ಶ್ರೀಕಾಂತ್ ಪೂಜಾರಿ ಬಂಧನ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ.ನನ್ನ ಕ್ಷೇತ್ರದಲ್ಲಿ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬರುತ್ತಿದ್ದಾರೆ ಎಂದು ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ್ ಅಬ್ಬಯ್ಯ ತುರ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹುಬ್ಬಳ್ಳಿ (ಜ.03): ಶ್ರೀಕಾಂತ್ ಪೂಜಾರಿ ಬಂಧನ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ.ನನ್ನ ಕ್ಷೇತ್ರದಲ್ಲಿ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬರುತ್ತಿದ್ದಾರೆ ಎಂದು ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ್ ಅಬ್ಬಯ್ಯ ತುರ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೌಡಿಶೀಟರ್ ಪರವಾಗಿ ರಾಜ್ಯದ ವಿರೋಧ ಪಕ್ಷದ ನಾಯಕರು ಆಗಮಿಸುತ್ತಿದ್ದಾರೆ. ಶ್ರೀಕಾಂತ್ ವಿರುದ್ಧ ಒಟ್ಟು14 ಪ್ರಕರಣಗಳಿವೆ. ಅಕ್ರಮ ಸಾರಾಯಿ ಮಾರಾಟ, ಮಟ್ಕಾ ಜೂಜಾಟ, ಹಲ್ಲೆ, ದೊಂಬಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ಇಂತಹ ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಹೀರೋ ಎಂದು ಬಿಂಬಿಸಲು ಹೋರಾಟಿದ್ದು ಎಷ್ಟು ಸರಿ? ಶ್ರೀಕಾಂತ್ ರಾಮನ ಭಕ್ತ ಇರಬಹುದು ನಾನು ತಾಯಿ ಯಲ್ಲಮ್ಮನ ಭಕ್ತ, ಪ್ರತಿಯೊಬ್ಬ ಹಿಂದೂ ಒಂದಲ್ಲ ಒಂದು ದೇವರನ್ನ ಆರಾಧಿಸುತ್ತಾರೆ. ಉತ್ತರ ಕರ್ನಾಟಕ ವಿಚಾರದ ಸದನದಲ್ಲಿ ಮಾತನಾಡಲಿಲ್ಲ. ಈಗ ರೌಡಿ ಷೀಟರ್ ಪರ ಹೋರಾಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ಈದ್ಗಾ ಹೋರಾಟದಿಂದ ಆದ ಲಾಭ , ಇಲ್ಲಿಯೂ ಆಗಲಿದೆ ಎಂಬ ಲೆಕ್ಕಾಚಾರ ಬಿಜೆಪಿದು. ಬಿಜೆಪಿಯವರು ಮಾತ್ರ ರಾಮ ಭಕ್ತರಾ? ನಾವು ರಾಮ ಭಕ್ತರು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆಕ್ರೋಶವನ್ನು ವ್ಯಕ್ತಪಡಿಸಿದರು.
ಲೋಕಸಭಾ ಸೀಟು ಹಂಚಿಕೆ ಚರ್ಚೆಗೆ ಎಚ್.ಡಿ.ಕುಮಾರಸ್ವಾಮಿ ಶೀಘ್ರ ದಿಲ್ಲಿಗೆ
ಅದ್ಯಾವುದೋ ಕೇಸ್ ಇಟ್ಕೊಂಡು ಬಿಜೆಪಿ ಬೆಂಕಿ ಹಚ್ತಾ ಇದೆ: ಅದ್ಯಾವುದೋ ಒಂದು ಕೇಸ್ ಅನ್ನು ಇಟ್ಕೊಂಡು ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಎಲೆಕ್ಷನ್ ಬಂದರೆ ಏನಾದರೂ ವಿಷಯ ಬೇಕಷ್ಟೇ. ಆ ಕೆಲಸ ಇದೀಗ ಮಾಡುತ್ತಿದೆ ಅಷ್ಟೇ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕಿಡಿಕಾರಿದ್ದಾರೆ. ರಾಮಜನ್ಮಭೂಮಿ ಹೋರಾಟಗಾರರನ್ನು ಬಂಧಿಸಿದ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ. ಅದು ಪೊಲೀಸರ ರೂಟಿನ್ ಕೆಲಸವಷ್ಟೇ. ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಅವುಗಳಲ್ಲಿ ಇದು ಕೂಡ ಒಪನ್ ಆಗಿದೆ. ಹೀಗಾಗಿ, ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಇದೊಂದು ರೂಟಿನ್ ಪ್ರೊಸೆಸ್ ಅಷ್ಟೇ ಎಂದರು.
ಪೊಲೀಸರ ರೂಟಿನ್ ಕೆಲಸಕ್ಕೆ ಇವರು ಬಣ್ಣ ಹಚ್ಚಿದ್ದಾರೆ. ಬಣ್ಣ ಹಚ್ಚಿ ಜನರ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಆರ್. ಅಶೋಕ ಅವರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸಲಿದ್ದಾರಂತೆ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಅಭಿವೃದ್ಧಿ ವಿಷಯಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಿ. ಅದು ಬಿಟ್ಟು ಹೀಗೆ ಎಲೆಕ್ಷನ್ ಗಿಮಿಕ್ ಮಾಡಲು ಹೊರಟಿದ್ದಾರೆ. ರಾಜ್ಯದೆಲ್ಲೆಡೆ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅದರಲ್ಲಿ ಇದು ಕೂಡ ಒಂದು ಅಷ್ಟೇ. ಇದನ್ನು ದೊಡ್ಡದು ಮಾಡಲು ಹೊರಟಿದ್ದಾರೆ ಎಂದರು.
ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಮದುವೆಯಾದ ಪ್ರೇಮಿಗಳು: ವಿರೋಧ ವ್ಯಕ್ತಪಡಿಸಿದ್ದ ಪೋಷಕರು!
ಬರಗಾಲ ಬಂದರೂ ನಮ್ಮ ಐದು ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆ. ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಅದನ್ನು ಸಹಿಸಲು ಇವರಿಗೆ ಆಗುತ್ತಿಲ್ಲ. ಹೀಗಾಗಿ, ಅದನ್ನು ಅಳಿಸಿಹಾಕುವ ಯತ್ನ ಬಿಜೆಪಿ ಮಾಡುತ್ತಿದೆ ಎಂದರು. ಈದ್ಗಾ ವಿಷಯದ ಮೇಲೆ ದೇಶದಲ್ಲಿ ಇವರು ನೆಲೆ ಊರಿದ್ದಾರೆ. ಇದೀಗ ಯಾವ ಇಷ್ಯೂ ಇಲ್ಲ. ಹೀಗಾಗಿ ಇದನ್ನೇ ದೊಡ್ಡದು ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದರು. ಹಳೇ ಹುಬ್ಬಳ್ಳಿಯ ಕೇಸ್ ಬೇರೆ. ಅಲ್ಲಿ ಶೇ. 90ರಷ್ಟು ಅಮಾಯಕರೇ ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.