ದುರ್ಗಾದಲ್ಲಿ ಶಾಸಕ ವೀರೇಂದ್ರ ಪಪ್ಪಿ ಕುಟುಂಬದ ದರ್ಬಾರ್‌!

Published : Jul 29, 2023, 06:59 AM IST
ದುರ್ಗಾದಲ್ಲಿ ಶಾಸಕ ವೀರೇಂದ್ರ ಪಪ್ಪಿ ಕುಟುಂಬದ ದರ್ಬಾರ್‌!

ಸಾರಾಂಶ

ರಾಜಕಾರಣದ ವಿಚಾರದಲ್ಲಿ ಚಿತ್ರದುರ್ಗದ ಪ್ರಶ್ನೆ ಬಂದಾಗ ತಟ್ಟನೆ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ನೆನಪಾಗುತ್ತಾರೆ. ನೈತಿಕ ರಾಜಕಾರಣಕ್ಕೊಂದು ಅಗ್ರ ಪಂಕ್ತಿ ಒದಗಿಸಿದ್ದ ನಿಜಲಿಂಗಪ್ಪ, ಕುಟುಂಬ ರಾಜಕಾರಣದಿಂದ ದೂರ ಉಳಿದವರು. ಈಗ ಪರಿಸ್ಥಿತಿ ತೀರಾ ಉಲ್ಟಾಆಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ (ಜು.29):  ರಾಜಕಾರಣದ ವಿಚಾರದಲ್ಲಿ ಚಿತ್ರದುರ್ಗದ ಪ್ರಶ್ನೆ ಬಂದಾಗ ತಟ್ಟನೆ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ನೆನಪಾಗುತ್ತಾರೆ. ನೈತಿಕ ರಾಜಕಾರಣಕ್ಕೊಂದು ಅಗ್ರ ಪಂಕ್ತಿ ಒದಗಿಸಿದ್ದ ನಿಜಲಿಂಗಪ್ಪ, ಕುಟುಂಬ ರಾಜಕಾರಣದಿಂದ ದೂರ ಉಳಿದವರು. ಈಗ ಪರಿಸ್ಥಿತಿ ತೀರಾ ಉಲ್ಟಾಆಗಿದೆ.

ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕ ವೀರೇಂದ್ರ ಪಪ್ಪಿ(Veerendra puppy MLA) ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಹೊಸ ಭಾಷ್ಯ ಬರೆದಂತೆ ಕಾಣಿಸುತ್ತಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಚಿತ್ರದುರ್ಗದಲ್ಲಿ ಶಾಸಕರೇ ಅಟೆಂಡ್‌ ಮಾಡಬೇಕೆಂದೇನೂ ಇಲ್ಲ. ಶಾಸಕರ ಅಣ್ಣ, ಅಕ್ಕ, ಭಾವ ಯಾರಾದರೂ ಸರಿ ಕರೆದುಕೊಂಡು  ಹೋಗಿ ಕಾರ್ಯಕ್ರಮ ಮುಗಿಸಿಕೊಳ್ಳುವ ಧಾವಂತ ಚಿತ್ರದುರ್ಗದಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಕಾರ್ಯಕ್ರಮಕ್ಕೆ ಕರೆಯಲು ಶಾಸಕರ ನಿವಾಸಕ್ಕೆ ಎಡತಾಕುವವರಿಗೆ ಅಲ್ಲಿರುವ ಅನುಯಾಯಿಗಳು ಕಾರ್ಯನಿಮಿತ್ತ ಶಾಸಕರು ಡೆಲ್ಲಿಯಲ್ಲಿದ್ದಾರೆ, ಗೋವಾದಲ್ಲಿ ಇದ್ದಾರೆ, ಬೆಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿ ರವಾನಿಸುತ್ತಾರೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಪಪ್ಪಿ ಅಣ್ಣ ಇಲ್ಲದಿದ್ದರೇನಂತೆ ! ನಾಗರಾಜಣ್ಣ ಬರ್ತಾರೆ, ವೀಣಕ್ಕಗೆ ಅಟೆಂಡ್‌ ಮಾಡಲು ಹೇಳ್ತೀವಿ ಎಂಬ ಸಂದೇಶ ರವಾನೆ ಮಾಡುತ್ತಾರೆ.

