Council Election Mysuru : ಪ್ರಥಮ ಸುತ್ತಲ್ಲಿ 2,258 ಮತ ಪಡೆದರೆ ಜಯ : ಮೂವರಲ್ಲಿ ಇಬ್ಬರಿಗೆ ಗೆಲವು

Kannadaprabha News   | Asianet News
Published : Dec 11, 2021, 12:42 PM IST
Council Election Mysuru : ಪ್ರಥಮ ಸುತ್ತಲ್ಲಿ 2,258 ಮತ ಪಡೆದರೆ ಜಯ : ಮೂವರಲ್ಲಿ ಇಬ್ಬರಿಗೆ ಗೆಲವು

ಸಾರಾಂಶ

 ತಿರಸ್ಕೃತ ಮತಗಳು ಹೆಚ್ಚಾದಲ್ಲಿ ಈ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ  ಆರ್‌. ರಘು, ಡಾ.ಡಿ. ತಿಮ್ಮಯ್ಯ, ಸಿ.ಎನ್‌. ಮಂಜೇಗೌಡ- ಈ ಮೂವರಲ್ಲಿ ಗೆಲ್ಲುವ ಇಬ್ಬರು ಯಾರು?  ಮೊದಲ ಸುತ್ತಿನಲ್ಲಿ ಗೆಲ್ಲಲು ಏಕ ಸದಸ್ಯ ಕ್ಷೇತ್ರಗಳಲ್ಲಿ ಶೇ.50, ದ್ವಿ ಸದಸ್ಯ ಕ್ಷೇತ್ರಗಳಲ್ಲಿ ಮೂರನೇ ಒಂದರಷ್ಟು ಮತ ಬೇಕು  

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಡಿ.11):  ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ (Election) ಏಕಸದಸ್ಯ ಕ್ಷೇತ್ರಗಳಲ್ಲಿ ಗೆಲುವಿಗೆ ಶೇ.50 ಪ್ಲಸ್‌ 1 ಮತ ಪಡೆಯಬೇಕು. ಆದರೆ ದ್ವಿ ಸದಸ್ಯ ಕ್ಷೇತ್ರಗಳಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಯಾಗಬೇಕಾದರೆ ಒಟ್ಟು ಮತಗಳಲ್ಲಿ ಮೂರನೇ ಒಂದರಷ್ಟು ಪ್ಲಸ್‌ 1 ಮತ ಪಡೆಯಬೇಕು. ರಾಜ್ಯದಲ್ಲಿ ಐದು ದ್ವಿ ಸದಸ್ಯ ಕ್ಷೇತ್ರಗಳಿವೆ. ಅವುಗಳೆಂದರೆ ಮೈಸೂರು- ಚಾಮರಾಜನಗರ (Mysuru Chamarajanagar), ಬಿಜಾಪುರ- ಬಾಗಲಕೋಟೆ, ಮಂಗಳೂರು- ಉಡುಪಿ (Mangaluru -Udupi), ಧಾರವಾಡ- ಗದಗ- ಹಾವೇರಿ ಮತ್ತು ಬೆಳಗಾವಿ. ಉಳಿದ 20 ಏಕ ಸದಸ್ಯ ಕ್ಷೇತ್ರಗಳಾಗಿವೆ.

ಏಕ ಸದಸ್ಯ ಕ್ಷೇತ್ರಗಳಲ್ಲಿ ಒಟ್ಟು ಮತಗಳಲ್ಲಿ (Vote) ಶೇ.50 ಪ್ಲಸ್‌ 1, ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಟ್ಟು ಮತದ ಮೂರನೇ ಒಂದರಷ್ಟು ಪ್ಲಸ್‌ 1 ಮತವನ್ನು ಕೋಟಾ ಎಂದು ನಿಗದಿ ಮಾಡಲಾಗುತ್ತದೆ. ಯಾವುದಾದರೂ ಅಭ್ಯರ್ಥಿ (ಏಕಸದಸ್ಯ ಕ್ಷೇತ್ರ) ಅಥವಾ ಅಭ್ಯರ್ಥಿಗಳು (ದ್ವಿಸದಸ್ಯ ಕ್ಷೇತ್ರ) ಮೊದಲ ಸುತ್ತಿನಲ್ಲಿಯೇ ಅಷ್ಟು ಮತಗಳನ್ನು (Vote) ಪಡೆದಿದ್ದಲ್ಲಿ ವಿಜೇತ ಎಂದು ಘೋಷಿಸಲಾಗುತ್ತದೆ. ಇಲ್ಲದಿದ್ದಲ್ಲಿ ಅತಿ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಹೊರಹಾಕುವ ಪ್ರಕ್ರಿಯೆ (ಎಲಿಮಿನೇಷನ್‌ ರೌಂಡ್‌) ಆರಂಭಿಸಲಾಗುತ್ತದೆ. ಏಕ ಸದಸ್ಯ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಅಭ್ಯರ್ಥಿ (Candidate), ದ್ವಿ ಸದಸ್ಯ ಕ್ಷೇತ್ರಗಳಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಅಭ್ಯರ್ಥಿಗಳು ಕೋಟಾದಲ್ಲಿ ನಿಗದಿಪಡಿಸಿರುವ ಮತಗಳನ್ನು ತಲುಪಿದಾಗ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಫಲಿತಾಂಶ ಪ್ರಕಟಿಸಲಾಗುತ್ತದೆ. ಒಂದು ವೇಳೆ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡರೂ ಏಕ ಸದಸ್ಯ ಕ್ಷೇತ್ರಗಳಲ್ಲಿ ಮೊದಲ, ದ್ವಿ ಸದಸ್ಯ ಕ್ಷೇತ್ರಗಳಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಅಭ್ಯರ್ಥಿಗಳು ಕೋಟಾ ತಲುಪದಿದ್ದರೂ ಸಹ ಕಣದಲ್ಲಿರುವ ಇತರೆಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದ ಆಧಾರದ ಮೇಲೆ ಅವರನ್ನೇ ವಿಜೇತ ಎಂದು ಘೋಷಿಸಲಾಗುತ್ತದೆ.

