ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ನೀಡಲಿ: ಯತೀಂದ್ರ ಸಿದ್ದರಾಮಯ್ಯ

By Kannadaprabha News  |  First Published Mar 5, 2023, 1:20 AM IST

ಭ್ರಷ್ಟಾಚಾರದ ಬಗ್ಗೆ ವಿಪಕ್ಷಗಳ ವಿರುದ್ಧ ಆರೋಪಿಸುವ ಬಿಜೆಪಿ ಅವರ ಮನೆಯ ಅಂಗಳದಲ್ಲೇ ಈಗ ಭ್ರಷ್ಟಾಚಾರದ ಕೂಗು ಕೇಳಿ ಬಂದಿದ್ದು ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವರುಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು. 


ಮೈಸೂರು (ಮಾ.05): ಭ್ರಷ್ಟಾಚಾರದ ಬಗ್ಗೆ ವಿಪಕ್ಷಗಳ ವಿರುದ್ಧ ಆರೋಪಿಸುವ ಬಿಜೆಪಿ ಅವರ ಮನೆಯ ಅಂಗಳದಲ್ಲೇ ಈಗ ಭ್ರಷ್ಟಾಚಾರದ ಕೂಗು ಕೇಳಿ ಬಂದಿದ್ದು ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವರುಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು. 

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಎಲ್ಲರಿಗೂ ಗೊತ್ತು. 40 ಪರ್ಸೆಂಟ್‌ ಸರ್ಕಾರ ಅನ್ನೋದು ಜಗಜಾಹಿರಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಭ್ರಷ್ಟಾಚಾರ ಮಾಡಿಕೊಂಡು ಬಂದಿದೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ, ಅಮಿತ್‌ ಶಾ ಪ್ರತಿ ರಾಜ್ಯಗಳಲ್ಲೂ ಚುನಾವಣೆ ಬಂದರೆ ಪ್ರಚಾರ ಮಾಡೋದರಲ್ಲಿ ಕಾಲ ಕಳೆಯುತ್ತಾರೆ. ಆಡಳಿತ ಹೇಗೆ ನಡೆಸುತ್ತಾರೋ ಗೊತ್ತಿಲ್ಲ. 

Latest Videos

undefined

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಇವರು ಪ್ರಧಾನ ಮಂತ್ರಿ, ಗೃಹ ಮಂತ್ರಿಗಳಾಗುವ ಬದಲು ಪ್ರಚಾರಕರಾಗಿದ್ದಾರೆ. ಕರ್ನಾಟಕದಲ್ಲಿ ಅತಿವೃಷ್ಠಿಯಾಗಿ ಪ್ರವಾಹವಾದಾಗ, ಕೋವಿಡ್‌ ಸಮಯದಲ್ಲಿ ಸಾವು ನೋವಾದಾಗ ಯಾರು ಬರಲಿಲ್ಲ. ಈಗ ನಾಚಿಕೆ ಇಲ್ಲದೆ ಎಲೆಕ್ಷನ್‌ ಇದೆ ಅಂತ ಮೇಲಿಂದ ಮೇಲೆ ಬರುತ್ತಾ ಇದ್ದಾರೆ. ಈಗ ಇವರದೇ ಸರ್ಕಾರದ ಶಾಸಕ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದಿದ್ದಾರೆ. ಇದರ ಬಗ್ಗೆ ಯಾರೂ ಚಕಾರ ಎತ್ತಲ್ಲ. ಇದಕ್ಕೆ ಪ್ರಧಾನಿಯೇ ನೇರ ಹೊಣೆ ಎಂದು ಅವರು ಆರೋಪಿಸಿದರು.

ಬಿಜೆಪಿ ಹೇಳಿಕೆ ಹಾಸ್ಯಾಸ್ಪದ: ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಇಲ್ಲೇ ಸ್ಪರ್ಧಿಸಬೇಕು ಎಂದು ಕೋಲಾರ, ಬಾದಾಮಿ, ವರುಣ ಹೀಗೆ ಅನೇಕ ಭಾಗದಲ್ಲಿ ಅವರ ಅಭಿಮಾನಿಗಳು ಆಗ್ರಹಿಸುತ್ತಿರುವುದರಿಂದ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟದಲಿದ್ದಾರೆ ಎಂಬ ಬಿಜೆಪಿ ಅವರ ಹೇಳಿಕೆ ಹಾಸ್ಯಸ್ಪದವಾಗಿದೆ. ಸಿದ್ದರಾಮಯ್ಯ ಅವರ ಜನಪರ ಆಡಳಿತ ಮೆಚ್ಚಿ ರಾಜ್ಯದ ಅನೇಕ ಕಡೆ ಸ್ಪರ್ಧೆ ಮಾಡುವಂತೆ ಅವರ ಬೆಂಬಲಿಗರು ಹೋದ ಕಡೆಯಲ್ಲ ತಾವೇ ಚುನಾವಣೆ ಖರ್ಚಿಗೆ ಹಣ ನೀಡುವುದಾಗಿ ಹೇಳುತ್ತಿದ್ದಾರೆ. 

ಕೆಲವರು ಪತ್ರ ಬರೆದು ಆಗ್ರಹ ಮಾಡುತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಇಂಗಿತ ವ್ಯಕ್ತಪಡಿಸಿದ್ದದಾರೆ ಎಂದು ಹೇಳಿದರು. ಬೇರೆ ಪಕ್ಷದ ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ವಿಷಯ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಮನಸ್ಫೂರ್ತಿಯಾಗಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಯಾರೇ ಬಂದರು ಪಕ್ಷ ಸ್ವಾಗತಿಸಲಿದೆ ಎಂದು ಅವರು ತಿಳಿಸಿದರು.

ಬಿಜೆಪಿಯನ್ನು ಕಿತ್ತೊಗೆಯಿರಿ: ಸಂವಿಧಾನ ವಿರೋಧಿ ಬಿಜೆಪಿಯನ್ನು ರಾಜ್ಯ ಮತ್ತು ದೇಶದಿಂದ ಕಿತ್ತೊಗೆಯಬೇಕು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು. ಆರ್‌. ಧ್ರುವನಾರಾಯಣ ಅವರ ಅವಧಿಯ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಸವಾಲು ಹಾಕಿದರೆ ಏನಾಗುತ್ತೆ ಎಂದು ನಮಗಿಂತ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು: ಬಿ.ವೈ.ವಿಜಯೇಂದ್ರ

ಅಂಬೇಡ್ಕರ್‌ ಅವರು ಸಂವಿಧಾನ ಕೊಡದಿದ್ದರೆ ನಾವು ಇನ್ನೊಬ್ಬರ ಅಡಿಯಾಳಾಗಿ ಇರಬೇಕಾಗಿತ್ತು. ಇವತ್ತು ಅವರ ಶ್ರಮದಿಂದ ಸಮಾಜದಲ್ಲಿ ಹಿಂದುಳಿದವರು ದಲಿತರು ಹಾಗೂ ಶೋಷಿತ ಸಮಾಜದಲ್ಲಿ ಸ್ವತಂತ್ರ ಜೀವನ ನಡೆಸಲು ಸಾಧ್ಯವಾಗಿದೆ. ಸಂವಿಧಾನ ಸಿಕ್ಕ ಫಲವಾಗಿ ನಮ್ಮ ತಂದೆಯವರು ಮುಖ್ಯಮಂತ್ರಿಯಾಗಲು ನಾನು ಶಾಸಕನಾಗಲು ಸಾಧ್ಯವಾಯಿತು ಎಂದರು.

click me!