ಮಣ್ಣಿನ ಮಗನಿಗೆ ಒಂದು ಅವಕಾಶ ಕೊಡಿ: ಮತ್ತೊಮ್ಮೆ ಸಿಎಂ ಬಯಕೆ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್

Published : Mar 01, 2023, 09:27 PM IST
ಮಣ್ಣಿನ ಮಗನಿಗೆ ಒಂದು ಅವಕಾಶ ಕೊಡಿ: ಮತ್ತೊಮ್ಮೆ ಸಿಎಂ ಬಯಕೆ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್

ಸಾರಾಂಶ

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ನಿಮ್ಮ ಸೇವೆ ಮಾಡಲಿಕ್ಕೆ ಒಂದು ಶುದ್ಧವಾದ ಆಡಳಿತವನ್ನು ಕೊಡಲಿಕ್ಕೆ ಈ ಮಣ್ಣಿನ ಮಗನಿಗೆ ಒಂದು ಅವಕಾಶ ಕೊಡಿ.

ಹಾಸನ (ಮಾ.01): ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ನಿಮ್ಮ ಸೇವೆ ಮಾಡಲಿಕ್ಕೆ ಒಂದು ಶುದ್ಧವಾದ ಆಡಳಿತವನ್ನು ಕೊಡಲಿಕ್ಕೆ ಈ ಮಣ್ಣಿನ ಮಗನಿಗೆ ಒಂದು ಅವಕಾಶ ಕೊಡಿ ಎಂದು ಕೇಳುವ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಖ್ಯಂತ್ರಿ ಆಗುವ ಬಯಕೆಯನ್ನು ಮತ್ತೊಮ್ಮೆ ಬಹಿರಂಗವಾಗಿ ಹೊರಹಾಕಿದ್ದಾರೆ.

 ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗುವ ಬಯಕೆಯನ್ನು ಡಿ.ಕೆ. ಶಿವಕುಮಾರ್‌ ಬಿಚ್ಚಿಟ್ಟಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರಸ್‌ನಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಆಗುವ ಬಯಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೊಂಡಿದ್ದಾರೆ. ಇದು ಕಾಂಗ್ರೆಸ್‌ ಪಾಳಯದಲ್ಲಿ ಮತ್ತೊಮ್ಮೆ ಗದ್ದುಗೆ ಗುದ್ದಾಟದಿಂದ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಕಂಡುಬರುತ್ತಿದೆ.

ನಾವು ಅಧಿಕಾರಕ್ಕೆ ಬಂದ್ರೆ 7ನೇ ವೇತನ ಆಯೋಗ ಜಾರಿ: ಸರ್ಕಾರಿ ನೌಕರರ ಪರ ಕಾಂಗ್ರೆಸ್‌ ಬ್ಯಾಟಿಂಗ್‌

ಬಿಜೆಪಿಯವರು ಸುಳ್ಳು ಕೇಸ್‌ ಹಾಕಿ ಜೈಲಿಗೆ ಕಳಿಸಿದರು: ಕೆ.ಎಸ್. ಈಶ್ವರಪ್ಪ ಅವರು ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿಗೆ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಹೋಗಿದ್ರಾ ಎಂದು ಹೇಳುತ್ತಾರೆ. ಆದರೆ, ನಾನು ಯಾಕೆ ಹೋದೆ ಅಂದ್ರೆ ಅವರ ಪಾರ್ಟಿ ಲೀಡರ್ ಹೇಳಬೇಕು. ಈಶ್ವರಪ್ಪ ಏಕೆ ರಾಜೀನಾಮೆ ಕೊಟ್ಟರು. ಯಾರು ಬರೆದುಕೊಟ್ಟಿರಲಿಲ್ಲ‌ ನಾನು ಇಂತಹವರಿಂದ ಸತ್ತೆ ಅಂತ. ರಾಜಕೀಯ ದೃಷ್ಟಿಯಿಂದ ನನಗೆ ಅವರ ಪಾರ್ಟಿಯವರೇ ನನ್ನ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ನನ್ನನ್ನು ಜೈಲಿಗೆ ಕಳುಹಿಸಿದರು. ನಾನು ರಾಜಕೀಯವಾಗಿ ಒಂದು ತೀರ್ಮಾನವನ್ನು ಮಾಡ್ಕಂಡು ಜೈಲಿಗೆ ಹೋದರು ಚಿಂತೆಯಿಲ್ಲ ಹೋರಾಟ ಮಾಡ್ತಿನಿ ಅಂತಾ ನಾನು ಸಿದ್ದವಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.

