ಮೈತ್ರಿ ವಿಷಯ ಮಾತನಾಡುವುದಕ್ಕೆ ಪ್ರಧಾನಿ ಮೋದಿ ಅವರು ಅವಕಾಶ ನೀಡುತ್ತಾರೆ. ಕಾವೇರಿ ನೀರಿನ ವಿಷಯವಾಗಿ ಸರ್ವಪಕ್ಷ ನಿಯೋಗ ಭೇಟಿಗೆ ಅವಕಾಶ ನೀಡಿದರೂ ಇದುವರೆಗೂ ಕೊಟ್ಟಿಲ್ಲ. ಇದು ದ್ವೇಷದ ರಾಜಕೀಯವಲ್ಲದೆ ಮತ್ತೇನು. ಜನರು, ರೈತರ ಸಂಕಷ್ಟಕ್ಕಿಂತ ಮೈತ್ರಿ ವಿಚಾರದ ಮಾತುಕತೆಯೇ ಹೆಚ್ಚಾಯಿತೇ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದ ಶಾಸಕ ಪಿ.ರವಿಕುಮಾರ್
ಮಂಡ್ಯ(ಸೆ.25): ಬಿಜೆಪಿ- ಜೆಡಿಎಸ್‌ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಆದಕ್ಕೇ ಕಾವೇರಿ ವಿಷಯ ಮುಂದಿಟ್ಟುಕೊಂಡು ಮಂಡ್ಯಕ್ಕೆ ಬಂದು ರಾಜಕಾರಣ ಮಾಡುತ್ತಾರೆ ಎಂದು ಶಾಸಕ ಪಿ.ರವಿಕುಮಾರ್ ಆರೋಪಿಸಿದರು.
ಮೈತ್ರಿ ವಿಷಯ ಮಾತನಾಡುವುದಕ್ಕೆ ಪ್ರಧಾನಿ ಮೋದಿ ಅವರು ಅವಕಾಶ ನೀಡುತ್ತಾರೆ. ಕಾವೇರಿ ನೀರಿನ ವಿಷಯವಾಗಿ ಸರ್ವಪಕ್ಷ ನಿಯೋಗ ಭೇಟಿಗೆ ಅವಕಾಶ ನೀಡಿದರೂ ಇದುವರೆಗೂ ಕೊಟ್ಟಿಲ್ಲ. ಇದು ದ್ವೇಷದ ರಾಜಕೀಯವಲ್ಲದೆ ಮತ್ತೇನು. ಜನರು, ರೈತರ ಸಂಕಷ್ಟಕ್ಕಿಂತ ಮೈತ್ರಿ ವಿಚಾರದ ಮಾತುಕತೆಯೇ ಹೆಚ್ಚಾಯಿತೇ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
undefined
ಕಾವೇರಿ ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆಯಾಗದು: ಎಚ್.ಡಿ.ಕುಮಾರಸ್ವಾಮಿ
ಸೋನಿಯಾಗಾಂಧಿ ಅವರನ್ನು ಮಧ್ಯಸ್ಥಿಕೆಗೆ ಕರೆಯುವ ಬಿಜೆಪಿಯವರು ಪ್ರಧಾನಿಯನ್ನು ಮಧ್ಯ ಪ್ರವೇಶಿಸುವಂತೆ ಹೇಳುತ್ತಿಲ್ಲ. ಆ ಪಕ್ಷದ ಸಂಸದರೂ ಈ ವಿಚಾರವಾಗಿ ತುಟಿಬಿಚ್ಚುತ್ತಿಲ್ಲವೇಕೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿಯಾದವರು ಎರಡೂ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಈ ವಿಚಾರದಲ್ಲಿ ಪ್ರಧಾನಿಯವರಿಗೆ ಇಚ್ಛಾಶಕ್ತಿ, ಬದ್ಧತೆ ಇದ್ದಂತೆ ಕಾಣುತ್ತಿಲ್ಲ ಎಂದು ಜರಿದರು.