ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ: ಶಾಸಕ ರಾಜುಗೌಡ

By Kannadaprabha News  |  First Published Nov 3, 2022, 5:43 PM IST

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ ಎಂದು ಮಾಜಿ ಸಚಿವ ಹಾಗೂ ಸುರಪುರ ಶಾಸಕ ರಾಜುಗೌಡ ತಿಳಿಸಿದರು. 


ಹೊಸಕೋಟೆ (ನ.03): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ ಎಂದು ಮಾಜಿ ಸಚಿವ ಹಾಗೂ ಸುರಪುರ ಶಾಸಕ ರಾಜುಗೌಡ ತಿಳಿಸಿದರು. ಪರಿಶಿಷ್ಟ ಸಮುದಾಯದ ಸಮಾವೇಶದ ಪ್ರಯುಕ್ತ ಶ್ರೀನಿವಾಸಪುರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ತೆರಳುವ ವೇಳೆ ವಾಲ್ಮೀಕಿ ಸಮುದಾಯ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟಪಂಗಡಕ್ಕೆ ಶೇ.3ರಿಂದ 7, ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ ಹೆಚ್ಚಳ ಮಾಡಿರುವ ಕಾರ್ಯ ಈ ಹಿಂದೆ ಯಾವುದೇ ಸರ್ಕಾರ ಮಾಡಿಲ್ಲ. 

ನಮ್ಮ ಸರ್ಕಾರ ಮಾಡಿರುವ ಐತಿಹಾಸಿಕ ನಿರ್ಧಾರವಾಗಿದೆ. ಅಷ್ಟೆಅಲ್ಲದೆ ಮೀಸಲಾತಿ ಹೆಚ್ಚಳದ ಹೋರಾಟ ನಾಲ್ಕು ದಶಕದ ಹೋರಾಟವಾಗಿರುವ ಕಾರಣ ಬಿಜೆಪಿ ಸರ್ಕಾರ ದಿಟ್ಟನಿರ್ಧಾರ ಮಾಡಿದೆ. ಇದರಿಂದ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪಡೆದುಕೊಳ್ಳಲು ಸಾಕಷ್ಟುಅನುಕೂಲವಾಗಲಿದೆ. ಸಾಮಾಜಿಕವಾಗಿ ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನ ದಕ್ಕುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತೇವೆ ಎಂದರು.

Tap to resize

Latest Videos

ಇತರ ರಾಜ್ಯಗಳಿಂದ ಭಿನ್ನ, ವಿಶ್ವದಲ್ಲೇ ಪ್ರಥಮ,ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

ಬಿಜೆಪಿ ಎಸ್ಟಿ ಮೋರ್ಚಾ ಟೌನ್‌ ಅಧ್ಯಕ್ಷ ವಾಲೆ ಶ್ರೀನಿವಾಸ್‌ ಮಾತನಾಡಿ, ಬಿಜೆಪಿ ಸರ್ಕಾರ ನಮ್ಮ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಮಾಡಿರುವ ಮೀಸಲಾತಿ ಹೆಚ್ಚಳ ಕೇವಲ ಒಬ್ಬ ವ್ಯಕ್ತಿ, ಒಂದು ಪಕ್ಷಕ್ಕೆ ದಕ್ಕುವ ಸಮುದಾಯವಲ್ಲ. ಎಲ್ಲಾ ಪಕ್ಷದ ನಮ್ಮ ಸಮುದಾಯದ ವ್ಯಕ್ತಿಗಳಿಗೂ ಸಲ್ಲುತ್ತದೆ. ಆದ್ದರಿಂದ ನಮ್ಮ ಸಮುದಾಯದ ಅಭಿವೃದ್ಧಿಗೆ ನಿಲ್ಲುವಂತಹ ಪಕ್ಷವನ್ನು ಬೆಂಬಲಿಸುವ ಕೆಲಸ ಆಗಬೇಕು. ಬಿಜೆಪಿ ಸರ್ಕಾರ ಆ ಕೆಲಸ ಮಾಡಿದೆ. ಸರ್ಕಾರದ ಸಾಧನೆಯನ್ನು ಮನೆಮನೆಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು. ಟೌನ್‌ ಬಿಜೆಪಿ ಅಧ್ಯಕ್ಷ ಡಾ.ಸಿ.ಜಯರಾಜ್‌, ಬಿಜೆಪಿ ಮುಖಂಡ ಹೂಡಿ ವಿಜಿ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ತವಟಹಳ್ಳಿ ಮುನಿಯಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಬಳ್ಳಾರಿಯಲ್ಲಿ 20ಕ್ಕೆ ಎಸ್ಟಿ ಸಮಾವೇಶ: ನವೆಂಬರ್‌ 20 ರಂದು ಬಳ್ಳಾರಿಯಲ್ಲಿ ಪರಿಶಿಷ್ಟಪಂಗಡ ಸಮುದಾಯದ ಬೃಹತ್‌ ಸಮಾವೇಶವನ್ನು ಬಳ್ಳಾರಿಯಲ್ಲಿ ಆಯೋಜನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಿಗೆ ತೆರಳಿ ನಮ್ಮ ಸಮುದಾಯದ ಮುಖಂಡರ ಸಭೆ ನಡೆಸುವ ಮೂಲಕ ಸಮಾವೇಶಕ್ಕೆ ಲಕ್ಷೋಪಾದಿಯಲ್ಲಿ ಜನ ಸೇರುವಂತೆ ಹಾಗೂ ಬಿಜೆಪಿ ಸರ್ಕಾರ ಸಮುದಾಯಕ್ಕೆ ನೀಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ತಿಳಿಸಿದರು.

2023ರ ಚುನಾವಣೇಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಉಮಾದೇವಿ

ಎಚ್ಡಿಕೆಗೆ ತಿರುಗೇಟು: ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಮೀಸಲುಗಳ ಹೆಚ್ಚಳಕ್ಕೆ ದೇವೇಗೌಡರು ಕಾರಣ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸುರಪುರ ಶಾಸಕ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ನರಸಿಂಹ ನಾಯಕ್‌ (ರಾಜೂಗೌಡ), ರಾಜ್ಯದಲ್ಲಿ ಮೀಸಲು ಕ್ಷೇತ್ರಗಳು ಎಷ್ಟಿವೆ ಅನ್ನೋದೇ ಕುಮಾರಣ್ಣನಿಗೆ ಗೊತ್ತಿಲ್ಲ ಎಂದು ಟಾಂಗ್‌ ನೀಡಿದ್ದಾರೆ. ಕುಮಾರಣ್ಣನಿಗೆ ಎಷ್ಟು ಮೀಸಲು ಕ್ಷೇತ್ರಗಳಿವೆ ಎಂಬುದೇ ಗೊತ್ತಿಲ್ಲ. ಅಲ್ಲದೆ, ನಾನು (ರಾಜುಗೌಡ) ಹಾಗೂ ಶ್ರೀರಾಮುಲು ದೇವೇಗೌಡರ ಆಶೀರ್ವಾದದಿಂದ ಗೆದ್ದಿದ್ದಾರೆ ಅಂತ ಹೇಳಿರುವುದು ಅಚ್ಚರಿ ಮೂಡಿಸಿದೆ. ಕುಮಾರಣ್ಣ ಮತ್ತು ನಾನು 2004ರಲ್ಲಿ ವಿಧಾನಸೌಧಕ್ಕೆ ಬಂದಿದೀವಿ, ಮಾತನಾಡುವ ಸಂದರ್ಭದಲ್ಲಿ ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದು ರಾಜೂಗೌಡ ಪ್ರತಿಕ್ರಿಯಿಸಿದರು.

click me!