ಜನರನ್ನು ಲಂಚಕ್ಕಾಗಿ ಪೀಡಿಸುತ್ತಿರಲ್ಲ, ನಿಮಗೆ ಮರ್ಯಾದೆ ಇದೆಯೇ: ಅಧಿಕಾರಿಗಳಿಗೆ ಶಾಸಕಿ ರೂಪಕಲಾ ತರಾಟೆ

Published : Aug 03, 2023, 07:06 PM IST
ಜನರನ್ನು ಲಂಚಕ್ಕಾಗಿ ಪೀಡಿಸುತ್ತಿರಲ್ಲ, ನಿಮಗೆ ಮರ್ಯಾದೆ ಇದೆಯೇ: ಅಧಿಕಾರಿಗಳಿಗೆ ಶಾಸಕಿ ರೂಪಕಲಾ ತರಾಟೆ

ಸಾರಾಂಶ

ಕೆಜಿಎಫ್‌ ತಾಲೂಕು ಆಡಳಿತ ಭವನದಲ್ಲಿರುವ ಕಂದಾಯ ಇಲಾಖೆಯ ಪ್ರತಿಯೊಂದು ಗೋಡೆಯೂ ಜನರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದು, ನಿಮಗೆ ಮರ್ಯಾದೆ ಇದೆಯೇ, ಕಷ್ಟುಪಟ್ಟು 13 ತಿಂಗಳಲ್ಲಿ 3 ಎಕರೆ ಜಾಗದಲ್ಲಿ ಸುಸಜಿತ ತಾಲೂಕು ಆಡಳಿತ ಭವನವನ್ನು ನಿರ್ಮಿಸಲಾಗಿದೆ. 

ಕೆಜಿಎಫ್‌ (ಆ.03): ಕೆಜಿಎಫ್‌ ತಾಲೂಕು ಆಡಳಿತ ಭವನದಲ್ಲಿರುವ ಕಂದಾಯ ಇಲಾಖೆಯ ಪ್ರತಿಯೊಂದು ಗೋಡೆಯೂ ಜನರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದು, ನಿಮಗೆ ಮರ್ಯಾದೆ ಇದೆಯೇ, ಕಷ್ಟುಪಟ್ಟು 13 ತಿಂಗಳಲ್ಲಿ 3 ಎಕರೆ ಜಾಗದಲ್ಲಿ ಸುಸಜಿತ ತಾಲೂಕು ಆಡಳಿತ ಭವನವನ್ನು ನಿರ್ಮಿಸಲಾಗಿದೆ. ಇಂತಹ ಆಡಳಿತ ಭವನದಲ್ಲಿ ಲಂಚಕೋರರು, ಭೂ ಕಬಳಿಕೆ ಮಾಡುವವರನ್ನು ಕೂರಿಸಿರುವುದಕ್ಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತಿದೆ ಎಂದು ಶಾಸಕಿ ರೂಪಕಲಾ ಶಶಿಧರ್‌ ತಾಲೂಕು ಆಡಳಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಪಂ ಕಚೇರಿಯ ಸಂಭಾಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ ಸುರೇಶ್‌ರನ್ನು ತರಾಟೆಗೆ ತೆಗೆದುಕೊಂಡು, ಏನಪ್ಪ ಎಷ್ಟು ಸರಕಾರಿ ಭೂಮಿಯನ್ನು ಸಂರಕ್ಷಣೆ ಮಾಡಿದ್ದೀಯಾ, ಬಂಗಾರದ ಗಣಿ ಗ್ರಾಮದ ಸರ್ವೇ ನಂ 2, 3, ರಲ್ಲಿ ಅಕ್ರಮ ಬಡಾವಣೆ ನಿರ್ಮಾಣ, ದೇವಾಲಯಗಳ ನಿರ್ಮಾಣ ಮಾಡಿರುವುದು ನಿಮಗೆ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಕಟ್ಟುತ್ತೇನೆ: ಮಾಜಿ ಸಚಿವ ಸುಧಾಕರ್‌

