ದೇವೇಗೌಡರು ಜಾತಿ ಕಡೆ ವಾಲಲ್ಲ ಎಂದುಕೊಂಡಿದ್ದೆ: ಶಾಸಕ ಶಿವಲಿಂಗೇಗೌಡ ಬೇಸರ

By Kannadaprabha News  |  First Published Sep 10, 2023, 1:30 PM IST

ದೇವೇಗೌಡರು ಜಾತಿ ಕಡೆಗೆ ವಾಲುವುದಿಲ್ಲ ಅಂತ ನಾನು ತಿಳಿದುಕೊಂಡಿದ್ದೆ. ಆದರ ಈಗ ವಾಲಿದ್ದಾರೆ. ಮುಂದೆ ಅವರ ಪ್ರತಿಕ್ರಿಯೆಗಳನ್ನು ನೋಡಬೇಕೆಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು. 


ಹಾಸನ (ಸೆ.10): ದೇವೇಗೌಡರು ಜಾತಿ ಕಡೆಗೆ ವಾಲುವುದಿಲ್ಲ ಅಂತ ನಾನು ತಿಳಿದುಕೊಂಡಿದ್ದೆ. ಆದರ ಈಗ ವಾಲಿದ್ದಾರೆ. ಮುಂದೆ ಅವರ ಪ್ರತಿಕ್ರಿಯೆಗಳನ್ನು ನೋಡಬೇಕೆಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅವರವರ ಇಷ್ಟ. 

ಕಾಲ ಬದಲಾದಂತೆ ಅವರೂ ಬದಲಾವಣೆ ಆಗಿದ್ದಾರೆ. ನಾನಂತು ತಿಳ್ಕೊಂಡಿದ್ದೆ. ದೇವೇಗೌಡ್ರು ಇರೋವರೆಗೂ ಜಾತ್ಯತೀತ ತತ್ವದ ನಿಲುವಿನಲ್ಲಿ ಇರ್ತಾರೆ ಅಂತ. ಜಾತಿ ಪಕ್ಷದ ಕಡೆ ವಾಲಲ್ಲ ಅಂತಾ ತಿಳ್ಕೊಂಡಿದ್ದೆ. ಆದರೆ ಈಗ ವಾಲಿದ್ದಾರೆ. ಮುಂದೆ ಅದರ ಪ್ರತಿಕ್ರಿಯೆ ಏನು ಎಂಬುದನ್ನು ನೋಡಬೇಕು. ಇದರಿಂದ ಯಾರಿಗೆ ಲಾಭ ಇದೆ ಎಂಬುದನ್ನು ಮುಂದಿನ ಲೋಕಾಸಭೆ ಚುನಾವಣೆಯಲ್ಲಿ ನೋಡೋಣ ಎಂದು ಪ್ರತಿಕ್ರಿಯಿಸಿದರು.

Tap to resize

Latest Videos

ಬೆಂ.ಗ್ರಾ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪರಿಶೀಲಿಸಿದ ಸತೀಶ್ ಜಾರಕಿಹೊಳಿ: ರೈತರಿಂದ ಮನವಿ ಸ್ವೀಕರಿಸಿದ ಸಚಿವ

ಭಗವದ್ಗೀತೆ ಸಾರಾಂಶ ಅರ್ಥ ಮಾಡಿಕೊಂಡಲ್ಲಿ ಜೀವನ ಸುಂದರ: ಶ್ರೀಕೃಷ್ಣನು ಮಹಾಭಾರತದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಸಾರಾಂಶವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಲ್ಲಿ ಸುಂದರವಾದ ಜೀವನವನ್ನು ಅನುಭವಿಸಲು ಸಾಧವಾಗುತ್ತದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ತಾಲೂಕು ಆಡಳಿತ ಹಾಗೂ ತಾಲೂಕು ಯಾದವ ಸಮಾಜ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉಧ್ಘಾಟಿಸಿ ಮಾತನಾಡಿದರು.

