ಸಿಎಂ ಸಿದ್ದರಾಮಯ್ಯ ಖಾಕಿ ಚಡ್ಡಿ ಹಾಕೋದಿಲ್ಲ, ರಾಷ್ಟ ಭಕ್ತಿ ವಿಚಾರದಲ್ಲಿ ಗಟ್ಟಿಯಾಗಿಲ್ಲ: ಕೆ.ಎಸ್. ಈಶ್ವರಪ್ಪ

Published : Sep 10, 2023, 12:50 PM ISTUpdated : Sep 10, 2023, 12:57 PM IST
ಸಿಎಂ ಸಿದ್ದರಾಮಯ್ಯ ಖಾಕಿ ಚಡ್ಡಿ ಹಾಕೋದಿಲ್ಲ, ರಾಷ್ಟ ಭಕ್ತಿ ವಿಚಾರದಲ್ಲಿ ಗಟ್ಟಿಯಾಗಿಲ್ಲ: ಕೆ.ಎಸ್. ಈಶ್ವರಪ್ಪ

ಸಾರಾಂಶ

ಸಿಎಂ ಸಿದ್ದರಾಮಯ್ಯ ರಾಷ್ಟ್ರಭಕ್ತಿ ಸಂಕೇತವಾಗಿರುವ ಖಾಕಿ ಚಡ್ಡಿಯನ್ನು ಹಾಕುವುದಿಲ್ಲ. ರಾಷ್ಟ ಭಕ್ತಿಗೆ ವಿಚಾರದಲ್ಲಿ ಅವರು ಗಟ್ಟಿಯಾಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬಳ್ಳಾರಿ (ಸೆ.10): ರಾಜ್ಯದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಹಾಗೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರುವುದಕ್ಕೆ ಬಿ.ಕೆ. ಹರಿಪ್ರಸಾದ್‌ ನೀಡಿರುವ ಹೇಳಿಕೆಯಿಂದ ನನಗೆ ಆಶ್ಚರ್ಯವಾಗಿದೆ. ನೀವು ಏನೇ ಬಡಿದಾಡಿಕೊಂಡರೂ ಖಾಕಿ ಚಡ್ಡಿ ಬಗ್ಗೆ ಮಾತನಾಡಬೇಡಿ. ಸಿಎಂ ಸಿದ್ದರಾಮಯ್ಯ ಖಾಕಿ ಚಡ್ಡಿಯನ್ನು ಹಾಕುವುದಿಲ್ಲ, ಜೊತೆಗೆ ರಾಷ್ಟ ಭಕ್ತಿಗೆ ವಿಚಾರದಲ್ಲಿ ಅವರು ಗಟ್ಟಿಯಾಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. 

ಈ ಕುರಿತು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ 3 ದಿನಗಳ ಕಾಲ ಚರ್ಚೆಯಾಗಿದೆ. ಈ ವೇಳೆ ಬೇಕಂತಲೇ ಡಿ.ಕೆ. ಶಿವಕುಮಾರ್‌ ಎರಡು ದಿನ ತಡವಾಗಿ ದೆಹಲಿಗೆ ಹೋಗಿದ್ದರು. ಸಿದ್ದರಾಮಯ್ಯ ಬೇಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದರು. ಆದರೆ, ಒಳಗೊಳಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಕೂಡ ಗೊತ್ತಾಗೊತ್ತು. ಆದರೆ, ಸಿಎಂ ಘೋಷಣೆಯಾದ ಬಳಿಕ ಒಂದೂಂದೇ ಹೊರ ಬರ್ತಿವೆ ಎಂದು ಹೇಳಿದರು.

