ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

By Kannadaprabha News  |  First Published Oct 16, 2023, 11:59 PM IST

ಚುನಾವಣೆ ಸಂದರ್ಭದಲ್ಲಿ ಅನೇಕರು ನನ್ನ ಮೇಲೆ ಹಲವು ರೀತಿಯ ಆರೋಪ ಮಾಡಿದ್ದರೂ ಕ್ಷೇತ್ರದ ಜನರು ಯಾವುದಕ್ಕೂ ಕಿವಿಗೊಡದೆ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸುವ ಮೂಲಕ ನಿರೀಕ್ಷೆಗೂ ಮೀರಿ ಬಹುಮತ ನೀಡಿ ಆಯ್ಕೆ ಮಾಡಿದ್ದೀರಿ.
 


ಬೆಳಗಾವಿ (ಅ.16): ಚುನಾವಣೆ ಸಂದರ್ಭದಲ್ಲಿ ಅನೇಕರು ನನ್ನ ಮೇಲೆ ಹಲವು ರೀತಿಯ ಆರೋಪ ಮಾಡಿದ್ದರೂ ಕ್ಷೇತ್ರದ ಜನರು ಯಾವುದಕ್ಕೂ ಕಿವಿಗೊಡದೆ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸುವ ಮೂಲಕ ನಿರೀಕ್ಷೆಗೂ ಮೀರಿ ಬಹುಮತ ನೀಡಿ ಆಯ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ರಾಜಕೀಯ, ಪಕ್ಷ, ಜಾತಿ, ಭಾಷೆ ಎಲ್ಲವನ್ನೂ ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿಗಾಗಿ ಒಂದಾಗೋಣ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನನ್ನ ಸಂಕಲ್ಪಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ನಾನು ಎಂದೂ, ಯಾರನ್ನೂ ದ್ವೇಷದಿಂದ ನೋಡಿಲ್ಲ. ನನಗೆ ಬೇಕಿರುವುದು ಕ್ಷೇತ್ರದ ಅಭಿವೃದ್ಧಿ ಮಾತ್ರ. ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ. ಇದೇ ಪ್ರೀತಿ, ವಿಶ್ವಾಸ ಉಳಿಸಿಕೊಂಡು, ಇನ್ನಷ್ಟು ಅಭಿವೃದ್ಧಿ ಪರ ಯೋಜನೆ ಹಾಕಿಕೊಳ್ಳುತ್ತೇನೆ. ನಿಮ್ಮೆಲ್ಲರ ಕೃಪೆಯಿಂದ ಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಸಾಧ್ಯವಿದೆ. ನಿಮ್ಮ ಸಹಕಾರ ಮುಂದಿನ ದಿನಗಳಲ್ಲೂ ಇರಲಿ ಎಂದು ಸಚಿವರು ಕೋರಿದರು. ನಂದಿಹಳ್ಳಿಯ ರಸ್ತೆ ಅಭಿವೃದ್ಧಿಗೆ ₹ 3 ಕೋಟಿ, ಮಂದಿರದ ಅಭಿವೃದ್ಧಿಗೆ ₹ 2 ಕೋಟಿ ಮೊದಲ ಹಂತದಲ್ಲಿ ಮಂಜೂರು ಮಾಡಿಸಿದ್ದೇನೆ. 

Tap to resize

Latest Videos

ಮಂಗಳೂರು: ಮಂಗಳಾದೇವಿ ಸ್ಟಾಲ್‌ಗಳಿಗೆ 'ಭಗವಾಧ್ವಜ': ವಿವಾದಕ್ಕೆ ವಿಎಚ್‌ಪಿ ಎಂಟ್ರಿ!

ನಿಮ್ಮೆಲ್ಲರ ಜತೆ ಚರ್ಚಿಸಿ ಮುಂದಿನ ಹಂತಗಳಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತರುವೆ ಎಂದು ಹೇಳಿದರು. ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಗ್ರಾಪಂ ಅಧ್ಯಕ್ಷೆ ರೇಖಾ ಶಿಂಗೆನ್ನವರ, ಉಪಾಧ್ಯಕ್ಷೆ ಕುಸುಮಾ ಪಾಟೀಲ, ಮಲ್ಲಿಕಾರ್ಜುನ ಲೋಕೂರ್, ಮಹದೇವ್ ಜಾಧವ, ಶಶಿಕಾಂತ ಪಾಟೀಲ, ಸುವರ್ಣ ಹಂಪನ್ನವರ, ನಿಂಗವ್ವ ಕುರುಬರ, ಪ್ರಸಾದ ಪಾಟೀಲ, ನಿಂಗುಬಾಯಿ ಹಗೆದಾಳ, ಬಾಹುರಾವ್ ಪಾಟೀಲ, ರಾಮದಾಸ ಜಾಧವ, ಸಹದೇವ ಬೆಳಗಾಂವ್ಕರ್, ಓಮಣ್ಣ ಕರ್ಲೇಕರ್, ಬಸು ಹಂಪನ್ನವರ, ಪರಶುರಾಮ ಕೋಲಕಾರ, ಡಾ.ಕಿರಣ ಲೋಂಡೆ, ಸಂಜೀವ ಮಾದರ, ಯಲ್ಲಪ್ಪ ಹಗೆದಾಳ, ರಾಜು ಪಾಟೀಲ, ಪರಶು ಜಾಧವ, ಗಣಪತಿ ಜಾಧವ, ಪ್ರಹ್ ಅವಚಾರಿ, ಮಾರುತಿ ಲೋಕೂರ್ ಹಾಗೂ ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.

click me!