ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ

By Suvarna NewsFirst Published Dec 26, 2021, 8:21 PM IST
Highlights

* ಕರ್ನಾಟಕ ಬಿಜೆಪಿಯಲ್ಲಿ ಮತ್ತಷ್ಟು ಪದಾಧಿಕಾರಿಗಳ ನೇಮಕ
* ಉಪಾಧ್ಯಕ್ಷ, ಜಿಲ್ಲಾ ಪ್ರಭಾರಿ, ಸಂಚಾಲಕರ ನೇಮಕ
* ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ

ಬೆಂಗಳೂರು, (ಡಿ.26): ಕರ್ನಾಟಕ ಬಿಜೆಪಿ (Karnataka BJP) ಮತ್ತಷ್ಟು ಪದಾಧಿಕಾರಿಗಳನ್ನ ನೇಮಕ ಮಾಡಿದೆ. ಜಿಲ್ಲಾಧ್ಯಕ್ಷ, ಪಕ್ಷದ ಉಪಾಧ್ಯಕ್ಷ, ಜಿಲ್ಲಾ ಪ್ರಭಾರಿ, ಸಂಚಾಲಕರನ್ನ ನೇಮಿಸಿದೆ.

ಪಕ್ಷದ ವಿವಿಧ ಜವಾಬ್ದಾರಿಗಳಿಗೆ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಅವರು ಇಂದು(ಭಾನುವಾರ) ಆದೇಶ ಹೊರಡಿಸಿದ್ದು, ನೇಮಕಗೊಂಡವರ ಪಟ್ಟಿ ಬಿಡುಗಡೆ ಹೊರಬಿದ್ದಿದೆ. 

BJP Core Committee: ಹುಬ್ಬಳ್ಳಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ, ಬೊಮ್ಮಾಯಿ, ಕಟೀಲ್ ಭವಿಷ್ಯ ನಿರ್ಧಾರ...?

 ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ(Laxman Savadi) ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಹೌದು...ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ. ಈ ಹಿಂದೆ ಸವದಿ ಅವರು ವಿಧಾನಸಭೆ ಚುನಾವಣೆ ಸೋತರೂ ಸಹ ಅಚ್ಚರಿ ಎಂಬಂತೆ ಉಪಮುಖ್ಯಮಂತ್ರಿಯಾಗಿದ್ದರು.

ಆದ್ರೆ, ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಲಕ್ಷ್ಮಣ ಸವದಿ ಡಿಸಿಎಂ ಹುದ್ದೆ ಕಳೆದುಕೊಂಡು ಕೇವಲ ವಿಧಾನಪರಿಷತ್ ಸದಸ್ಯರಾಗಿದ್ದರು. ಇದೀಗ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. 

ಪಕ್ಷದ ಮುಖ್ಯ ವಕ್ತಾರರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನ ಅನಿವಾಸಿ ಭಾರತೀಯ ವಿಭಾದ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದ್ದು, ರಾಜ್ಯ ಬಿಜೆಪಿ ಮುಖ್ಯ ವಕ್ತಾರರ ಸ್ಥಾನಕ್ಕೆ ಮೈಸೂರಿನ ಎಂ.ಜಿ ಮಹೇಶ್ ಅವರನ್ನ ನೇಮಿಸಲಾಗಿದೆ.

ಪಕ್ಷದ ವಿವಿಧ ಜವಾಬ್ದಾರಿಗಳಿಗೆ ನೇಮಕಗೊಂಡವರ ಪಟ್ಟಿ. pic.twitter.com/cWh1QEjNaT

— BJP Karnataka (@BJP4Karnataka)

ಜಿಲ್ಲಾ ಪ್ರಭಾರಿಗಳು
* ಜಗದೀಶ್ ಹಿರೇಮನಿ-ಮಂಡ್ಯ
* ಅಮರನಾಥ್ ಪಾಟೀಲ್- ಯಾದಗಿರಿ
* ಕೆ. ಶಿವಲಿಂಗಪ್ಪ-ದಾವಣಗೆರೆ
* ಸಿ.ಆರ್. ಪ್ರಸನ್ನಕುಮಾರ್-ಚಿತ್ರದುರ್ಗ
*ಕೆ.ವಿ ಶಿವಪ್ಪ-ಬೆಂಗಳೂರು ಉತ್ತರ ಜಿಲ್ಲೆ
* ಮುರಹಗೌಡ- ಬಳ್ಳಾರಿ ಜಿಲ್ಲಾಧ್ಯಕ್ಷರು
* ಚನ್ನಬಸವನಗೌಡ- ವಿಜಯನಗರ ಜಿಲ್ಲಾಧ್ಯಕ್ಷರು

ಪ್ರಕೋಷ್ಠಗಳ ಸಂಚಾಲಕರು
* ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ-ಜಯತೀರ್ಥ ಕಟ್ಟಿ,
* ಕಾನೂನು ಪ್ರಕೋಷ್ಠಗಳ ರಾಜ್ಯ ಸಂಚಾಲಕ-ಎಚ್‌.ಯೋಗೇಂದ್ರ
* ಕಾನೂನು ಪ್ರಕೋಷ್ಠಗಳ ರಾಜ್ಯ ಸಹ ಸಂಚಾಲಕ- ವಿನೋದ್ ಪಾಟೀಲ್
* ಮೀನುಗಾರರ ಪ್ರಕೋಷ್ಠ ರಾಜ್ಯ ಸಂಚಾಲಕ- ಗೊಂವಿದ ಬಾಂಡೇಕರ
* ಮೀನುಗಾರರ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ-ನಾಗಪ್ಪ ಅಂಬಿ
* ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸಂಚಾಲಕ- ಶಾಸಕ ಬಸವರಾಜ ಮತ್ತಿಮೋಡ

ರಾಜ್ಯ ಉಪಾಧ್ಯಕ್ಷರು
* ನಯನಾ ಗಣೇಶ್ ಉಡುಪಿ
*ಲಕ್ಷ್ಮಣ ಸವದಿ

ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ
2018ರ  ವಿಧಾನಸಭಾ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಹೇಶ್ ಕುಮಟಳ್ಳಿ ಎದುರು ಪರಾಭವಗೊಂಡಿದ್ದ  ಲಕ್ಷ್ಮಣ ಸವದಿ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರು.ಸೋತರೂ ಡಿಸಿಎಂ ಮಾಡಿದ್ರು ಅಂತ ರಾಜ್ಯ ಬಿಜೆಪಿಯಲ್ಲಿ ಕೆಲವರಲ್ಲಿ ಅಸಮಧಾನ ಸ್ಫೋಟವಾಗಿತ್ತು. ಅಲ್ಲದೇ ಸವದಿ ಆಯ್ಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

2020ರ ಫೆಬ್ರವರಿ 17ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು ಅವರು ಸಚಿವ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.  ಆದ್ರೆ, ಬಿಎಸ್ ಯಡಿಯೂರಪ್ಪ ಅವರನ್ನ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಲಕ್ಷ್ಮಣ ಸವದಿ ಅವರನ್ನ ಸಹ ಡಿಸಿಎಂ ಹುದ್ದೆಯಿಂದ ಕೆಳಗಿಳಸಲಾಗಿತ್ತು.

click me!