ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ

By Kannadaprabha News  |  First Published Mar 1, 2023, 9:44 PM IST

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರನ್ನು ಬಿಜೆಪಿ ಪಕ್ಷ ಕಡೆಗಣಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಟೀಕಿಸಿದರು. 


ಮದ್ದೂರು (ಮಾ.01): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರನ್ನು ಬಿಜೆಪಿ ಪಕ್ಷ ಕಡೆಗಣಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಬಿಜೆಪಿ ಸಂಘಟನೆಯಲ್ಲಿ ಅವರ ಪಾತ್ರ ಅಗಾಧವಾಗಿದೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂಬ ಕಾರಣಕ್ಕೆ ಸಂತೋಷದಿಂದ ಕಣ್ಣಿರಾಗಿದ್ದಾರೆ. ಇವತ್ತಿಗೂ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇನೆ ಎಂಬ ಉದ್ದೇಶದೊಂದಿಗೆ ದುಡಿಯುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಅವರದ್ದೆ ಪಕ್ಷದಲ್ಲಿ ಸ್ಥಾನಮಾನವಿಲ್ಲ. ಕಷ್ಟದಲ್ಲಿ ಉಸಿರಾಡುತ್ತಿದ್ದಾರೆ. ಚೇರ್‌ ಎಳೆದುಕೊಂಡು ಕುಳಿತ್ತಿದ್ದಾರೆ. ಮೊದಲು ಅವರ ಪಕ್ಷದ ಕುರಿತು ಕಾಳಜಿ ಇದ್ದರೆ ಸಾಕು. ಬೇರೆ ಪಕ್ಷದ ಬಗ್ಗೆ ಉಸಾಬರಿ ಏಕೆ ಎಂದು ಪ್ರಶ್ನಿಸಿದರು. ಕೋವಿಡ್‌ ಸಮಯದಲ್ಲಿ ಜನರು ಸಂಕಷ್ಟದಲ್ಲಿದ್ದಾಗ ಲಸಿಕೆ ತೆಗೆದುಕೊಳ್ಳೋದು ಬೇಡ ಅಂತ ಹೇಳಿದ ಕಾಂಗ್ರೆಸ್‌ನವರು ಸ್ವಾರ್ಥಿಗಳು. ಜಾತಿ ಜಾತಿಗಳ ನಡುವೆ ಸಂಘರ್ಷ ತಂದ ಕೀರ್ತಿ ಕಾಂಗ್ರೆಸ್‌ನವರಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.

Tap to resize

Latest Videos

ಮಾ.3ಕ್ಕೆ ದೇವನಹಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸಚಿವ ಸುಧಾಕರ್‌

ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ. ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿದ್ದರು. ಆದರೆ, ನಿವೃತ್ತಿಯಾದ್ರ. ಇವರಿಗೆ ನಿವೃತ್ತಿ ಎಂಬುದು ಇಲ್ವ ಎಂದು ಪ್ರಶ್ನೆ ಮಾಡಿದರು. ಪಾತಾಳದಿಂದ ಹಿಡಿದು ಆಕಾಶದವರೆಗೂ ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್‌. ನಾವು ಯಾವ ಜಾತಿ ಧರ್ಮದ ನಡುವೆ ಒಡಕುಂಟು ಮಾಡುವ ಕೆಲಸ ಮಾಡಿಲ್ಲ. ಟಿಪ್ಪು ಯಾವ ದೇಶದವನು, ನ್ವಾಲ್ವಡಿ ಅಭಿವೃದ್ಧಿ ಕಾರ್ಯಗಳು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಯದುವಂಶದ ರಾಜ ಮನೆತನಕ್ಕೆ ಗೌರವ ನೀಡುತ್ತೇವೆ. ಇವರಿಗೆ ಟಿಪ್ಪು ಮೇಲೆ ಯಾಕೆ ಅಷ್ಟೊಂದು ಪ್ರೀತಿ ಎಂದು ಸಿದ್ಜರಾಮಯ್ಯರನ್ನು ಕುಟುಕಿದರು.

