ನಾವು ನಿಮ್ಮ ಸುದ್ದಿಗೆ ಬರಲ್ಲ. ನೀವು ಬಂದ್ರೆ ಸುಮ್ಮನಿರಲ್ಲ: ಶಾಸಕ ಶಿವಲಿಂಗೇಗೌಡ

Published : Nov 12, 2023, 01:00 AM IST
ನಾವು ನಿಮ್ಮ ಸುದ್ದಿಗೆ ಬರಲ್ಲ. ನೀವು ಬಂದ್ರೆ ಸುಮ್ಮನಿರಲ್ಲ: ಶಾಸಕ ಶಿವಲಿಂಗೇಗೌಡ

ಸಾರಾಂಶ

ಕೈಮುಗಿದು ಹೇಳುತ್ತಿದ್ದೇನೆ. ನೀವು ನಮ್ಮ ಸುದ್ದಿಗೆ ಬರಬೇಡಿ. ನಾವು ನಿಮ್ಮ ಸುದ್ದಿಗೆ ಬರಲ್ಲ. ಪದೇ ಪದೆ ಹೀಗೆ ಮುಂದುವರೆದರೆ ನಾನು ನಿಮ್ಮ ರೀತಿಯೇ ಮಾತನಾಡಬೇಕಾಗುತ್ತದೆ ಎಂದು ಜೆಡಿಎಸ್ ವರಿಷ್ಠರ ನಡೆಗೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಸಿದರು. 

ಹಾಸನ (ನ.12): ಕೈಮುಗಿದು ಹೇಳುತ್ತಿದ್ದೇನೆ. ನೀವು ನಮ್ಮ ಸುದ್ದಿಗೆ ಬರಬೇಡಿ. ನಾವು ನಿಮ್ಮ ಸುದ್ದಿಗೆ ಬರಲ್ಲ. ಪದೇ ಪದೆ ಹೀಗೆ ಮುಂದುವರೆದರೆ ನಾನು ನಿಮ್ಮ ರೀತಿಯೇ ಮಾತನಾಡಬೇಕಾಗುತ್ತದೆ ಎಂದು ಜೆಡಿಎಸ್ ವರಿಷ್ಠರ ನಡೆಗೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದರೆ ಜಿಡಿಎಸ್ ವರಿಷ್ಠರು ನನ್ನ ಮೇಲೆ ಪದೇ ಪದೆ ಟೀಕಾ ಪ್ರಹಾರ ಮಾಡುತ್ತಿದ್ದಾರೆ. 

ಇದು ಸರಿಯಲ್ಲ. ಇಡೀ ರಾಜ್ಯ, ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರ ಹೆಸರೇಳಿಕೊಂಡು ಹೋದವರನ್ನು ಜನ ಸೋಲಿಸಿ ಕಳುಹಿಸಿದ್ದಾರೆ. ನನ್ನಿಂದ ಅವರಿಗೆ ಅಪಾರ ನಷ್ಟ ಏನೂ ಆಗಿಲ್ಲ. ಆದರೆ ಇವರು ನನ್ನನ್ನು ಮಜ್ಜಿಗೆ ಮಾರುವವರು ಎಂದು ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಬಿಬಿಎಂಪಿ ಕಸದ ಟೆಂಡರ್ ಪಡೆದಿದ್ದ ನಿಮ್ಮನ್ನು ನಾನೂ ಸಹ ನೀವು ಕಸ ಮಾರಲು ಹೊರಟಿದ್ದೀರಿ ಎಂದು ಹೇಳಿದರೆ ನಿಮ್ಮ ಮರ್ಯಾದೆ ಹೋಗುವುದಿಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಲ್ಲಿ ಬಿಎಸ್‌ವೈ, ಶೆಟ್ಟರ್‌, ಈಗ ಡಿವಿಎಸ್‌ ಕಡೆಗಣನೆ: ರೇಣುಕಾಚಾರ್ಯ ಕಿಡಿ

