ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ನಡೆದ ಬರ ಅಧ್ಯಯನ ಹಾಗೂ ರೈತರೊಂದಿಗೆ ಸಂವಾದದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರೈತರ ಅಹವಾಲು ಕೇಳಿ ಹಾಗೂ ಪರಿಹಾರ ನೀಡಿದರು.
ಮಂಡ್ಯ (ನ.11): ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ನಡೆದ ಬರ ಅಧ್ಯಯನ ಹಾಗೂ ರೈತರೊಂದಿಗೆ ಸಂವಾದದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರೈತರ ಅಹವಾಲು ಕೇಳಿ ಹಾಗೂ ಪರಿಹಾರ ನೀಡಿದರು. ನಂತರ ಮಾತನಾಡಿದ ಅವರು, ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ಒಣ ಭೂಮಿ ರೈತರನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಪಂಪ್‌ಸೆಟ್ ಹೊಂದಿರುವ ರೈತರು ರಾತ್ರಿಯ ಸಮಯದಲ್ಲಿ ನೀರು ಹಾಯಿಸಲು ಹೋಗುವುದಕ್ಕೆ ಸಾಧ್ಯವೇ? ಏಕೆ ಸರ್ಕಾರಈ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಲು ಕ್ರಮ ವಹಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
ಬಿಜೆಪಿ ಪಕ್ಷವು ಸಂಘಟಿತ ಹೋರಾಟ ಮಾಡುವ ಮೂಲಕ ರಾಜ್ಯದ ರೈತರ ಬೆನ್ನಿಗೆ ನಿಲ್ಲುತ್ತದೆ ಎಂದು ತಿಳಿಸಿದರು. ಕಾವೇರಿ ಹೋರಾಟಕ್ಕೆ ಗೌರವ ನೀಡಿ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು. ಜಿಲ್ಲೆಯ ರೈತರನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಮಾಜಿ ಶಾಸಕ ಪ್ರೀತಂಗೌಡ, ಸಕಲೇಶಪುರ ಶಾಸಕ ಮಂಜಣ್ಣ, ಬಿಜೆಪಿ ಜಿಧ್ಯಕ್ಷ ಸಿ.ಪಿ.ಉಮೇಶ, ಬಿಜೆಪಿ ಮುಖಂಡ ಅಶೋಕ್ ಜಯರಾಂ, ಜಿಲ್ಲಾ ಕಾರ್ಯದರ್ಶಿ ಡಾ.ಸದಾನಂದಗೌಡ, ವಿದ್ಯಾನಾಗೇಂದ್ರ, ನವನೀತ್‌ಗೌಡ, ಶಿವಕುಮಾರ್ ಆರಾಧ್ಯ ಹಾಗೂ ಗ್ರಾಮಸ್ಥರಾದ ಸಿದ್ದೇಗೌಡ, ಅಂಗಡಿ ಮಂಜಣ್ಣ, ಹರೀಶ್, ನಾಗರಾಜು, ರಾಮೇಗೌಡ, ಸಿದ್ದೇಗೌಡ ಭಾಗವಹಿಸಿದ್ದರು.
undefined
ಸಿದ್ದು 5 ವರ್ಷ ನಾನೇ ಸಿಎಂ ಎನ್ನುವುದು ಸರಿಯಲ್ಲ: ಎಸ್.ಎಂ.ಕೃಷ್ಣ
ಸದಾನಂದಗೌಡರಿಗೆ ಕುರಿ ಕೊಡುಗೆ ನೀಡಿದ ಯುವಕ: ತಾಲೂಕಿನ ಆತಗೂರು ಹೋಬಳಿಗೆ ಗುರುವಾರ ಬರ ಪರಿಸ್ಥಿತಿ ಅಧ್ಯಯನ ನಡೆಸಲು ಆಗಮಿಸಿದ್ದ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡರಿಗೆ ಅರಕನಹಳ್ಳಿ ಯುವ ರೈತ ಕುರಿಯನ್ನು ಉಡುಗೊರೆಯಾಗಿ ನೀಡಿದ ಪ್ರಸಂಗ ಜರುಗಿತು. ಗ್ರಾಮದ ಚಿರತೆ ಹಾವಳಿಯಿಂದ ಜಾನುವಾರು ಕಳೆದುಕೊಂಡಿದ್ದ ರೈತರ ಮನೆಗಳಿಗೆ ಭೇಟಿ ನೀಡಿ ತೆರಳುತ್ತಿದ್ದ ವೇಳೆ ಯುವ ರೈತ ಎಚ್.ಆರ್. ರಂಜಿತ್ 5 ತಿಂಗಳ ಕುರಿಮರಿಯನ್ನು ಸದಾನಂದಗೌಡರಿಗೆ ಉಡುಗೊರೆ ನೀಡಿದರು.
ಇದರಿಂದ ಸಂತೋಷಗೊಂಡ ಸದಾನಂದಗೌಡರು, ನೀವೇ ಚೆನ್ನಾಗಿ ಸಾಕಿ ಬೆಳೆಸಿ, ಇದೇ ಕುರಿ ಮಾಂಸದೂಟಕ್ಕಾಗಿ ತಮ್ಮ ಗ್ರಾಮಕ್ಕೆ ಬರುವುದಾಗಿ ಭರವಸೆ ನೀಡಿದರು. ನಂತರ ಸ್ಥಳದಲ್ಲಿದ್ದ ಬಿಜೆಪಿ ಮುಖಂಡರುಗಳು ರಂಜಿತ್ ತಮ್ಮ ಮೇಲೆ ವಿಶ್ವಾಸವಿಟ್ಟು ಕುರಿಯನ್ನು ನೀಡಿದ್ದಾರೆ. ಅದು ನಿಮ್ಮ ಮನೆಗೇ ತೆಗೆದುಕೊಂಡು ಹೋಗಿ ಸಾಕಿ ಎಂದು ಸಲಹೆ ನೀಡಿದರು. ಇದಕ್ಕೆ ಸದಾನಂದಗೌಡರು ಸಮ್ಮತಿ ಸೂಚಿಸಿದರು. ನಂತರ ಬೆಂಗಳೂರಿನಲ್ಲಿರುವ ತಮ್ಮ ಆಪ್ತ ಸಹಾಯಕರ ವಶಕ್ಕೆ ಒಪ್ಪಿಸುವಂತೆ ಬಿಜೆಪಿ ಮುಖಂಡರು ಸಲಹೆ ನೀಡಿದ ನಂತರ ನಾಳೆ ಬೆಂಗಳೂರಿಗೆ ಕುರಿಮರಿಯನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.
ಸಿಎಂ ಬದಲಾವಣೆ ಅನಿವಾರ್ಯವಾದರೆ ಡಿಕೆಶಿಗೆ ಬೆಂಬಲ: ಶಾಸಕ ಕೆ.ಎಂ.ಉದಯ್
ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮನ್ಮುಲ್‌ನಿರ್ದೇಶಕರಾದ ಎಸ್.ಪಿ. ಸ್ವಾಮಿ, ರೂಪ, ಜಿಲ್ಲಾ ಸಮಿತಿ ಮುಖಂಡ ಎಂ. ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಶಿವದಾಸ್ ಸತೀಶ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್, ಮುಖಂಡರಾದ ಎಂ.ಸಿ. ಸಿದ್ದರು, ಬಿ.ಸಿ. ಮಹೇಂದ್ರ ಇತರರು ಇದ್ದರು.