ಮೈಸೂರು (ಜ.04): ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ನಾವು ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲಿ ಯಾರ ಬೆಂಬಲವನ್ನು ಕೇಳುವುದಿಲ್ಲ. ಅವರ ಅಭ್ಯರ್ಥಿ ಸೋಲಿಸಿ ನಮಗೆ ಬೆಂಬಲ ಕೊಡಿ ಎನ್ನಲಾಗುವುದಿಲ್ಲ ಎಂದು ಮಾಜಿ ಸಿಎಂ ಎಚ್ . ಡಿ . ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಮೈಸೂರಿನಲ್ಲಿಂದು ಮಾತನಾಡಿದ ಎಚ್ ಡಿಕೆ ನಾವು ಸ್ಪರ್ಧೆ ಮಾಡದ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ಕೊಡಬೇಕು ಎರಡು ದಿನದಲ್ಲಿ ತೀರ್ಮಾನ ಮಾಡಲಾಗುತ್ತದೆ. ಮುಂದಿನ 2023ರ ವಿಧಾನ ಸಭಾ ಚುನಾವಣೆ (Assembly election) ಗಮನಕ್ಕೆ ಇಟ್ಟು ಕೊಂಡು ಬೆಂಬಲ ನೀಡುತ್ತೇವೆ ಎಂದರು.
ಡಿಸೆಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಬಿಜೆಪಿ -ಜೆಡಿಎಸ್ (BJP - JDS) ನಡುವೆ ಹೊಂದಾಣಿಕೆ ರಾಜಕೀಯ (politics) ನಡೆಯಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
undefined
ಜೆಡಿಎಸ್ ಅಲ್ಲ ಜೆಡಿಎಫ್ (JDF) ಪಕ್ಷ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್ ಡಿ ಕುಮಾರ ಸ್ವಾಮಿ, ಇವರಿಗೆ ಕುಟುಂಬ ರಾಜಕಾರಣದ(Family Politics) ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮಗ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah ) ಶಾಸಕರಾಗಿದ್ದಾರೆ (MLA) ಎಂದರು.
ಕೆಪಿಸಿಸಿ (KPCC) ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮಗ ಅಕಾಲಿಕ ಮರಣಕ್ಕೆ ಈಡಾದರು. ಅವರು ಸಹಾ ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ (State And National Politics) ಹಲವರು ಈ ರೀತಿ ಇದ್ದಾರೆ. ಕುಟುಂಬ ರಾಜಕಾರಣ ಬೇಡ ಎಂದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷದವರು ಇದಕ್ಕೆ ಕಾನೂನು ಜಾರಿ ಮಾಡಲಿ . ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದ ಎಷ್ಟು ಜನ ರಾಜಕಾರಣಕ್ಕೆ ಬರಬೇಕು ಎಂಬ ನಿಯಮ ಮಾಡಲಿ ಎಂದು ಮೈಸೂರಿನಲ್ಲಿ (Mysuru) ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ರಾಜ್ಯ ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮೈಸೂರು ಸೇರಿದಂತೆ ಇತರ ಕ್ಷೇತ್ರದಲ್ಲಿ ಎಲ್ಲರ ಹೇಳಿಕೆ ನೋಡಿದ್ದೇನೆ. ವೈಯಕ್ತಿಕ ಟೀಕೆ ಅವರ ಸ್ಥಾನಕ್ಕೆ ಅಗೌರವ ತೋರುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನೂ ಈ ಹಿಂದೆ ಅಂತಹ ಹೇಳಿಕೆಗಳನ್ನ ಕೊಟ್ಟಿದ್ದೆ. ನನ್ನ ಅಭಿಮಾನಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ ಮೇಲೆ ನಾನು ತಿದ್ದುಕೊಂಡಿದ್ದೇನೆ. ನನ್ನ ಆತ್ಮಕ್ಕೆ ಇದು ಸರಿ ಇಲ್ಲ ಎನ್ನಿಸಿದೆ. ಹೀಗಾಗಿ ಮುಂದೆ ಈ ರೀತಿ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ನನ್ನ ಗುರಿ ಇರೋದು 2023ರ ಚುನಾವಣೆ. ಹಾಗಾಗಿ ವೈಯಕ್ತಿಕ ಟೀಕೆ ಯಾರಿಗೂ ಶೋಭೆ ತರುವುದಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ
ಎಲ್ಲಾರು ಚುನಾವಣೆಯಲ್ಲಿ ಗೆಲ್ಲಲೇ ಬೇಕು
ತುಮಕೂರು : ಬಳಗೆರೆಯಲ್ಲಿ ಇಂದು ಮಾಜಿ ಪ್ರಧಾನಿ ದೇವೇಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಎಂಎಲ್ ಸಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅನಿಲ್‌ಕುಮಾರ್ ಅವರನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಮತದಾರರನ್ನು ಭೇಟಿ ಯಾಗುತ್ತಿದ್ದೇವೆ. 7 ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲಾರು ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದರು.