ಮೈಸೂರು- ಚಾಮರಾಜನಗರ (Mysuru -Chamarajanagar) ದ್ವಿಸದಸ್ಯ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 6771. ಇದರಲ್ಲಿ ಮೂರನೇ ಒಂದು ಭಾಗ ಪ್ಲಸ್‌ 1 ಮತ ಎಂದರೇ ಕೋಟಾ 2,258 ಮತಗಳಾಗುತ್ತವೆ. ಇಷ್ಟು ಮತ ಪಡೆದರು ಗೆಲ್ಲಲಿದ್ದಾರೆ.

ಈ ಬಾರಿ ಹಾಲಿ ಸದಸ್ಯರಾದ ಆರ್‌. ಧರ್ಮಸೇನ (ಕಾಂಗೆಸ್‌ (Congress), ಸಂದೇಶ್‌ ನಾಗರಾಜ್‌ (ಜೆಡಿಎಸ್‌ -JDS)) ಅವರಿಗೆ ಆಯಾ ಪಕ್ಷಗಳು ಟಿಕೆಟ್‌ ನೀಡಿಲ್ಲ. ಕಾಂಗ್ರೆಸ್‌ನಿಂದ ಆರೋಗ್ಯ ಇಲಾಖೆ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮ್ಮಯ್ಯ, ಜೆಡಿಎಸ್‌ನಿಂದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ. ಬಿಜೆಪಿಯಿಂದ ಡಿ. ದೇವರಾಜ ಅರಸು ಹಿಂದುಳಿದ  ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌. ರಘು ಕಣದಲ್ಲಿದ್ದು, ಪ್ರಬಲ ಪೈಪೋಟಿ ನೀಡಿದ್ದಾರೆ.

ಕನ್ನಡ ಚಳವಳಿ ಪಕ್ಷದಿಂದ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ (Vatal Nagaraj), ಪಕ್ಷೇತರರಾಗಿ ಕೆ.ಸಿ. ಬಸವರಾಜ ಸ್ವಾಮಿ, ಗುರುಲಿಂಗಯ್ಯ, ಆರ್‌. ಮಂಜುನಾಥ್‌ ಕಣದಲ್ಲಿದ್ದಾರೆ.ಕಳೆದ ಐದು ಸಾರ್ವತ್ರಿಕ ಚುನಾವಣೆಗಳಲ್ಲೂ (Election) ಜನತಾ ಪರಿವಾರ ಗೆದ್ದಿದೆ. ಕಾಂಗ್ರೆಸ್‌ (Congress) ನಾಲ್ಕು ಬಾರಿ ಹಾಗೂ ಒಂದು ಉಪ ಚುನಾವಣೆಯಲ್ಲಿ(By Election) ಗೆದ್ದಿದೆ. ಒಂದು ಬಾರಿ ಬಿಜೆಪಿ (BJP) ಗೆದ್ದಿದೆ. ಹೀಗಾಗಿ ಈ ಬಾರಿಯ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

ಮತಗಳ ಎಣಿಕೆ :  ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಮತಗಳ ಎಣಿಕೆಯು ಡಿ.14 ರಂದು ಬೆಳಗ್ಗೆ 8 ಕ್ಕೆ ಆರಂಭವಾಗಲಿದೆ. ಮತದಾನ ಮುಗಿದ ನಂತರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ 393 ಮತಗಟ್ಟೆಗಳಿಂದ ಮತಪೆಟ್ಟಿಗೆಗಳನ್ನು ತಂದು, ಬಿಗಿ ಭದ್ರತೆಯಲ್ಲಿರಿಸಲಾಗಿದೆ. ಫಲಿತಾಂಶ ಅಂದು ಮಧ್ಯಾಹ್ನದ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: 'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ' - ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