ಬರಗಾಲ ಪುನಃ ಆಗಮಿಸುತ್ತಿರುವುದು ಆತಂಕದ ಸಂಗತಿ: ತಾಲೂಕಿನ ಗೀಜಿಹಳ್ಳಿ ಗ್ರಾಮದ ಬಳಿ 5 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರಿ ಸಗಟು ಮಾರಾಟಗಾರರ ವ್ಯಾಪಾರ ವಹಿವಾಟಿಗೆ ಸೋಮುವಾರ ಬೆಳಿಗ್ಗೆ ಶಾಸಕ ಕೆ ಎಂ ಶಿವಲಿಂಗೇಗೌಡ ಅಧಿಕೃತವಾಗಿ ಚಾಲನೆ ನೀಡಿದರು. ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬರಗಾಲ ಪುನಃ ಅರಸೀಕೆರೆ ತಾಲೂಕಿಗೆ ಆಗಮಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಕಳೆದೆ ಎರಡು ವರ್ಷಗಳಲ್ಲಿ ಬಂದಂತಹ ಮಳೆಯಿಂದ ಕೆರೆ ಕಟ್ಟೆಗಳು ತುಂಬುವುದರ ಮೂಲಕ ರೈತನ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿತ್ತು. 

ಆದರೆ ಪ್ರಸಕ್ತ ವರ್ಷ ಸಕಾಲದಲ್ಲಿ ಮಳೆ ಇಲ್ಲದೆ ರೈತರು ಜನರು ಪರಿತಪಿಸುತ್ತಿದ್ದು ಎಲ್ಲಾ ಕಷ್ಟ ನಷ್ಟಗಳ ನಡುವೆ ಅಂತರ್ಜಲ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ರೈತರು ಕೃಷಿ ಉಪ ಉತ್ಪನ್ನಗಳಿಗೆ ಆದ್ಯತೆ ನೀಡಿದ್ದಾರೆ. ಇವರು ಬೆಳೆದ ತರಕಾರಿ ಇನ್ನಿತರ ಉತ್ಪನ್ನಗಳನ್ನು ಸಗಟು ಮಾರಾಟ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಖರೀದಿ ಮಾಡಲು 5 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ರೈತರು ಮತ್ತು ವರ್ತಕರ ನಡುವಿನ ವ್ಯಾಪಾರ ವಹಿವಾಟಿಗೆ ಹರಾಜು ಪ್ರಕ್ರಿಯೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಇವಿ ನೀತಿ ಕ್ಲೀನ್‌ ಮೊಬಿಲಿಟಿ ನೀತಿಯಾಗಿ ಮಾರ್ಪಾಟು: ಸಚಿವ ಎಂ.ಬಿ.ಪಾಟೀಲ್‌

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿದ್ದರಂಗಸ್ವಾಮಿ ಮಾತಾನಾಡಿ, ಹಿಂದಿನ ಸರ್ಕಾರದ ಕೃಷಿ ಸಚಿವ ಸೋಮಶೇಖರ್ ಅಧಿಕೃತವಾಗಿ ಪ್ರಾಂಗಣವನ್ನು ಲೋಕಾರ್ಪಣೆ ಮಾಡಿದ್ದರು. ತರಕಾರಿ ಸಗಟು ಮಾರಾಟಗಾರರಾಗಿ 400 ಮಂದಿ ನೋಂದಾಯಿಸಿದ್ದಾರೆ. ಇಂದಿನ ಅಧಿಕೃತ ಚಾಲನೆಯ ಸಮಯದಲ್ಲಿ ಸಗಟು ಮಾರಾಟ ವ್ಯಾಪಾರಸ್ಥರು 20ಕ್ಕೂ ಹೆಚ್ಚು ತರಕಾರಿ ಮಾರಾಟಗಾರರು ಹರಾಜಿನಲ್ಲಿ ಭಾಗವಹಿಸಿದ್ದಾರೆ. ಸ್ಥಳೀಯವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ವ್ಯವಸ್ಥಿತ ಮಳಿಗೆಗಳು ಹಾಗೂ ಪ್ರಾಂಗಣವನ್ನು ಸರ್ಕಾರ ನಾಲ್ಕು ಕೋಟಿ ರೂಪಾಯಿ ಮತ್ತು ಕೃಷಿ ಉತ್ಪನ್ನ ಸಮಿತಿ ವತಿಯಿಂದ ಒಂದು ಕೋಟಿ ಸೇರಿದ್ದಂತೆ ಒಟ್ಟು 5 ಕೋಟಿ ರುಪಾಯಿಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸುಸಜ್ಜಿತ ಮಾರುಕಟ್ಟೆಯ ಸ್ವಚ್ಛತೆ ಕಾಪಾಡುವ ಮೂಲಕ ಪರಿಸರ ರಕ್ಷಣೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್