ್ಚೆ ಮಾಡಲಾಗಿದೆ. ಅಲ್ಲಿ ಸರಿಪಡಿಸದ ಕಾರಣ ಇದೀಗ ಮಾಧ್ಯಮಗಳ ಎದುರಿಗೆ ಆಗಿರುವ ಅನ್ಯಾಯವನ್ನು ಹೊರಗಿಡುತ್ತಿದ್ದೇನೆ ಎಂದರು. 

ಎಲ್ಲಾ ಕ್ಷೇತ್ರದಲ್ಲೂ ಭಾರತ ಉತ್ತಮ ಸಾಧನೆ: ಸಚಿವ ಪರಮೇಶ್ವರ್‌

ತಮ್ಮ ಹೇಳಿಕೆ ಖಂಡಿಸಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳ ಮಠ ನೀಡಿರುವ ಪತ್ರಿಕಾ ಪ್ರಕಟಣೆ ಕುರಿತು ಪ್ರತಿಕ್ರಿಯಿಸಿ, ಅದು ಅವರು ಬರೆದ ಪತ್ರವಲ್ಲ. ಬೇರೆಯವರು ಪತ್ರ ಬರೆದು ಇವರ ಹೆಸರಲ್ಲಿ ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ಆ ಬೇರೆಯವರು ಯಾರು ಎನ್ನುವುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು. ಕಲಘಟಗಿ ಕ್ಷೇತ್ರದಿಂದ ನಾನು ಟಿಕೆಟ್‌ ಕೇಳಿದ್ದೆ. ಆದರೆ, ಹೊರಗಿನಿಂದ ಬಂದ ನಾಗರಾಜ ಛಬ್ಬಿಗೆ ಟಿಕೆಟ್‌ ಕೊಟ್ಟರು. ನನಗೆ ಅಥವಾ ಕುಂದಗೋಳಮಠರಿಗೆ ಟಿಕೆಟ್‌ ಕೊಟ್ಟಿದ್ದರೆ ಖಂಡಿತ ನಾವು ಗೆಲ್ಲುತ್ತಿದ್ದೇವು ಎಂದರು.

click me!