ಎಸ್‌.ಎಲ್.ಭೈರಪ್ಪ: ತಮ್ಮ ಸತ್ತಾಗ ಅಂತ್ಯಕ್ರಿಯೆಗೆ ಯಾರೂ ಬರಲಿಲ್ಲ, ತಿನ್ನಲು ತುತ್ತು ಆಹಾರವನ್ನೂ ಕೊಡಲಿಲ್ಲ

ಸಿದ್ದರಾಮಯ್ಯ ಬಿಜೆಪಿಗೆ ಬರುವ ಬಗ್ಗೆ ನನಗೆ ಗೊತ್ತಿಲ್ಲ: ಇನ್ನು ಈಡಿಗರ ಸಮಾವೇಶದಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆ ನಂಗೆ ಆಶ್ಚರ್ಯ ಆಯ್ತು. ಸಿದ್ದರಾಮಯ್ಯ ಮೇಲೆ ಪಂಚೆ ಹಾಕಿದ್ದಾರೆ ಒಳಗೆ ಖಾಕಿ ಚಡ್ಡಿ ಹಾಕಿದ್ದಾರೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಬಗ್ಗೆ ಮಾತಾಡಿ ಆದರೆ ಖಾಕಿ ಚಡ್ಡಿ ಬಗ್ಗೆ ಮಾತನಾಡಬೇಡಿ. ಖಾಕಿ ಚಡ್ಡಿಯು ಅನೇಕ ರಾಷ್ಟ ಭಕ್ತರನ್ನು ನಿರ್ಮಿಸಿದೆ. ಸಿದ್ದರಾಮಯ್ಯ ಬಿಜೆಪಿಗೆ ಬರುತ್ತಿದ್ದರೋ ಅಥವಾ ಇಲ್ಲವೋ ಎಂದು ಬಿ.ಕೆ. ಹರಿಪ್ರಸಾದ್ ಬಹಿರಂಗವಾಗಿ ಹೇಳಿಲ್ಲ. ಸಿದ್ದರಾಮಯ್ಯ ಅವರು ಬಿಜೆಪಿ ಸೇರೋದು ವೆಂಕಯ್ಯನಾಯ್ಡು , ಅರವಿಂದ್ ಲಿಂಬಾವಳಿಗೂ ಗೊತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಆದರೆ, ಆ ಬಗ್ಗೆ ನಂಗೆ ಗೊತ್ತಿಲ್ಲ ಎಂದರು.

ಖಾಕಿ ಚಡ್ಡಿ ಹಾಕಿದೋರೆಲ್ಲಾ ರಾಷ್ಟ್ರಭಕ್ತರಾಗಿದ್ದಾರೆ:  ಸಿದ್ದರಾಮಯ್ಯ- ಹರಿಪ್ರಸಾದ್, ಕಾಂಗ್ರೆಸ್‌ನಲ್ಲಿ ಬಹಿರಂಗ ಬಡಿದಾಟ ಏನೇ ಮಾಡಿಕೊಳ್ಳಲಿ. ಯಾರ್ಯಾರು ಖಾಕಿ ಚಡ್ಡಿ ಹಾಕಿದ್ದಾರೋ ಅವರು ರಾಷ್ಟ್ರ ಭಕ್ತರಾಗಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಕಿ ಚಡ್ಡಿ ಹಾಕೋದಿಲ್ಲ ರಾಷ್ಟ ಭಕ್ತಿಗೆ ವಿಚಾರದಲ್ಲಿ ಅವರು ಗಟ್ಟಿಯಾಗಿಲ್ಲ. ನನಗೆ ಚುನಾವಣಾ ಪ್ರಕ್ರಿಯೆಯಿಂದ ದೂರ ಇರುವಂತೆ ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ ಬಂದಿದೆ. ನನ್ನ ಮಗ ಕಾಂತೇಶ್ ಹಾವೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನನ್ನ ಮಗ ಮಠ ಮಂದಿರಗಳ ಬೇಟಿ ನೀಡಿ ಜಿಲ್ಲೆಯಲ್ಲಿ ಓಡಾಟ ಮಾಡಿದ್ದಾನೆ. ಜನರ ಆಶೀರ್ವಾದ ಪಡೆದಿದ್ದಾನೆ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾನೆ. ಇಲ್ಲವಾದರೆ ಪಕ್ಷ ಯಾರಿಗೆ ಟಿಕೇಟ್ ಕೊಡುತ್ತೆವೆ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತಾನೆ ಎಂದು ಹೇಳಿದರು.