ಶಾಸಕರು, ಮಾಜಿ ಶಾಸಕರು, ಮುಖಂಡರು ಎಲ್ಲಾರು ಸೇರಿ ಕೆಲಸ ಮಾಡುತ್ತಿದ್ದೇವೆ. ಕೋಲಾರ,ಚಿಕ್ಕಬಳ್ಳಾಪುರ,ಮಂಡ್ಯ,ತುಮಕೂರು ಕ್ಷೇತ್ರಗಳಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ವಿಜಯಪುರದಲ್ಲಿ 890 ವೋಟ್ ಗಳಿಗೆ, ಗುಲ್ಬರ್ಗಾದಲ್ಲಿ ಸಾವಿರ ಚಿಲ್ಲರೆ ವೋಟ್ ಗಳಿವೆ. ಬೀದರ್ ನಲ್ಲಿ 490, ರಾಯಚೂರಿನಲ್ಲಿ 890 ವೋಟ್ ಗಳಿವೆ. ಧಾರವಾಡ ಗದಗ ಹಾವೇರಿಯಲ್ಲಿ ವೋಟ್ ಗಳಿವೆ. ಅಲ್ಲಿ ನಾವು ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ ಯವರು ಹೆಚ್ಚಿನ ಮತಗಳಿವೆ. ಭಾನುವಾರ ಸಭೆ ನಡೆಸಿ ಇಲ್ಲಿನ ಮತಗಳನ್ನು ಯಾರಿಗೆ ಕೊಡಬೇಕು ಎಂದು ತಿಳಿಸುತ್ತೇವೆ ಎಂದರು.
ಮನೆ ಬಾಗಿಲು ಕಾಯುತ್ತಾರೆ : ಜೆಡಿಎಸ್‌ಅನ್ನು (JDS) ಬಿಜೆಪಿಯ ಬಿ ಟೀಂ ಅಂತ ಕರೆಯುವ ಕಾಂಗ್ರೆಸ್ಸಿಗರು (congress) ಹೊಂದಾಣಿಕೆಗಾಗಿ ನಮ್ಮ ಮನೆ ಬಾಗಿಲು ಕಾಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy ) ವಾಗ್ದಾಳಿ ನಡೆಸಿದರು. ವಿಧಾನ ಪರಿಷತ್ ಚುನಾವಣೆ (MLC Election ) ಹಿನ್ನೆಲೆಯಲ್ಲಿ ಕೋಲಾರದಲ್ಲಿ (Kolar) ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ (Congress) ಮುಖಂಡರು ಜೆಡಿಎಸ್ ಪಕ್ಷ ಬಿಜೆಪಿಯ (BJP) ಬಿ ಟೀಂ ಎಂದು ಬರೆದು ಕತ್ತೆಗೆ ಸ್ಲೇಟ್ ಕಟ್ಟಿಕೊಂಡು ಓಡಾಡಲಿ. ಇವರ ಇತಿಹಾಸ, ನಡವಳಿಕೆ ಎಲ್ಲವೂ ಜನರಿಗೆ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್(JDS) ವಿರುದ್ಧ ನಿರಂತರ ಆರೋಪ: 2018 ರಿಂದಲೇ ಕಾಂಗ್ರೆಸ್ (Congress) ಪಕ್ಷ ಜೆಡಿಎಸ್ ವಿರುದ್ದ ಈ ಆರೋಪ ಮಾಡುತ್ತಲೆ ಬರುತ್ತಿದೆ, ಆದರೆ ಅಗತ್ಯವಾದಲ್ಲಿ ನಮ್ಮ ಮನೆ ಕಾವಲು ಕಾಯಲು ಇವರು ಸಿದ್ದರಿರುತ್ತಾರೆ. ಇವರ ನಡವಳಿಕೆ ಕುರಿತು ನಿರ್ಧರಿಸಲು ನಾಡಿನ ಜನತೆಯ ಮುಂದಿಟ್ಟಿದ್ದೇನೆ ಎಂದರು.
ದೇವೇಗೌಡರು(Devegowda) ಒಬ್ಬ ಜನಪ್ರತಿನಿಧಿಯಾಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ, ಅವರನ್ನು ಭೇಟಿ ಮಾಡುವುದು ತಪ್ಪೇ, ಜನರ ಸಮಸ್ಯೆಗಳ ಕುರಿತು ಪಿಎಂ ಜತೆ ಚರ್ಚಿಸುವುದೂ ತಪ್ಪಾ. ದೇವೇಗೌಡರು - ಪ್ರಧಾನಿ ಭೇಟಿ ಕುರಿತು ಕಾಂಗ್ರೆಸ್ಸಿಗರು ರಾಜಕೀಯ ಬೆರೆಸಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನ (Congress) ಕೆಲವು ಮುಖಂಡರಿಗೆ ನಮ್ಮ ಬಗ್ಗೆ ಮಾತನಾಡುವುದೇ ಉದ್ಯೋಗ ಎಂದರು.