ಜೆ.ಡಿ.ಎಸ್, ಬಿಜೆಪಿ ಮೈತ್ರಿಯಿಂದ ಬಿಜೆಪಿಗೆ ಬಹಳಷ್ಟು ಲಾಭವಾಗಲಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ
ಅಥಣಿ(ಸೆ.25): ಬಿಜೆಪಿಯಲ್ಲಿ ವಿರೋಧಿ ಪಕ್ಷದ ನಾಯಕನ ನೇಮಕ ಇಲ್ಲದಿದ್ದರೂ ವಿರೋಧ ಪಕ್ಷ ಮಾಡಬೇಕಾದ ಕೆಲಸವನ್ನು ಮಾಡುತ್ತಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಅಥಣಿಯಲ್ಲಿ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕ್ರತಿ ಕಾರ್ಯಕ್ರಮ ಉದ್ಘಾಟನೆ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿ ಹೈಕಮಾಂಡ್ ಇನ್ನೊವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿಲ್ಲವೆಂದರೆ ಅದರ ದೌರ್ಬಲ್ಯವಲ್ಲ. ಇದರೆ ಹಿಂದೆ ಒಂದು ಗಿಮಿಕ್ ಇದೆ. ಕಾದು ನೋಡಿ ಎಂದು ಹೇಳಿದರು.
ಅದು ಯಾವ ಗಿಮಿಕ್? ರಾಜ್ಯದ ಅಧಿಕಾರ ಸೂತ್ರ ಹಿಡಿಯುವ ಗಿಮಿಕ್ ಆಗಿದೆಯಾ? ಎಂದು ಮಾಧ್ಯಮದವರು ಕೇಳಿದಾಗ ಅದೇ ಆಗಿರಬಹುದು ಎಂದು ಹಾಸ್ಯ ಚಟಾಕೆ ಹಾರಿಸಿದರು.
ಕೈಕೊಟ್ಟ ಮಳೆ: ಕಂಗೆಟ್ಟ ರೈತಾಪಿ ವರ್ಗ
ಜೆ.ಡಿ.ಎಸ್, ಬಿಜೆಪಿ ಮೈತ್ರಿಯಿಂದ ಬಿಜೆಪಿಗೆ ಬಹಳಷ್ಟು ಲಾಭವಾಗಲಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಪ್ರತಿ ವರ್ಷ ನಾನು ಯಕ್ಸಂಬಾದಲ್ಲಿ ನನ್ನ ಅಭಿಮಾನಿಗಳು ಇಷ್ಟೊಂದು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಅಭಿಮಾನಿಗಳು ಈ ಬಾರಿ ನಾನು ಚಿಕ್ಕೋಡಿ ಸಂಸದ ಇರುವದರಿಂದ ಚಿಕ್ಕೋಡಿ ಲೋಕಸಭಾ ವ್ಯಾಪ್ತಿ ಬರುವ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ರೀತಿ ಸಾಂಸ್ಕ್ರತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂದು ಹೇಳಿದರು.
ಈ ಬಾರಿ ತಮಗೆ ಲೋಕಸಭಾ ಚುನಾವಣೆಯ ಟಿಕೆಟ್ ಖಚಿತ ಎಂದು ಅತೀ ಆತ್ಮವಿಶ್ವಾಸದಿಂದ ಹೇಳಿದರು. ಗೆಲವು ಸಹ ಅಷ್ಟೇ ಖಚಿತ ಎಂದು ಹೇಳಿದರು. ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಅಥಣಿ ತಾಲೂಕು ಬಿಜೆಪಿ ಅಧ್ಯಕ್ಷ ಡಾ.ರವಿ ಸಂಕ, ಸಿದ್ದಣ್ಣ ಮುದಕಣ್ಣವರ, ಗಿರೀಶ ಬುಟಾಳೆ, ರಾಜೇಂದ್ರ ಐಹೊಳೆ, ಮಲ್ಲಪ್ಪ ಹಂಚನಾಳ, ನಿಂಗಪ್ಪ ನಂದೇಶ್ವರ, ಅಜೀತ ಪವಾರ ಮುಂತಾದವರು ಇದ್ದರು.