ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ್ದು ಇವರೊಬ್ಬರೇನಾ? ನಾವು ಯಾರೂ ಹುಟ್ಟಿಲ್ವ? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶೆಪ್ಪನವರ ವಾಗ್ದಾಳಿ ನಡೆಸಿದರು.
ಬಾಗಲಕೋಟೆ (ಏ.20): ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ್ದು ಇವರೊಬ್ಬರೇನಾ? ನಾವು ಯಾರೂ ಹುಟ್ಟಿಲ್ವ? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶೆಪ್ಪನವರ ವಾಗ್ದಾಳಿ ನಡೆಸಿದರು.
ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ವಿಚಾರ ಸಂಬಂಧ ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಶಾಸಕ, ತಮ್ಮ ಬಿಜೆಪಿ ಸರ್ಕಾರ ಇದ್ದಾಗ 2 ಎ ಮೀಸಲಾತಿ ಕೊಡಿಸಲು ಆಗಲಿಲ್ಲ, ಈಗ ಮಾತನಾಡ್ತಿದ್ದಾರೆ. ನಿಮಗೆ ಧಮ್ಮಿದ್ರೆ ತಾಕತ್ತಿದ್ದರೆ ನಿಮ್ಮ ಅಧಿಕಾರ ಅವಧಿಯಲ್ಲಿ ಕೊಡಿಸಬೇಕಾಗಿತ್ತು, ಈಗ ನಮ್ಮ ಬಗ್ಗೆ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡೋದಲ್ಲ, ನಮಗೂ ಧಮ್ಮಿದೆ, ತಾಕತ್ತಿದೆ. ನಮಗೆ ಯಾವಾಗ ಏನು ಮಾಡಬೇಕೆಂದು ಗೊತ್ತಿದೆ ಎಂದು ತಿರುಗೇಟು ನೀಡಿದರು.
undefined
ನಾನು ಸಿಎಂ ಆದ್ರೆ ಪಾಕಿಸ್ತಾನ ಪರ ಕೂಗೋರನ್ನ ಎನ್‌ಕೌಂಟರ್ ಮಾಡೋಕೆ ಪೊಲೀಸರಿಗೆ ಫುಲ್ ಪರ್ಮಿಷನ್ ಕೊಡ್ತೇನೆ: ಯತ್ನಾಳ್
ನಿಮಗೆ ಧಮ್ಮಿದ್ರೆ ತಾಕತ್ತಿದ್ದರೆ ಈಗಲಾದರೂ ತಹಶೀಲ್ದಾರ್ ಕಚೇರಿ 2ಡಿ ಸರ್ಟಿಫಿಕೇಟ್ ಆದರೂ ಕೊಡಿಸಲಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು ಆಣೆ ಪ್ರಮಾಣ ಮಾಡಿದ್ರೂ. 2ಎ ಮೀಸಲಾತಿ ಕೊಡಿಸಲು ಆಗಲಿಲ್ಲ. ಈಗ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಪಂಚಮಸಾಲಿ ಸಮಾಜದ ಹೋರಾಟದಲ್ಲಿ ನಾನು ಭಾಗವಹಿಸಿದ್ದೇ ಪಾದಯಾತ್ರೆಯನ್ನ ಮಾಡಿದ್ದೇನೆ. ಬಾಯಿಗೆ ಬಂದಂಗೆ ಮಾತನಾಡುತ್ತಾ ಹೋದರೆ ಜನರೇ ಇಂದಲ್ಲ ನಾಳೆ ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಮುಗಿದ 15 ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ; ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್
ದೇಶದಲ್ಲಿ ಕಾಂಗ್ರೆಸ್ ಗೆದ್ದರೆ ರೋಜಾ ರಂಜಾನ್ ಮಾಡಬೇಕಾಗುತ್ತದೆ ಎಂದ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಕಾಶೆಪ್ಪನವರು, ಮೊದಲು ತಾವು ಯಾವ ದೇಶದಲ್ಲಿ ಹುಟ್ಟಿದ್ದೇವೆ ಅನ್ನೋದನ್ನ ತಿಳಿದುಕೊಳ್ಳಲಿ. ಇವರೇನು ಬೇರೆ ದೇಶದಿಂದ ಬಂದಿದ್ದಾರೆ ಏನು ಅನ್ನುವುದನ್ನ ಹೇಳಲಿ. ಇದು ಭಾರತ ಜಾತ್ಯಾತೀತ ರಾಷ್ಟ್ರ, ಇಲ್ಲಿ ಎಲ್ಲರಿಗೂ ಬದುಕಲು ಹಕ್ಕಿದೆ. ಈ ಹಿಂದೆ ಅವರು ಕೂಡ ಜನತಾದಳ ಪಕ್ಷದಲ್ಲಿದ್ದಾಗ ತಲೆ ಮೇಲೆ ಟೋಪಿ ಕೈಯಲ್ಲಿ ಖಡ್ಗವನ್ನು ಹಿಡಿದಿದ್ದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.