ಶ್ರೀಕೃಷ್ಣ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗದೇ ಎಲ್ಲ ಜನಾಂಗಕ್ಕೂ ಮಾರ್ಗದರ್ಶನ ನೀಡುವ ಮಹಾನ್ ದೈವಾಂಶ ಸಂಭೂತ ಶಕ್ತಿಯ ಸ್ವರೂಪವಾಗಿದ್ದು, ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನಿಗೆ ನೀತಿ ಬೋಧನೆಯನ್ನು ಮಾಡಿದ ಸಾರಾಂಶವೇ ಭಗವದ್ಗೀತೆ ಮಹಾಗ್ರಂಥವಾಗಿದೆ ಎಂದರು. ಇಂದು ಕೂಡ ಜೀವನದಲ್ಲಿ ದೃತಿಗೆಡುವ ಮನುಷ್ಯನಿಗೆ ಸಂಜೀವಿನಿಯಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ಧರ್ಮ ಸ್ಥಾಪನೆಗಾಗಿ ಅವತರಿಸಿ ಬಂದಂತಹ ಶ್ರೀಕೃಷ್ಣನ ಯಾದವ ವಂಶದಲ್ಲಿ ಹುಟ್ಟಿದ ನೀವುಗಳು ಪುಣ್ಯವಂತರಾಗಿದ್ದೀರಿ. ಯಾವುದೇ ಕ್ಷೇತ್ರದಲ್ಲಿ ಈ ಸಮಾಜವು ಭಾಗವಹಿಸಿ ತಮ್ಮ ಇರುವಿಕೆಯನ್ನು ಸಾದರಪಡಿಸಬೇಕಾಗಿದೆ. 

ಮಹಾಭಾರತದ ಅನೇಕ ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಪ್ರೇರಕ ಶಕ್ತಿಯನ್ನು ನೀಡುತ್ತಿವೆ. ಪೋಷಕರು ನಮ್ಮ ಮಕ್ಕಳಿಗೆ ಭಗವದ್ಗೀತೆಯ ಪರಿಚಯ ಮಾಡಿಸಬೇಕಾಗಿದೆ. ತಾಲೂಕಿನಲ್ಲಿರುವ ಈ ಯಾದವ ಸಮಾಜದ ಬಂಧುಗಳು ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿ ಶ್ರೀಕೃಷ್ಣನ ತತ್ವ, ಆದರ್ಶಗಳ, ಸಿದ್ಧಾಂತಗಳನ್ನು ಹೆಚ್ಚಿನ ರೀತಿಯಲ್ಲಿ ಪ್ರಚುರಪಡಿಸಬೇಕಾಗಿದೆ ಎಂದು ಹೇಳಿದರು. ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಸಮಾಜದ ಯುವಕರು ಇಂದು ಶಿಕ್ಷಣದಲ್ಲಿ ಹೆಚ್ಚು ಒಲವು ತೋರುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. 

ಸಮಾನತೆ ತತ್ವದ ಬೀಜ ಬಿತ್ತಿದವರು ಬಸವಣ್ಣವರು: ಜಗದೀಶ್ ಶೆಟ್ಟರ್

ಇದು ಒಳ್ಳೆಯ ಬೆಳವಣಿಗೆಯಾಗಿದ್ದು ಶ್ರೀಕೃಷ್ಣ ಮಾಡಿರುವ ಮತ್ತು ಅವರ ಧರ್ಮ ಪರವಾದ ನಡೆ, ನುಡಿ, ಆಚಾರ, ವಿಚಾರಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಕರೆ ನೀಡಿದರು.ಮದ-ಮತ್ಸರಗಳನ್ನು ನಿಗ್ರಹಿಸಿಕೊಂಡು ಧರ್ಮವಾದ ಮಾರ್ಗದಲ್ಲಿ ಬದುಕು ಸಾಧಿಸುವುದೇ ಶ್ರೀ ಕೃಷ್ಣನ ಸಂದೇಶವಾಗಿದ್ದು, ಭಗವದ್ಗೀತೆಯಲ್ಲಿ ಹೇಳಿರುವ ಮನುಷ್ಯನು ಧರ್ಮವಾಗಿ ಬದುಕುವ ರೀತಿಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

click me!