ಕಾಂಗ್ರೆಸ್‌ನವರು ಲೂಟಿಗೆ ರಾಜ್ಯದಲ್ಲಿ ಪ್ರಮುಖ ಬ್ಯಾಂಕ್ ಆರಂಭಿಸಿದ್ದು, ದೆಹಲಿಯ ಕಾಂಗ್ರೆಸ್ ಪಕ್ಷವೇ ಆರ್‌ಬಿಐ ಆಗಿ ಎಸ್‌ಬಿಐಗೆ ಅನುಮತಿ ನೀಡಿದೆ. ‘ಎಸ್‌ಬಿಐ’ ಅಂದರೆ ‘ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಬೆಂಗಳೂರು (ಅ.17): ಕಾಂಗ್ರೆಸ್‌ನವರು ಲೂಟಿಗೆ ರಾಜ್ಯದಲ್ಲಿ ಪ್ರಮುಖ ಬ್ಯಾಂಕ್ ಆರಂಭಿಸಿದ್ದು, ದೆಹಲಿಯ ಕಾಂಗ್ರೆಸ್ ಪಕ್ಷವೇ ಆರ್‌ಬಿಐ ಆಗಿ ಎಸ್‌ಬಿಐಗೆ ಅನುಮತಿ ನೀಡಿದೆ. ‘ಎಸ್‌ಬಿಐ’ ಅಂದರೆ ‘ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನವರು ‘ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಶಾಖೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ.
ಪಂಚ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಈ ರೀತಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಪಂಚರಾಜ್ಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಚಟುವಟಿಕೆ ಚುರುಕಾಗಿದೆ. ಪಂಚ ರಾಜ್ಯಗಳಿಗೆ ಹಣ ಕಳುಹಿಸುವ ಕಾಂಗ್ರೆಸ್ ಸಂಚು ಬಯಲಾಗಿದೆ. ಹೊರ ರಾಜ್ಯಗಳಿಗೆ ಎಷ್ಟು ಸಾವಿರ ಕೋಟಿ ರು. ಕಳುಹಿಸಲಾಗುತ್ತಿದೆ ಎಂಬುದು ಯಾರಿಗೂ ಅಂದಾಜು ಸಿಗುತ್ತಿಲ್ಲ. ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಹಗಲು ದರೋಡೆಯಲ್ಲಿ ಮುಳುಗಿದೆ ಎಂದು ಟೀಕಾ ಪ್ರಹಾರ ನಡೆಸಿದರು. ದಸರಾದಲ್ಲಿ ಕಲಾವಿದರಿಂದಲೂ ಕಮಿಷನ್ ಕೇಳುವ ಮಟ್ಟಕ್ಕೆ ಕಾಂಗ್ರೆಸಿಗರು ಇಳಿದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇವರೆಲ್ಲಾ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಆಕ್ರೋಶ
ಕಮಿಷನ್ ತಳಮಟ್ಟದ ಅಧಿಕಾರಿಗಳವರೆಗೂ ಮುಟ್ಟಿದೆ. ಹಣ ಸಂಗ್ರಹ ಮಾಡಿ ಪಂಚರಾಜ್ಯಗಳಿಗೆ ಕಳುಹಿಸುತ್ತಿರುವ ಕಾಂಗ್ರೆಸ್ ಸಂಚು ಜನರಿಗೂ ಗೊತ್ತಾಗಿದೆ. ಕಾಂಗ್ರೆಸ್ ನವರು ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ. ಆದರೆ, ಆ ಹಣ ಕಾಂಗ್ರೆಸ್‌ಗೆ ಸೇರಿದ್ದಲ್ಲ ಎಂದು ಹೇಳುತ್ತಿಲ್ಲ. ಅದರ ಅರ್ಥ ಈ ಹಣ ಕಾಂಗ್ರೆಸ್‌ಗೆ ಸೇರಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇದು ಲೂಟಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂಲಕ ಬಿಬಿಎಂಪಿ ಮತ್ತು ಬೇರೆ ಬೇರೆ ಇಲಾಖೆಗಳಿಂದ ಹಣ ಸಂಗ್ರಹ ಮಾಡಿ ಅನ್ಯ ರಾಜ್ಯಗಳಿಗೆ ಕಳಿಸುತ್ತಿದ್ದಾರೆ. ಚುನಾವಣೆಗಾಗಿ ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲೂಟಿ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲೋದಕ್ಕೆ ಹೊರಟಿದ್ದಾರೆ.
ಕೃಷಿ ಕ್ಷೇತ್ರದ ಬೆಳವಣಿಗೆಗೆ ಹೈಟೆಕ್ ಹಬ್ ಸ್ಥಾಪನೆ: ಸಚಿವ ಚೆಲುವರಾಯಸ್ವಾಮಿ
ಇದಕ್ಕೆ ನಾವು ಅವಕಾಶ ಕೊಡಲ್ಲ ಎಂದರು. ಇದೇ ವೇಳೆ ವಿದ್ಯುತ್ ದರ ಹೆಚ್ಚಳ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಬಣ್ಣ ಬಯಲಾಗಿದೆ. ರೈತರಿಗೆ ವಿದ್ಯುತ್ ಬರೆ ಹಾಕುತ್ತಿದ್ದಾರೆ. ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಹವಾಮಾನ ಇಲಾಖೆ ಮುಂಚೆಯೇ ಬರದ ಬಗ್ಗೆ ಎಚ್ಚರಿಸಿತ್ತು. ಆದರೆ, ಈ ಸರ್ಕಾರ ಬರ ಎದುರಿಸಲು ಸಜ್ಜಾಗಲಿಲ್ಲ. ಇವರಿಗೆ ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಒಂದು ವೇಳೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಬೇರೆ ರಾಜ್ಯಗಳಿಂದ ಈಗಾಗಲೇ ವಿದ್ಯುತ್ ಖರೀದಿಸಿ ರೈತರಿಗೆ ಕೊಡ ಬಹುದಿತ್ತು. ಈಗ ವಿದ್ಯುತ್ ಖರೀದಿ ನಾಟಕವಾಡುತ್ತಿದ್ದಾರೆ. ಸುಳ್ಳು ಭರವಸೆ ಕೊಡುವ ಮೂಲಕ ಲೋಕಸಭೆ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.