ಯಡಿಯೂರಪ್ಪ ಬಿಟ್ಟು, ಬೊಮ್ಮಾಯಿ ಇಟ್ಕಂಡು ಎಲೆಕ್ಷನ್‌ ಮಾಡಲಿ: ಮೋದಿಯವರ ಮುಂದೆ ವೆಂಕ,‌ ನಾಣಿ, ಸೀನಾ ಅವರ ಆಟ ನಡೆಯಲ್ಲ ಎಂಬ ಮಾಜಿಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬಹಳ ಸಂತೋಷ, ಅವರ ನಾಣ್ಯನು‌ ನಡೆಯಲಿಲ್ಲವಲ್ಲ. ಇದು ರಾಜ್ಯದ ಎಲೆಕ್ಷನ್, ರಾಷ್ಟ್ರದ ಎಲೆಕ್ಷನ್ ಅಲ್ಲ. ನಾನು ತಮಿಳುನಾಡು, ಕೇರಳ, ಬಿಹಾರ್‌ ರಾಜ್ಯಕ್ಕೆ ಹೋದರೂ ಎಲೆಕ್ಷನ್ ಭಾಷಣ‌ ಮಾಡ್ಕಂಡು ಬರ್ತನಿ. ಮಲ್ಲಿಕಾರ್ಜುನ ಖರ್ಗೆಯವರು ಯಾರು, ನಾವೆಲ್ಲ ಯಾರೂ ಅಂತ ತಿಳ್ಕಂಡಿದ್ದೀರಾ? ಏನ್ ಕನಕಪುರಕ್ಕೆ ಸೀಮಿತವಾಗಿದ್ದೀವಾ ನಾವೆಲ್ಲ. ನಮ್ಮಲ್ಲೂ ಕೂಡ ಎಲ್ಲಾ ತರಹದ ಶಕ್ತಿ ಇದೆ. ಯಡಿಯೂರಪ್ಪ ಅವರನ್ನು ಮುಂದೆ ಇಟ್ಕಂಡು ಯಾಕೆ ಎಲೆಕ್ಷನ್ ಮಾಡಿದರು. ಯಾಕೆ ಬೊಮ್ಮಯಿ ಅವರನ್ನು ಇಟ್ಕಂಡು ಎಲೆಕ್ಷನ್ ಮಾಡ್ತಿವಿ ಅಂತಾ ಹೇಳಿ ಅವರ ಹೆಸರು ಬಿಟ್ಟು ಈಗ ಮೋದಿಯವರ ಹೆಸರು ಯಾಕೆ ಹೇಳ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ರಾಜ್ಯ ನಾಯಕರಿಲ್ಲ: ಬಿಜೆಪಿಯಲ್ಲೇ ಯಾರು ನಾಯಕರುಗಳಿಲ್ಲ, ರಾಜ್ಯಮಟ್ಟದಲ್ಲೇ ನಾಯಕರುಗಳಿಲ್ಲ. ಅದುಕ್ಕೋಸ್ಕರ ಮೋದಿಯವರ ನಾಯಕತ್ವದಲ್ಲಿ, ಮೋದಿಯವರ ಮುಖ ನೋಡಿ ಓಟು ಕೊಡಿ ಅಂತ ಕೇಳ್ತಿದ್ಧಾರೆ. ಮೋದಿಯವರು ಇಲ್ಲಿ ಆಡಳಿತ ಮಾಡಲು ಆಗಲ್ಲ, ಅಂತ ಕಾಂಗ್ರೆಸ್ ನಿಮ್ಮ ಸರ್ಕಾರ ಎಂದು ಜನ ಎನ್ನುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ತೊಂದರೆ ಕೊಟ್ಟರು ಆಡಳಿತ ಮಾಡಲು ಆಗಲಿಲ್ಲ ಎಂಬಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಅವರ ಅಭಿಪ್ರಾಯವಾಗಿದೆ. ನಾವು ಸಂಪೂರ್ಣವಾಗಿ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದೆವು. ಅವರಿಗೆ ಬಹುಮತ ಇರಲಿಲ್ಲ, ನಾವು ಬೆಂಬಲ ಕೊಟ್ಟಿದ್ದು, ಆದರೆ ಸರ್ಕಾರ ನಡೆಸಬಹುದಿತ್ತು ಎಂದರು.

Assembly election: ಬಿಎಸ್‌ವೈ ಬಗ್ಗೆ ನಮ್ರತೆ ಇದ್ರೆ ಮತ್ತೆ ಸಿಎಂ ಮಾಡಿ: ಡಿಕೆಶಿ

ಬಿಜೆಪಿ ಜನರಿಗೆ ಸ್ಲೋ ಪಾಯಿಸನ್‌ ಕೊಡ್ತಿದೆ: ಈ ಬಿಜೆಪಿ ಸರ್ಕಾರ ದಿನ ಜನರ ಪಿಕ್‌ ಪ್ಯಾಕೇಟ್ ಮತ್ತು ಬದುಕಿದ್ದಂಗೆ ಜನರನ್ನ ಸಾಯಿಸ್ತಾ ಇದ್ದಾರೆ. ದಿನ ಸ್ಲೋ ಪಾಯಿಸನ್ ಕೊಡ್ತಾ ಇದ್ದಾರೆ. ಗ್ಯಾಸ್ ಬೆಲೆ 400 ಇದ್ದಿದ್ದು 1200 ಆಗೋಯ್ತು. ಜನ ಹೆಂಗೆ ಬದುಕಬೇಕು. ಇವರು ಆದಾಯ ಡಬಲ್ ಮಾಡ್ತಿನಿ ಅಂತಾ ಹೇಳಿದ್ರಲಾ ಯಾರ ಆದಾಯ ಡಬಲ್ ಮಾಡಿದ್ರು. ಬೆಲೆ ಏರಿಕೆಯಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿ ಮಾಡಿ ಅಂತ ಯಾಕೆ ಬಡಿದಾಡುತ್ತಿದ್ದಾರೆ. ಎಲ್ಲಾ ಬೆಲೆಗಳು ಜಾಸ್ತಿಯಾಗಿದೆ. ನೀವು ಆದಾಯ ಸೃಷ್ಟಿಮಾಡುವಂತಹ ಸರ್ಕಾರ ಕೊಡಬೇಕು. ನಿಮ್ಮ ಭ್ರಷ್ಟಾಚಾರ ನಿಲ್ಲಿಸಬೇಕು. ನಿಮ್ಮ ಭ್ರಷ್ಟಾಚಾರ ಜಾಸ್ತಿಯಾಗಿದ್ದರಿಂದ ಇವತ್ತು ಭ್ರಷ್ಟಾಚಾರ ನಿಯಂತ್ರಣ ಮಾಡಿದ್ರೆ ಎಲ್ಲಾ ಸಮಸ್ಯೆನು ಬಗೆಹರಿಸಬಹುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!