ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನಕ್ಕೆ ಹೆಚ್ಚು ಬರಲಿಲ್ಲ. ಬಂದಿದ್ದರೆ ಹೊಳೆನರಸೀಪುರದ ನಮ್ಮ ಅಭ್ಯರ್ಥಿಯೂ ಸೇರಿ ಇನ್ನೂ ಮೂರು ಸ್ಥಾನಗಳನ್ನು ಗೆಲ್ಲುತ್ತಿದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಹಾಸನ (ಏ.19): ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನಕ್ಕೆ ಹೆಚ್ಚು ಬರಲಿಲ್ಲ. ಬಂದಿದ್ದರೆ ಹೊಳೆನರಸೀಪುರದ ನಮ್ಮ ಅಭ್ಯರ್ಥಿಯೂ ಸೇರಿ ಇನ್ನೂ ಮೂರು ಸ್ಥಾನಗಳನ್ನು ಗೆಲ್ಲುತ್ತಿದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ತಪ್ಪಿಸಿಕೊಳ್ಳಬಾರದು ಅಂತಾ ಬಂದಿದ್ದೇನೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲೋದು ನೂರಕ್ಕೆ ನೂರು ಸತ್ಯ ಎಂದರು.
undefined
ಮನೆಮನೆ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಅಪಘಾತದಲ್ಲಿ ಸಾವು; ಬಿಜೆಪಿ ಆಕ್ರೋಶ
ಹೊಳೆನರಸೀಪುರ ಜನರು ನನಗೆ ಯಾವಾಗಲೂ ಅಭಿಮಾನದಿಂದ ಕಂಡಿದ್ದೀರಾ. ಅದ್ರಲ್ಲೂ ಹಳೇ ಮೈಸೂರಿನವರು ಬಹಳ ಅಭಿಮಾನ ಪ್ರೀತಿಯಿಂದ ಕಂಡಿದ್ದೀರಿ. ನಾನು ಯಾವಾಗಲೂ ಚಿರಋಣಿ ಅಂತಾ ಹೇಳ್ತೇನೆ. ಈ ಬಾರಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಲೀಡ ಕೊಡ್ತೀರಿ, ಈ ಬಾರಿ ಜೆಡಿಎಸ್ ಅಭ್ಯರ್ಥಿ ಸೋಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇಹಾ ಹಿರೇಮಠ ಕೊಲೆ ಪ್ರಕರಣ: ಮತಾಂತರ ಮಾಡಲೆಂದೇ ಲವ್ ಜಿಹಾದ್ -ಸಿಟಿ ರವಿ ಆಕ್ರೋಶ
ಈಗ ಜೆಡಿಎಸ್‌ನವರು ಬಿಜೆಪಿ ಜೊತೆ ಸಮ್ಮಿಶ್ರ ಮಾಡಿಕೊಂಡಿದ್ದಾರೆ. ಅದೇನೋ ಹೇಳ್ತಾರಲ್ಲಾ ಇದ್ದುದ್ದನ್ನ ಇದ್ದಂಗೆ ಹೇಳಿದ್ರೆ ಎದೆಗೆ ಒದ್ರಂತೆ ಹಂಗೆ ದೇವೇಗೌಡರು ಈಗ ಬಿಜೆಪಿ ಜೊತೆ ಸೇರ್ಕೊಂಡಿದ್ದಾರೆ ಈಗ ಅವರೂ ಕೋಮುವಾದಿಗಳಾಗಿದ್ದಾರೆ. ಸತ್ಯ ಹೇಳಿದ್ರೆ ಗರ್ವಭಂಗ ಮಾಡ್ತೇನೆ ಅಂತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಸೋತಿದ್ರು. ಆಗ ನನ್ನಿಂದ ತಪ್ಪಾಗಿದೆ. ಆ ತಪ್ಪನ್ನು ಸರಿ ಮಾಡೋದಕ್ಕೆ ಈ ಬಾರಿ ಬಂದಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಎಂದು ಮನವಿ ಮಾಡಿದರು..