ಸರ್ಕಾರಿ ಭೂಮಿಗೆ ನಾಮಫಲಕ ಹಾಕಿ: ಕೆಜಿಎಫ್‌ ತಾಲೂಕಿನಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿಯಿದ್ದು, ಕಂದಾಯ ಅಧಿಕಾರಿಗಳು ಸಂರಕ್ಷಣೆ ಮಾಡಿರುವ ಭೂಮಿಗೆ ಸರಕಾರಿ ಜಮೀನಿನ ವಿವರಣೆ ನಾಮಫಲಕದಲ್ಲಿ ನಮೂದಿಸಿ, ತಾಲೂಕಿನಲ್ಲಿರುವ ಕೆರೆಗಳ ಒತ್ತುವರಿ ತೆರವುಗೊಳಿಸಿ ಕೆರೆಗಳ ಸಂರಕ್ಷಣೆ ಮುಂದಾಗುವಂತೆ ಸಭೆಯಲ್ಲಿ ಶಾಸಕರು ಸೂಚನೆ ನೀಡಿದರು. 94 ಸಿಸಿ ಅಡಿಯಲ್ಲಿ ಬಡವರಿಗೆ ನಿವೇಶನ ಹಕ್ಕು ಪತ್ರ ನೀಡಲು ಎಲ್ಲಿ ಅವಕಾಶ ಸಿಗುತ್ತದೂ ಅತಂಹ ಕಡೆ ಸರಕಾರಿ ಭೂಮಿಯನ್ನು ಗುರುತಿಸುವ ಕೆಲಸವನ್ನು ಮಾಡಿ ಎಂದರು.

ತಾಲೂಕಿನಲ್ಲಿರುವ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ ಶಾಸಕಿ, ಗರ್ಭಿಣಿಯರು, ಬಾಣಂತಿಯರು ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದ್ದೇಯೇ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದರು. ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ 80 ವಿದ್ಯಾರ್ಥಿಗಳ ಜಾಗದಲ್ಲಿ 200 ವಿದ್ಯಾರ್ಥಿಗಳು ಇರುವುದರಿಂದ ಜಾಗದ ಕೊರತೆಯಾಗಿದೆ ಎಂದು ತಾಲೂಕು ಅಧಿಕಾರಿ ಸಕಪಾಲ್‌ ಸಭೆಯಲ್ಲಿ ತಿಳಿಸಿದರು, ಇದಕ್ಕೆ ಪರಾರ‍ಯಯ ವ್ಯವಸ್ಥೆ ಕೈಗೊಳ್ಳುವಂತೆ ಶಾಸಕರು ಸೂಚಿಸಿ ಹಿಂದಳಿದ ವರ್ಗಗಳ ವಸತಿ ನಿಲಯವನ್ನು ಬೇತಮಂಗಲ ಮತ್ತು ಕ್ಯಾಸಂಬಳ್ಳಿಯಲ್ಲಿ ಸ್ಥಾಪನೆ ಮಾಡುವಂತೆ ಅಧಿಕಾರಿಗೆ ಶಾಸಕರು ಸೂಚಿಸಿದರು.

ಗ್ಯಾರಂಟಿಗಳು ಸಿಂಗಾ​ಪು​ರ​ದಲ್ಲಿ ಕುಳಿ​ತ​ವರ ತಲೆ ಕೆಡಿಸ್ತಿವೆ: ಎಚ್‌ಡಿಕೆಗೆ ಶಾಸಕ ಬಾಲ​ಕೃಷ್ಣ ಟಾಂಗ್‌

ತಾಲೂಕು ಆರೋಗ್ಯಧಿಕಾರಿ ಸ್ವರಸತಿ ತಮ್ಮ ಇಲಾಖೆ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದಾಗ, ಪ್ರತಿಯೊಂದು ಹಳ್ಳಿಯಲ್ಲಿ ರೋಗಿಗಳು ಬಂದಾಗ ನೀವು ತಿಳುವಳಿಕೆ ನೀಡಿ ರೋಗಿಗಳು ಇಂತಹ ಕಾಯಿಲೆ ಇಂತಹ ವೈದ್ಯರನ್ನು ಸಂಪರ್ಕ ಮಾಡಿದರೆ ನಿಮಗೆ ಖಾಯಿಲೆ ವಾಸಿಯಾಗುತ್ತದೆ ಎಂದು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು. ಸಭೆಯಲ್ಲಿ ತಾಲೂಕು ಪಂ, ಇ.ಓ ಮಂಜುನಾಥ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