Council Election Karnataka : ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿನ ಸಮರಕ್ಕೆ ಸಜ್ಜು

By Kannadaprabha News  |  First Published Dec 4, 2021, 12:21 PM IST
  • ಗಡಿ ಜಿಲ್ಲೆ ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿನ ಸಮರ
  • ದ್ವಿಸದಸ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಡುವೆ ತ್ರಿಕೋನ ಸ್ಪರ್ಧೆ

 ವರದಿ : ಶ್ರೀಶೈಲ ಮಠದ

 ಬೆಳಗಾವಿ (ಡಿ.04):  ಗಡಿ ಜಿಲ್ಲೆ ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ (Politics) ಜಿದ್ದಾಜಿದ್ದಿನ ಸಮರಕ್ಕೆ ಸಜ್ಜಾಗುತ್ತಿದೆ. ದ್ವಿ ಸದಸ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ (BJP), ಕಾಂಗ್ರೆಸ್ (Congress) ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ (Lakhan Jarkiholi) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯ  ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ನ ಚನ್ನ ರಾಜ್ ಹಟ್ಟಿಹೊಳಿ, ಎಎಪಿಯ ಶಂಕರ ಹೆಗಡೆ, ಪಕ್ಷೇತರ ಅಭ್ಯರ್ಥಿಗಳಾದ ಲಖನ್ ಜಾರಕಿಹೊಳಿ, ಕಲ್ಮೇಶ ಗಾಣಗಿ ಮತ್ತು ಶಂಕರ ಕುಡ ಸೋಮಣ್ಣವರ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ. ಎರಡು ಸ್ಥಾನಗಳಿದ್ದರೂ ಕೈ, ಬಿಜೆಪಿ ತಲಾ ಒಂದೇ ಸ್ಥಾನಕ್ಕೆ ಸ್ಪರ್ಧಿಸಿವೆ. ಇನ್ನು ಬಿಜೆಪಿಯಿಂದ ಟಿಕೆಟ್ ಸಿಗದ್ದಕ್ಕೆ ಉದ್ಯಮಿ ಲಖನ್ ಜಾರಕಿಹೊಳಿ ಪಕ್ಷೇತರ ರಾಗಿ ಸ್ಪರ್ಧಿಸಿರುವುದರಿಂದ ಎರಡೂ ಪಕ್ಷಗಳಿಗೆ ಮತ ವಿಭಜನೆ ಆತಂಕವೂ ಎದುರಾಗಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೇಲೆ ಪ್ರಬಲ ಹಿಡಿತ ಹೊಂದಿರುವ ಜಾರಕಿಹೊಳಿ ಸಹೋದರರು ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸನ್ನೂ ಹೊಂದಿದ್ದಾರೆ. 

Tap to resize

Latest Videos

undefined

ರಮೇಶ್ ಜಾರಕಿಹೊಳಿ (Ramesh jarkiholi) ಅವರಂತೂ ಮೊದಲ ಪ್ರಾಶಸ್ತ್ಯ ಮತ ಬಿಜೆಪಿಗೆ ನೀಡಿ, 2ನೇ ಮತವನ್ನು ಕಾಂಗ್ರೆಸ್ ವಿರುದ್ಧ ಹಾಕಿ ಎಂದು ಜಿಲ್ಲಾದ್ಯಂತ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ತಮ್ಮ ರಾಜಕೀಯ(Politics) ವೈರಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. 

ಜಾತಿ ಲೆಕ್ಕಾಚಾರ: ಮೇಲ್ಮನೆ ಚುನಾವಣೆಯಲ್ಲಿಯೂ (Election) ಜಾತಿ ಲೆಕ್ಕಾಚಾರವೂ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಹಿಂದ್ ವರ್ಗದ ಸದಸ್ಯರೇ ಅಧಿಕ ಪ್ರಮಾಣದಲ್ಲಿದ್ದಾರೆ. ಅದರಲ್ಲಿಯೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ರಾಜಕೀಯ ಮುಖಂಡರು ಮತಗಳ ಜಾತಿವಾರು ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ  
 