ನಂತರ ಎಂದಿನಂತೆ ಆಹ್ವಾನ ಪತ್ರಿಕೆ ಮುದ್ರಣವಾಗುತ್ತದೆ. ಶಾಸಕರು ಉದ್ಘಾಟನೆಯೋ ಅಥವಾ ಅಧ್ಯಕ್ಷತೆ ಜವಾಬ್ದಾರಿ ವಹಿಸಲಾಗಿರುತ್ತದೆ. ಶಾಸಕರ ಬದಲಾಗಿ ಅವರ ಅಣ್ಣ ನೇರÜವಾಗಿ ಕಾರ್ಯಕ್ರಮ ಅಟೆಂಡ್‌ ಮಾಡಿ ನಾಲ್ಕು ಮಾತುಗಳನ್ನಾಡಿ ನಿರ್ಗಮಿಸುತ್ತಾರೆ. ಕಾರ್ಯಕ್ರಮ ಸಂಯೋಜಕರು ಶಾಸಕ ವೀರೇಂದ್ರ ಪಪ್ಪಿ ಅವರು ಬಿಜಿ ಇದ್ದುದರಿಂದ ಅವರ ಬದಲಾಗಿ ಅವರ ಸಹೋದರ ನಾಗರಾಜ್‌ ಬಂದಿದ್ದಾರೆ ಎಂದು ಅನೌನ್ಸ್‌ ಮಾಡುತ್ತಾರೆ. ಅಷ್ಟರ ಮಟ್ಟಿಗೆ ದುರ್ಗದ ಮಂದಿ ಶಾಸಕರ ಬದಲಿಗೆ ಅವರ ಅಣ್ಣ ನಾಗರಾಜ್‌ರಲ್ಲಿ ವೀರೇಂದ್ರ ಪಪ್ಪಿ ಅವರನ್ನು ಕಾಣತೊಡಗಿದ್ದಾರೆ.

 

ವೀರೇಂದ್ರ ಪಪ್ಪಿ ಅಧಿಕಾರ ಸ್ವೀಕಾರ ಕಾನೂನು ಬಾಹಿರ, ಹೈಕೋರ್ಟ್‌ಗೆ ರೀಟ್ ಅರ್ಜಿ

ಶುಕ್ರವಾರ ಚಿತ್ರದುರ್ಗದ ಚೋಳಗಟ್ಟಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕೌಶಲ್ಯಾಭಿವೃದ್ಧದ್ಧಿ ತರಬೇತಿ ಕೇಂದ್ರದ ಉದ್ಘಾಟನೆಯಲ್ಲಿ ವೀರೇಂದ್ರ ಪಪ್ಪಿ ಸಹೋದರ ನಾಗರಾಜ್‌ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬರಬೇಕಿತ್ತು. ಅವರು ಬಂದಿರಲಿಲ್ಲ. ವಿಪ ಸದಸ್ಯ ಕೆ.ಎಸ್‌.ನವೀನ್‌ ಪಾಲ್ಗೊಂಡಿದ್ದರು. ತಮ್ಮಪಕ್ಕ ಕುಳಿತುಕೊಳ್ಳಬೇಕಾಗಿದ್ದ ಶಾಸಕರ ಬದಲಿಗೆ ಅವರ ಸಹೋದರ ಆಸೀನರಾಗಿದ್ದದ್ದು ಅವರಿಗೆ ಅಚ್ಚರಿ ತರಿಸಿತು.

