* ವಿಧೇಯಕ ಈವರೆಗೂ ಬಂದಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ
* ಸದನವನ್ನು ಸಂಪೂರ್ಣಗೊಳಿಸಬೇಕು ಎಂಬುದು ನಮ್ಮ ಆಶಯ
* ಅಧಿವೇಶನದಲ್ಲಿ ವಿಷಯಾಧಾರಿತ ಚರ್ಚೆ ಮಾಡಬೇಕು
ಹುಬ್ಬಳ್ಳಿ(ಡಿ.11): ಬೆಳಗಾವಿ ಅಧಿವೇಶನದಲ್ಲಿ(Belagavi Session) ಉತ್ತರ ಕರ್ನಾಟಕ(North Karnataka) ಸಮಸ್ಯೆಗಳ ಕುರಿತು ಚರ್ಚಿಸುವಂತೆ ಈಗಾಗಲೇ ರಾಜಕೀಯ ಪಕ್ಷಗಳಿಗೆ(Political Parties) ಮನವಿ ಮಾಡಿದ್ದೇವೆ ಎಂದು ಹೇಳಿರುವ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti), ಈ ವರೆಗೂ ವಿಧೇಯಕ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪರಿಷತ್ ಚುನಾವಣೆ(Vidhan Parishat Election) ಹಿನ್ನೆಲೆಯಲ್ಲಿ ಮತದಾನ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ(Belagavi) ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಈ ಸಂಬಂಧ ಎಲ್ಲ ಪಕ್ಷಗಳ ಸಭಾ ನಾಯಕರು, ಮುಖಂಡರ ಸಭೆ ನಡೆಸಲಾಗಿದೆ. ಕಾಂಗ್ರೆಸ್‌ನ(Congress) ಎಸ್.ಆರ್ .ಪಾಟೀಲ(SR Patil) ಸಭೆಗೆ ಗೈರಾಗಿದ್ದರು ಎಂದರು.
Covid19: ಬೆಳಗಾವಿ ಕಲಾಪಕ್ಕೆ ಹೊಸ ತಳಿ ಒಮಿಕ್ರೋನ್ ಕಂಟಕ?
ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡದೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದೇವೆ ಎಂದ ಅವರು, ಸದನವನ್ನು ಸಂಪೂರ್ಣಗೊಳಿಸಬೇಕು ಎಂಬುದು ನಮ್ಮ ಆಶಯ. ಚರ್ಚೆಗೆ ಬರುವ ವಿಷಯಗಳ ಬಗ್ಗೆ ಸುದೀರ್ಘ ಅವಲೋಕನ ಮಾಡುವಂತೆ ಸಲಹೆ ಮಾಡಿದ್ದೇವೆ. ಸದಸ್ಯರ ಚರ್ಚೆಗೆ ಹೆಚ್ಚಿನ ಸಮಯ ವ್ಯಯ ಮಾಡಬೇಕು. ವಿಷಯಾಧಾರಿತ ಚರ್ಚೆ ಮಾಡಬೇಕು. ಇದಕ್ಕೆ ಎಲ್ಲರ ಸಹಕಾರಬೇಕೆಂದು ಕೇಳಿದ್ದೇವೆ ಎಂದು ತಿಳಿಸಿದರು.
ಒಂದೂ ಬಿಲ್ ಬಂದಿಲ್ಲ:
ಅಧಿವೇಶನದಲ್ಲಿ ವಿಧೇಯಕಗಳ ಪ್ರಸ್ತಾಪ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಭಾಪತಿ ಹೊರಟ್ಟಿ, ಮೊನ್ನೆ (ಡಿ.9) ವರೆಗೂ ಒಂದೇ ವಿಧೇಯಕ ಬಂದಿಲ್ಲ. ಸಾಮಾನ್ಯವಾಗಿ ಅಧಿವೇಶನಕ್ಕೆ 5 ದಿನ ಮುಂಚಿತವಾಗಿಯೇ ವಿಧೇಯಕಗಳ ಮಾಹಿತಿ ಅಧಿಕೃತವಾಗಿ ಬರಬೇಕು. ದುರದೃಷ್ಟಕರ ಇನ್ನೂ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಮುಖ್ಯಮಂತ್ರಿ, ವಿಪಕ್ಷ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಈ ಹಿಂದೆ ಅಧಿವೇಶನ ನಡೆಯುವಾಗ ಕೇವಲ 20 ನಿಮಿಷ ಇರುವಾಗ ವಿಧೇಯಕ ಮಂಡಿಸಲಾಯಿತು. ಯಾವುದೇ ಚರ್ಚೆ ಇಲ್ಲದೆ 29 ಖಾಸಗಿ ವಿಶ್ವವಿದ್ಯಾಲಯಗಳಿಗೆ(Private Universities) ಅನುಮೋದನೆ ನೀಡಲಾಯಿತು ಎಂದು ಬೇಸರಿಸಿದರು.
ಗಡಿ ನಾಡಿನಲ್ಲಿ ಅಧಿವೇಶನ ಬೇಡ: ಸಚಿವಾಲಯ ಸಿಬ್ಬಂದಿ!
ಕೊರೋನಾ ಹೊಸ ತಳಿ ಒಮಿಕ್ರೋನ್(Omicron) ಭೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸುವ ಕುರಿತು ಪರ-ವಿರೋಧ ಚರ್ಚೆ ಆರಂಭವಾಗಿದೆ. ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಶಾಸಕರೂ, ಮುಖಂಡರು ಮಾತ್ರವಲ್ಲದೆ, ಸಚಿವಾಲಯದ ಸಿಬ್ಬಂದಿ ಕೂಡ ಈ ಪರಿಸ್ಥಿತಿಯಲ್ಲಿ ಗಡಿ ನಾಡಿನಲ್ಲಿ ಅಧಿವೇಶನ ಬೇಡ ಎಂದು ಆಗ್ರಹಿಸಿದ್ದರೆ, ಕಂದಾಯ ಸಚಿವ ಆರ್.ಅಶೋಕ್ ಅವರು ನಿಗದಿಯಂತೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ ಎಂದು ಖಚಿತವಾಗಿ ಹೇಳಿದ್ದರು.
Religious Conversion: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒಪ್ಪಿಗೆ ನೀಡಲಿ: ಮುತಾಲಿಕ್
ಇದೇ 13ರಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ (Suvarna Vidhan Soudha) ನಡೆಯಬೇಕಿರುವ ಚಳಿಗಾಲದ ಅಧಿವೇಶನದ ಸಿದ್ಧತೆಯ ಪರಿಶೀಲನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಡೆಸಿದ್ದರು.
ಡಿ.13ರಿಂದ ಡಿ.24ರವರೆಗೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವುದು ನಿಗದಿಯಾಗಿದೆ. ಕಳೆದ ಎರಡು ವರ್ಷ ಬೆಳಗಾವಿಯಲ್ಲಿ ಅಧವೇಶನ ನಡೆದಿಲ್ಲ. ಈ ಬಾರಿಯೂ ನಡೆಸದಿದ್ದರೆ ಸತತ ಮೂರನೇ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯದಂತೆ ಆಗುತ್ತದೆ. ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದರು. ಆದರೆ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿ ಹಲವರು ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಅಧಿವೇಶನ ನಡೆಸುವಂತೆ ಒತ್ತಾಯಿಸಿದ್ದರು.