ಕಾಂಗ್ರೆಸ್‌ ಪಕ್ಷದವರೇ ನಿರುದ್ಯೋಗಿಗಳು ಕಾಂಗ್ರೆಸ್‌ನವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ನಾವು ಕಥೆ, ಗೀತೆ ಹೇಳ್ಕೊಂಡು ಓಡಾಡುವುದಿಲ್ಲ. ನಾವು ಏನನ್ನು ಮಾತನಾಡುತ್ತೇವೆ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಇವರ ಕೊಡುಗೆ ಏನಿದೆ ಎಂದು ಹೇಳಿದರು. ಹಿಂದು ರಾಷ್ಟ್ರದಲ್ಲಿ ಇದ್ದುಕೊಂಡು ಹಿಂದೂ, ಹಿಂದುತ್ವದ ವಿರೋಧಿ ಹೇಳಿಕೆ ನೀಡುತ್ತಾರಲ್ಲ ಇವರಿಗೆ ಏನಾದರೂ ಬುದ್ಧಿ ಇದೇಯಾ. ಕಾಂಗ್ರೆಸ್‌ ಪಕ್ಷದಿಂದ ಸಮಾಜವನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮ ಎಂದು ಸಚಿವರು ಕಿಡಿಕಾರಿದರು.

ಕಲಿಕೆ, ಕೌಶಲ್ಯ ತಕ್ಕಂತೆ ಉದ್ಯೋಗಕ್ಕೆ ಬದ್ಧ: ವಿದ್ಯಾರ್ಥಿಗಳು ಮತ್ತು ಯುವಕರಿಗೆ ಕಲಿಕೆ ಹಾಗೂ ಕೌಶಲ್ಯಾಭಿವೃದ್ಧಿಗೆ ತಕ್ಕಂತೆ ಉದ್ಯೋಗ ಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ, ರಾಜ್ಯ ಸರ್ಕಾರಗಳು ಮಾಡುತ್ತಿದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎಸ್‌.ಅಶ್ವಥ್‌ ನಾರಾಯಣ್‌ ಮಂಗಳವಾರ ಹೇಳಿದರು. ಪಟ್ಟಣದ ಗ್ಲೋಬಲ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆವರಣದಲ್ಲಿ ಮಂಗಳವಾರ ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್‌, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್‌ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ರೇವಣ್ಣ, ಎಚ್‌​ಡಿ​ಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ

ಶೈಕ್ಷಣಿಕವಾಗಿ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ. ಜ್ಞಾನದ ಜೊತೆಗೆ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಸಿಗಬೇಕು. ಉದ್ಯೋಗದ ಸ್ಪಷ್ಟತೆ ಇರಬೇಕು. ಇದಕ್ಕಾಗಿ ಸರ್ಕಾರಗಳು ಕಾರ್ಯಕ್ರಮ ರೂಪಿಸುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕಲಿಕೆ ಜೊತೆಗೆ ಕೌಶಲ್ಯತೆಗೆ ತಕ್ಕಂತೆ ಉದ್ಯೋಗ ಕೊಡುವ ಪ್ರಯತ್ನಿಸಲಾಗುತ್ತಿದೆ ಎಂದರು. ಮಂಡ್ಯ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಉತ್ತಮ ಸಂಸ್ಥೆ ಸ್ಥಾಪನೆ ಮಾಡಲಾಗಿದೆ. ಉದ್ಯೋಗ ಪಡೆಯಲು ತಿಳಿವಳಿಕೆ, ಸ್ಪಷ್ಟತೆ ಇರಬೇಕು. ಇದಕ್ಕಾಗಿ ತರಬೇತುದಾರ ಮೂಲಕ ನಿರುದ್ಯೋಗಿಗಳ ಭವಿಷ್ಯ ರೂಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಯುವಜನರ ಪ್ರತಿಯೊಂದು ಕನಸು ನನಸು ಮಾಡಲು ಮುಂದಾಗುತ್ತಿದೆ ಎಂದರು.

click me!