ಚಿತ್ರದುರ್ಗದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಅಂತರ ಕಾಲೇಜು ವಿದ್ಯಾಲಯದ ಪುರುಷರು ಮತ್ತು ಮಹಿಳೆಯರ ಬ್ಯಾಡ್ಮಿಂಮಿಟನ್‌ ಪಂದ್ಯಾವಳಿಗಳ ಉದ್ಘಾಟನೆಗೆ ಶಾಸಕ ವೀರೇಂದ್ರ ಪಪ್ಪಿ ಬರಬೇಕಿತ್ತು. ಇಲ್ಲಿಗೂ ನಾಗರಾಜ್‌ ಶಾಸಕರ ಬದಲಾಗಿ ಕಾರ್ಯಕ್ರಮ ಅಟೆಂಡ್‌ ಮಾಡಿ ನಿರ್ಗಮಿಸಿದರು. ಹತ್ತು ದಿನಗಳ ಹಿಂದೆ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗಣಿ ಗುತ್ತಿಗೆದಾರರು, ಟ್ರಾನ್ಸ್‌ಪೋರ್ಚ್‌ ಮಾಲೀಕರ ಸಭೆ ಕರೆಯಲಾಗಿದ್ದು ಶಾಸಕ ವೀರೇಂದ್ರ ಪಪ್ಪಿ ಭಾಗ​ವ​ಹಿ​ಸ​ಬೇ​ಕಿ​ತ್ತು. ಇಲ್ಲಿಯೂ ಕೂಡ ನಾಗರಾಜ್‌ ಹಾಜರಾಗಿ ಮಾತುಕತೆ ನಡೆಸಿದರು.

ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಪಾಲ್ಗೊಳ್ಳಬೇಕಿತ್ತು. ಅಚ್ಚರಿ ಎಂದರೆ ಇಲ್ಲಿ ವೀರೇಂದ್ರ ಪಪ್ಪಿ ಅವರ ಅಕ್ಕ ವೀಣಾ ಸಮಾಜ ಸೇವಕಿ ಹೆಸರಲ್ಲಿ ವೇದಿಕೆ ಏರಿ ನಾಲ್ಕು ಮಾತನಾಡಿ ನಿರ್ಗಮಿಸಿದರು. ಹೀಗೆ ನಡೆಯತ್ತಾ ಸಾಗಿದೆ ವೀರೇಂದ್ರ ಪಪ್ಪಿ ಅವರ ಕುಟುಂಬದ ದರ್ಬಾರ್‌.

ವೀರೇಂದ್ರ ಪಪ್ಪಿ ಅವರ ಚಳ್ಳಕೆರೆ ನಿವಾಸ ಹಾಗೂ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಈಗಲೂ ನಾಗರಾಜ್‌ ಅವರೇ ಸಾರ್ವಜನಿಕರ ಅಹವಾಲು ಆಲಿಸುತ್ತಾರೆ. ಮನವಿ ಸ್ವೀಕರಿಸುತ್ತಾರೆ. ನಾಗರಾಜ್‌ ಅವರ ಭೇಟಿ ಮಾಡಿದರೆ ಶಾಸಕರ ಸಂಪರ್ಕ ಮಾಡಿ ಬಂದಂತೆ ಎಂಬ ವಾತಾವರಣ ಸೃಷ್ಟಿಯಾಗಿದೆ.

ಕಾಮಗಾರಿ ಪರಿಶೀಲಿಸುವ ತನಕ ಹಣ ಪಾವತಿಸುವಂತಿಲ್ಲ: ಶಾಸಕ ವೀರೇಂದ್ರ ಪಪ್ಪಿ ಸೂಚನೆ

ಈ ಹಿಂದೆ ಹಿರಿಯೂರು ವಿಧಾಸನಭೆ ಕ್ಷೇತ್ರದ ಶಾಸಕಿಯಾಗಿದ್ದ ಪೂರ್ಣಿಮಾ ಬದಲು ಅವರ ಪತಿ ಶ್ರೀನಿವಾಸ್‌ ಅಧಿಕಾರಿಗಳ ಸಭೆ ನಡೆಸುವುದು, ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದ ಮಾಡುತ್ತಿದ್ದರು. ಸಾರ್ವಜನಿಕವಾಗಿ ತೀವ್ರ ಟೀಕೆಗಳು ಕೇಳಿಬಂದಾಗ ಶ್ರೀನಿವಾಸ್‌ ಹಿಂದೆ ಸರಿದಿದ್ದರು. ಆದರೆ ಜಿಲ್ಲಾ ಕೇಂದ್ರದಲ್ಲಿ ಶಾಸಕರ ಬದಲಾಗಿ ಅವರ ಕುಟುಂಬದ ಸದಸ್ಯರು ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