ಅನ್ನಭಾಗ್ಯ ಸಿದ್ದರಾಮಯ್ಯರ ಅಚ್ಚುಮೆಚ್ಚಿನ ಕಾರ್ಯಕ್ರಮ: ಶಾಸಕ ಬಸವರಾಜ ರಾಯರಡ್ಡಿ

By Kannadaprabha NewsFirst Published Aug 3, 2023, 9:22 PM IST
Highlights

ಅನ್ನಭಾಗ್ಯ ಯೋಜನೆ ಸಿಎಂ ಸಿದ್ದರಾಮಯ್ಯನವರ ಫೆವರೀಟ್‌ ಕಾರ್ಯಕ್ರಮ ಎಂದು ಶಾಸಕ ಬಸವರಾಜ ರಾಯರಡ್ಡಿ ಶ್ಲಾಘಿಸಿದರು. ತಾಲೂಕಿನ ತಳಕಲ್‌ ಗ್ರಾಮದಲ್ಲಿ ಜರುಗಿದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಿದ್ದರಾಮಯ್ಯ 7 ಕೆಜಿ ಅಕ್ಕಿ ನೀಡುತ್ತಿದ್ದರು.

ಕುಕನೂರು (ಆ.03): ಅನ್ನಭಾಗ್ಯ ಯೋಜನೆ ಸಿಎಂ ಸಿದ್ದರಾಮಯ್ಯನವರ ಫೆವರೀಟ್‌ ಕಾರ್ಯಕ್ರಮ ಎಂದು ಶಾಸಕ ಬಸವರಾಜ ರಾಯರಡ್ಡಿ ಶ್ಲಾಘಿಸಿದರು. ತಾಲೂಕಿನ ತಳಕಲ್‌ ಗ್ರಾಮದಲ್ಲಿ ಜರುಗಿದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಿದ್ದರಾಮಯ್ಯ 7 ಕೆಜಿ ಅಕ್ಕಿ ನೀಡುತ್ತಿದ್ದರು. ಈ ಬಿಜೆಪಿಯವರು ಅದನ್ನು 5 ಕೆಜಿಗೆ ಇಳಿಸಿದರು. 

ಸದ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು 10 ಕೆಜಿಗೆ ಏರಿಕೆ ಮಾಡುವುದಾಗಿ ಘೋಷಿಸಿತು. ಆದರೆ ಕ್ಷುಲ್ಲಕ ರಾಜಕಾರಣಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ. ಅದಕ್ಕಾಗಿಯೇ ನಾವು ಅಕ್ಕಿ ಬದಲು ಅದರ ಹಣ ನೇರವಾಗಿ ಖಾತೆಗೆ ನೀಡುತ್ತಿದ್ದೇವೆ ಎಂದರು. ಸಿಎಂ ಸಿದ್ದರಾಮಯ್ಯನವರು ಸಹ ಬಡತನದಿಂದ ಬಳಲಿ. ಹಸಿವಿನಿಂದ ಪರಿತಪಿಸಿ ಬಂದವರು. ಅವರಿಗೆ ಬಡವರ ಕಷ್ಟಗೊತ್ತಿದೆ. ಹಾಗಾಗಿಯೇ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಜಾರಿಗೆ ತಂದರು ಎಂದರು.

ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು: ವೃದ್ಧ ದಂಪತಿಗಳ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿ

ಗೃಹಲಕ್ಷ್ಮೇ, ಗೃಹಜ್ಯೋತಿ, ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಗಳನ್ನು ಲೆಕ್ಕ ಹಾಕಿದರೆ ಒಂದು ಕುಟುಂಬಕ್ಕೆ ಸುಮಾರು 4 ಸಾವಿರ ಹಣದಷ್ಟುವ್ಯಯವಾಗುತ್ತದೆ. ಇಂತಹ ಜನಪರ ಕಾರ್ಯ ಯಾವ ರಾಜ್ಯದಲ್ಲೂ ಇಲ್ಲ. ವರ್ಷಕ್ಕೆ .58 ಸಾವಿರ ಕೋಟಿಯನ್ನು ಐದು ಗ್ಯಾರಂಟಿ ಯೋಜನೆಗಳಿಗೆ ವ್ಯಯವಾಗುತ್ತದೆ. ಇದರ ಜೊತೆಗೆ ರೈತರ ಪಂಪ್‌ಸೆಟ್‌, ಶಾಲಾ ಮಕ್ಕಳಿಗೆ ಪಠ್ಯ, ಬಟ್ಟೆ, ಬಿಸಿಯೂಟ, ಅಂಗನವಾಡಿ ಮಕ್ಕಳಿಗೆ ಸವಲತ್ತು, ಇತರೆ ಯಾವುದೇ ಯೋಜನೆಗಳಿಗೆ ಹೊರಯಾಗದಂತೆ ಗ್ಯಾರಂಟಿ ಜಾರಿಗೆ ಆಗಿವೆ. ಬಜೆಟ್‌ ಸಹ ಸಮಗ್ರತೆಯಿಂದ ಕೂಡಿದೆ. ಈ ಸಲದ ರಾಜ್ಯದ ಬಜೆಟ್‌ ಬಡವರ ಪಾಲಿನ ಭಾಗ್ಯದ ಬಾಗಿಲು ತೆಗೆಯುವ ಬಜೆಟ್‌ ಆಗಿದೆ ಎಂದರು.

