ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೊದಲ ಬಾರಿಗೆ ಸಚಿವರಾಗಿದ್ದು ಅವರಿಗೆ ಕೊಂಬುಗಳು ಬಂದಂತೆ ಆಡುತ್ತಿದ್ದಾರೆ ಎಂದು ಶಾಸಕ ಕೆ.ಶ್ರೀನಿವಾಸ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಕೋಲಾರ (ಫೆ.12): ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೊದಲ ಬಾರಿಗೆ ಸಚಿವರಾಗಿದ್ದು ಅವರಿಗೆ ಕೊಂಬುಗಳು ಬಂದಂತೆ ಆಡುತ್ತಿದ್ದಾರೆ ಎಂದು ಶಾಸಕ ಕೆ.ಶ್ರೀನಿವಾಸ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಶಾಸಕರಾಗಿ ಬಳಿಕ ಬಿಜೆಪಿ ಸೇರ್ಪಡೆಯಾಗುವ ಮೂಲಕ ಸಚಿವರಾಗಿ ಬಾಯಿಗೆ ಬಂದಂತೆ ಉದ್ದಟನತನದಿಂದ ಮಾತನಾಡುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದರು.
ಸಹಕಾರಿಗಳ ಕಾರ್ಯಕ್ರಮ: ತಾಲೂಕಿನಲ್ಲಿ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಸಹ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ. ಡಿಸಿಸಿ ಬ್ಯಾಂಕ್ ಮುಚ್ಚಿ ಹೋಗುವ ಹಂತದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ. ಚುನಾವಣೆ ಬಂತು ಎಂದು ಸಾಲ ನೀಡುತ್ತಿಲ್ಲ, ವೇಮಗಲ್‌ನಲ್ಲಿ ನಡೆಯುತ್ತಿರುವುದು ಮಹಿಳೆಯರ ಮತ್ತು ರೈತರ ಸಹಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬರಬಾರದು ಎಂದು ಯಾವ ಕಾನೂನು ಇಲ್ಲ ಎಂದು ಹೇಳಿದರು.
ಪತ್ರಕರ್ತರ ಭವನಕ್ಕೆ ನಿವೇಶನ ನೀಡಲು ಯತ್ನ: ಶಾಸಕ ಮಹೇಶ್
ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಫೆ.13ರಂದು ವೇಮಗಲ್‌ನಲ್ಲಿ ನಡೆಯುವ ರೈತ ಮಹಿಳಾ ಸಮಾವೇಶಕ್ಕೆ ಆಸೆ ಆಮಿಷವೊಡ್ಡಿ ಸಮಾವೇಶಕ್ಕೆ ಬರುವಂತೆ ಮಾಡಿಲ್ಲ. ಡಿಸಿಸಿ ಬ್ಯಾಂಕ್ ವಿಚಾರದ ಆರೋಪಕ್ಕೆ ಸಂಬಂಸಿದಂತೆ ಯಾರೂ ಸಹ ಅಭಿವೃದ್ಧಿಯನ್ನು ಅವರ ಅಪ್ಪನ ಮನೆಯ ಆಸ್ತಿಯನ್ನು ತಂದು ಮಾಡುತ್ತಿಲ್ಲ. ಡಿಸಿಸಿ ಬ್ಯಾಂಕಿಗೆ ನಬಾರ್ಡ್ ಮತ್ತು ಅಫೆಕ್ಸ್ ಬ್ಯಾಂಕಿನಿಂದ ಸಾಲ ತಂದು ನಿಗತ ಅವಧಿಯಲ್ಲಿ ಸಾಲದ ಮರು ಪಾವತಿ ಬಡ್ಡಿ ಸಮೇತ ಮಾಡಲಾಗುತ್ತಿದೆ ಎಂದರು.
ಗೋವಿಂದಗೌಡರ ಹೆಸರು ಪ್ರಸ್ತಾವನೆ ತಪ್ಪಲ್ಲ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಜಾತಿ ಮತ್ತು ಪಕ್ಷ ನೋಡಿ ಸಾಲ ನೀಡಿಲ್ಲ, ಡಿಸಿಸಿ ಬ್ಯಾಂಕ್ ವಿರುದ್ಧ ಮಾಡುವ ಆರೋಪಗಳು ನಿರಾಧಾರವಾಗಿದ್ದು, ಕೋಲಾರದಿಂದ ಸಿದ್ದು ಸ್ಪರ್ಧೆಗೆ ಉತ್ತಮ ಸ್ಪಂದನೆ ಮತದಾರರಿಂದ ವ್ಯಕ್ತವಾಗುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಆಡಳಿತ ಮಂಡಳಿಯಿಂದ ರೈತ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳಿಗೆ ಸ್ಪಂದನೆ ಸಿಕ್ಕಿದೆ, ಕೆಪಿಸಿಸಿ ಅಧ್ಯಕ್ಷರು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಗೋವಿಂದಗೌಡರ ಹೆಸರನ್ನು ಪ್ರಸ್ತಾಪಿಸಿರುವುದು ತಪ್ಪೇನಿಲ್ಲ.
ಬ್ರಾಹ್ಮಣರು ಸಿಎಂ ಆಗಬಾರದೇ?: ಎಚ್‌ಡಿಕೆ ವಿರುದ್ಧ ಮುನಿರತ್ನ ಕಿಡಿ
ಈ ಹಿಂದೆ ಬ್ಯಾಂಕ್ ಮೇಲೆ ಸಾರ್ವಜನಿಕರಿಗೆ ನಂಬಿಕೆ ಬರಲು, ವ್ಯವಹಾರಗಳ ಅಭಿವೃದ್ದಿಗಾಗಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಟೇಬಲ್ ಮೇಲೆ ಹಣವನ್ನು ಪ್ರದರ್ಶಿಸಿ ಮಾದ್ಯಮದವರ ಮೂಲಕ ಪ್ರಚಾರ ಮಾಡಿರುವ ಹಿನ್ನೆಲೆಯಲ್ಲಿ ಇಂದು 500 ಕೋಟಿಗೂ ಹೆಚ್ಚು ಹಣವನ್ನು ಠೇವಣಿಯಾಗಿ ಸಂಗ್ರಹಿಸಲಾಗಿದೆ. ಡಿ ಮಾರ್ಟೇಜ್ ಮಾಡಿದ ನಂತರ ಮಹಿಳೆಯರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ವೈ.ಶಿವಕುಮಾರ್, ನಗರಸಭೆ ಮಾಜಿ ಸದಸ್ಯ ಚೆನ್ನವೀರಯ್ಯ, ಶ್ರೀಕೃಷ್ಣ, ಅನಂತಪ್ಪ, ಮೋಹನ್ ಬಾಬು ಇದ್ದರು.