ಹೋಮ ಮಾಡುವಾಗಲೇ ಕರೆ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ: ಬಳ್ಳಾರಿಯಲ್ಲಿ ಕುಟುಂಬದ ಆರಾಧ್ಯ ದೇವರ ಪೂಜೆ  ನಡೆಯುತ್ತಿದೆ. ಮಲ್ಲೇಶ್ವರ ಹಾಗು ಚೌಡೇಶ್ವರಿ ವಿಶೇಷ ಹೋಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪೋನ್ ಮಾಡಿ ಶುಭ ಸುದ್ದಿ ನೀಡಿದ್ದಾರೆ. ಪೂಜೆ ಮಾಡೋವಾಗ ಕುಮಾರಸ್ವಾಮಿ ಅವರು ಕರೆ ಮಾಡಿ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಶುಭ ಸಂದೇಶವಾಗಲಿದೆ. ಹೋಮ ಮಾಡುವಾಗ ಕೆರೆ ಮಾಡಿದ್ದು, ಶುಭ ಸುದ್ದಿ ಎಂದು ನಾವು ನಂಬುತ್ತವೆ. ರಾಜ್ಯದ ಜನತೆಗೆ ಹಾಗೂ ಬಿಜೆಪಿ ಪಕ್ಷಕ್ಕೆ ಒಂದು ಶುಭ ಸಂದೇಶವಾಗಿದೆ ಎಂದರು.ರಾಜ್ಯ ರಾಜಕೀಯದಲ್ಲಿ ಇಷ್ಟು ಬೆಳವಣಿಗೆ ಆಗಿದೆ. ಯಾಕೆ ನೀವು ಕರೆ ಮಾಡಿಲ್ಲ ಎಂದು ಕುಮಾರಸ್ವಾಮಿ ಕೇಳಿದರು. ಎರಡು ದಿನ ಬಿಟ್ಟು ಬೆಂಗಳೂರಿಗೆ ಬಂದು ಮಾತನಾಡುವೆ ಎಂದು ಹೇಳಿದೆನು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಮತ್ತೆ ಆರಂಭ: ಇದು 6ನೇ ಹಂತದ ಚಳವಳಿ

ಕಾಂಗ್ರೆಸ್ಸೇತರ ಮತಗಳ ಒಂದಾಗಿಸಲು ಮೈತ್ರಿ ಅಗತ್ಯವಿದೆ: ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಸದಾಗಿ ಮೈತ್ರಿ ಆಗಿಲ್ಲ. ಈ ಹಿಂದೆ ಕೂಡಾ ಒಂದಾಗಿದ್ದವು. ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಒಳ್ಳೆಯ ಸರ್ಕಾರ ನೀಡಿದ್ದೆವೆ. ಕಾಂಗ್ರೆಸ್ ದೂರ ಇಡಬೇಕು ಎನ್ನುವ ಕಾರಣಕ್ಕಾಗಿ ನಾವು  ಮೈತ್ರಿ ಮಾಡಿ ಕೊಂಡಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ದೂರ ಇಟ್ಟು ಎಲ್ಲರೂ ಒಂದಾಗಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ದೇಶದಲ್ಲಿ ನಡೆದ ಬಹುತೇಕ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನವರೇ ಇದ್ದಾರೆ. ಕಾಂಗ್ರೆಸ್ಸೇತರ ಮತಗಳು ಒಂದಾಗಬೇಕಿದೆ, ಇದೇ ಕಾರಣಕ್ಕಾಗಿ ಬಿಜೆಪಿ ಜೆಡಿಎಸ್ ಒಂದಾಗುತ್ತಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್