ಸಮಾಜ ಸೇವೆಯ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಕ್ಷೇತ್ರದಲ್ಲಿ 10 ಸಾವಿರ ಮನೆ ಮಂಜೂರು ಮಾಡಿಸಿದ್ದೇನೆ. ಶೀಘ್ರದಲ್ಲಿ ಗ್ರಾಪಂಗಳಿಗೆ ಮನೆಗಳ ಮಂಜೂರಾತಿ ಮಾಡಿಸುತ್ತೇನೆ. ಈ ಹಿಂದೆ ನಾನು 1994ರಲ್ಲಿ ವಸತಿ ಸಚಿವನಾಗಿದ್ದಾಗ, ಮನೆಗಳನ್ನು ಪಡೆದವರು 15 ವರ್ಷ ಮನೆ ಮಾರಬಾರದು ಎಂದು ನಾನೇ ಕಾಯ್ದೆ ಮಾಡಿದೆ. ಈಗ ಆ ಮನೆಗಳನ್ನು ಜನರು ಮಾರಿಕೊಳ್ಳುತ್ತಿದ್ದಾರೆ. ಹೀಗಾಗಬಾರದು. ಮನೆಗಳ ಹಂಚಿಕೆಯಲ್ಲಿ ದುರುಪಯೋಗ ಆಗಬಾರದು. ಮನೆ ಹಂಚಿಕೆಯಲ್ಲಿ ನಿಜವಾದ ಬಡವರು ಉಳಿಯುತ್ತಿದ್ದಾರೆ. ಮನೆ ಹಂಚಿಕೆ ಗ್ರಾಪಂನವರು ಬಡವರನ್ನು ಗುರುತಿಸಿ ಕೊಡಬೇಕು. 

ಹೊನ್ನಾವರದಲ್ಲಿ 2 ಕುಟುಂಬಕ್ಕೆ 6 ವರ್ಷದಿಂದ ಸಾಮಾಜಿಕ ಬಹಿಷ್ಕಾರ: ಜಿಲ್ಲಾಡಳಿತದ ಮೊರೆಹೋದ ಸಂತ್ರಸ್ತರು!

ಫಲಾನುಭವಿಗಳಿಂದ .10-20 ಸಾವಿರ ವಸೂಲಿ ಮಾಡಿಕೊಂಡು ಕೊಡಬಾರದು. ಹಾಗೆ ಫಲಾನುಭವಿಗಳು ಯಾರಿಗೂ .1 ಸಹ ನೀಡಬಾರದು. ಗ್ರಾಪಂನಲ್ಲಿ ಒಳ್ಳೆಯ ಕೆಲಸಗಳಾಗಬೇಕು ಎಂದರು. ತಳಕಲ್‌ ಭಾಗದಲ್ಲಿ ಸಿಂಗಟಾಲೂರು ಹನಿ ನೀರಾವರಿ ಯೋಜನೆ ಈಗ ಆರಂಭವಾಗಿದೆ. ಅದನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುತ್ತೇನೆ. ಅಮೃತ 2.0 ಯೋಜನೆಯಲ್ಲಿ ತಳಕಲ್‌ ಗ್ರಾಮಕ್ಕೂ ಕುಡಿವ ನೀರು ತರಲು ಒಪ್ಪಿಗೆ ಪಡೆದಿದ್ದೇನೆ ಎಂದರು. ಉಪತಹಸೀಲ್ದಾರ ಮುರುಳೀಧರಾವ ಕುಲಕರ್ಣಿ, ತಾಪಂ ಇಒ ಸಂತೋಷ ಬಿರಾದಾರ, ಆಹಾರ ಇಲಾಖೆ ತಾಲೂಕಾಧಿಕಾರಿ ಮಲ್ಲಯ್ಯ, ಗ್ರಾಪಂ ಅಧ್ಯೆಕ್ಷೆ ಜಯೀರಾಬೇಗಂ, ಗ್ರಾಪಂ ಸದಸ್ಯರು, ಮುಖಂಡರಿದ್ದರು.

click me!