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರ ಪೈಪೋಟಿ

ವರದಿ:  ಕೆ.ಎಂ. ಮಂಜುನಾಥ್ 

 ಬಳ್ಳಾರಿ :  ಗಣಿ ಜಿಲ್ಲೆಯಲ್ಲಿ ಸಂಪ್ರದಾಯದಂತೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲೂ(MLC Election) ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರ ಪೈಪೋಟಿ. ತೆನೆ ಹೊತ್ತ ಮಹಿಳೆ ಅಖಾಡದಿಂದ ದೂರ. ಹೀಗಾಗಿ ಏನಿದ್ದರೂ ಎರಡು ರಾಷ್ಟ್ರೀಯ ಪಕ್ಷಗಳ(National parties) ನಡುವೆ ಗೆಲುವಿಗಾಗಿ ಜಿದ್ದಾಜಿದ್ದಿ ನಡೆಯುತ್ತಿದೆ! ಕಾಂಗ್ರೆಸ್‌ನಿಂದ (Congress) ಕೆ.ಸಿ.ಕೊಂಡಯ್ಯ ಹಾಗೂ ಬಿಜೆಪಿಯಿಂದ ಏಚರೆಡ್ಡಿ ಸತೀಶ್ ಪರಿಷತ್ ಫೈಟ್‌ನಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಇನ್ನಿಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರಾದರೂ ಮತ ಗಳಿಕೆ ಸುಲಭದ ವಿಚಾರವಲ್ಲ. 

ಪರಿಷತ್ ಪ್ರವೇಶಕ್ಕೆ ಕೈ - ಕಮಲ ಪಡೆಗಳು ರಣ ತಂತ್ರ ರೂಪಿಸಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿವೆ. ಸದಸ್ಯರ ಮನವೊಲಿಕೆ, ಮತಗಳ ಹಿಡಿದಿಟ್ಟು ಕೊಳ್ಳುವಿಕೆಯಲ್ಲಿ ಎರಡೂ ಪಕ್ಷಗಳು ಹಿಂದೆ ಬಿದ್ದಿಲ್ಲ. 

ಅನುಭವಿ ಕೊಂಡಯ್ಯ: ಕೈ ಅಭ್ಯರ್ಥಿ ಕೆ.ಸಿ.ಕೊಂಡಯ್ಯರದ್ದು ಎರಡೂವರೆ ದಶಕಗಳ ರಾಜಕೀಯ (politics) ಅನುಭವ ಹೊಂದಿದ್ದು, ಕಳೆದ ಬಾರಿ ಚುನಾವಣೆಯಲ್ಲಿ (Election) ಗೆಲುವು ಸಾಧಿಸಿ ದ್ದರು. ಕಳೆದ ಬಾರಿ ಅವರು ಬಿಜೆಪಿಯ ಚನ್ನ ಬಸವನಗೌಡ ಪಾಟೀಲ್ ವಿರುದ್ಧ 1598 ಮತಗಳ ಅಂತರದಲ್ಲಿ ಜಯಿಸಿದ್ದರು. ಇದು ಕೈ ಪಕ್ಷದ ಅಭ್ಯರ್ಥಿಯ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಆದರೆ ಪಕ್ಷದ ಕೆಲವರ ಮುನಿಸು ಫಲಿತಾಂಶದ ಏರಿಳಿತಕ್ಕೆ ಕಾರಣವಾಗಬಹುದು.

ಹೊಸಮುಖ ಸತೀಶ್: ಇನ್ನು ಬಿಜೆಪಿಯ ಏಚರೆಡ್ಡಿ ಸತೀಶ್ ಹೊಸ ಮುಖವಾದರೂ ಪಕ್ಷ ಸಂಘಟನೆ, ಆಡಳಿತಾರೂಢ ಸರ್ಕಾರ ಮತ್ತು ಕೇಂದ್ರದ ಜನಪರ ನೀತಿಗಳಿಂದಾಗಿ ಜಯಗಳಿಸುತ್ತೇವೆಂಬ ವಿಸ್ವಾಸ ಬಿಜೆಪಿಗರಿಗೆ ಇದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಚಿವರಾದ ಆನಂದಸಿಂಗ್ ಮತ್ತು ಶ್ರೀರಾಮುಲು ಕ್ಷೇತ್ರಾದ್ಯಂತ ಬಿಡುವಿಲ್ಲದೆ ಸುತ್ತುತ್ತಿದ್ದಾರೆ. ಕ್ಷೇತ್ರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳೇ ಹೆಚ್ಚು. ಬಳ್ಳಾರಿ-ವಿಜಯನಗರ ಜಿಲ್ಲೆಗೆ ಒಳಪಡುವ ಪರಿಷತ್ ಚುನಾವಣೆ ವ್ಯಾಪ್ತಿಯ 10 ಶಾಸಕರ ಪೈಕಿ ಎರಡು ಪಕ್ಷಗಳ ಸಮಬಲವಿದೆ. ಜೊತೆಗೆ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಎರಡೂ ಪಕ್ಷಗಳ ಸದಸ್ಯರು ಸಮಬಲದಲ್ಲಿ ಇರುವುದರಿಂದ ಯಾವ ಪಕ್ಷಕ್ಕೂ ಗೆಲುವು ಅಷ್ಟು ಸುಲಭದ ತುತ್ತಲ್ಲ.  

click me!