ಸಿಎಂ ಸಿದ್ದರಾಮಯ್ಯ 'ಮುಡಾ ಹಗರಣ ತಪ್ಪು' ಗ್ಯಾರಂಟಿ ಒಪಿಕೊಳ್ತಾರೆ: ವಿಜಯೇಂದ್ರ ವಿಶೇಷ ಸಂದರ್ಶನ

By Kannadaprabha NewsFirst Published Jul 28, 2024, 11:14 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿರುವಮುಡಾಹಗರಣವು ಕಾಂಗ್ರೆಸ್‌ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ. 
 

ಬೆಂಗಳೂರು (ಜು.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿರುವಮುಡಾಹಗರಣವು ಕಾಂಗ್ರೆಸ್‌ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ. ಇದನ್ನೇ ಇಟ್ಟುಕೊಂಡು ಸದನದೊಳಗೆ ಹೋರಾಟ ನಡೆಸಿದ ಬಿಜೆಪಿ-ಜೆಡಿಎಸ್ ಸದನದ ಮುಂದುವರಿಸಲು ಇದೀಗ ಹೊರಗೂ ಅದನ್ನು ತೀರ್ಮಾನಿಸಿವೆ. ಮುಡಾ ಹಗರಣವನ್ನು ನ್ಯಾಯಾಂಗ ಆಯೋಗದ ಬದಲು ಸಿಬಿಐನಿಂದ ತನಿಖೆ ನಡೆಸಬೇಕು ಎಂಬ ಒತ್ತಾಯದೊಂದಿಗೆ ಬೀದಿಗಿಳಿಯಲು ಸಜ್ಜಾಗಿವೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 'ಕನ್ನಡಪ್ರಭ' ಸಹೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿರುವ ಸಂದರ್ಶನದ ವಿವರ ಇಂತಿದೆ.

• ಮುಡಾ ನಿವೇಶನಗಳು ಮುಖ್ಯ ಮಂತ್ರಿಗಳಿಗೆ ಮಾತ್ರವಲ್ಲದೇ, ಬಿಜೆಪಿ, ಜೆಡಿಎಸ್ ಶಾಸಕರಿಗೂ ಸಿಕ್ಕಿವೆ. ಎಲ್ಲರೂ ಸಮಾನ ಪ್ರತಿಫಲಾನು ಭವಿಗಳು ಎಂಬ ಆರೋಪಗಳಿವೆ. ನಿಮ್ಮ ಉತ್ತರ ಏನು?
ಯಾರ್ಯಾರಿಗೆ ನಿವೇಶನ ಸಿಕ್ಕಿದೆ ಎನ್ನುವುದಕ್ಕಿಂತ ಯಾರಾರಿಗೆ ಅಕ್ರಮವಾಗಿ ನಿವೇಶನ ಸಿಕ್ಕಿದೆ ಎಂಬುದು ಎದ್ದಿರುವ ಪ್ರಶ್ನೆ. ಅದಕ್ಕೆ ಉತ್ತರ ನೀಡಬೇಕು. ಒಂದು ವೇಳೆ ಪ್ರತಿಪಕ್ಷದವರಿಗೆ ಕಾನೂನುಬಾಹಿರವಾಗಿನಿವೇಶನ ನೀಡಿದರೆ ತನಿಖೆ ನಡೆಸಲಿ, ಬೇಡ ಎಂದಿದ್ದು ಯಾರು?

Latest Videos

ವಿಜಯೇಂದ್ರ ಒಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಹಗರಣ ಶೀಘ್ರ ಬಹಿರಂಗ: ಡಿಕೆಶಿ ಘೋಷಣೆ

• ಕಳೆದ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯಲ್ಲಿಯೇ ಹೊಂದಾಣಿಕೆ ಇಲ್ಲದಿರುವುದು ಕಾಣುತ್ತಿತ್ತು. ಆದರೆ, ಈ ಬಾರಿ ಒಗ್ಗಟ್ಟು ಕಾಣಿಸುತ್ತಿತ್ತು. ದಿಢೀರ್ ಆಗಿ ಎಲ್ಲಿಂದ ಈ ಜೋಶ್? 
ಕಳೆದ ಅಧಿವೇಶನದಲ್ಲಿ ಜ್ವಲಂತ ಸಮಸ್ಯೆ ಹೊರತುಪಡಿಸಿದರೆ ಇತರೆ ಯಾವುದೇ ವಿಷಯಗಳು ಇರಲಿಲ್ಲ. ಆದರೆ, ಈ ಬಾರಿ ಇಷ್ಟು ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಇಷ್ಟೊಂದು ಭ್ರಷ್ಟಾಚಾರ ಆರೋಪ ಬರುತ್ತದೆ ಎಂಬ ನಿರೀಕ್ಷೆ ನಮಗೂ ಇರಲಿಲ್ಲ. ಒಂದು ಕಡೆ ವಾಲ್ಮೀಕಿ ಅಭಿವೃದ್ಧಿನಿಗಮದಲ್ಲಿನ ಹಗರಣವಾದರೆ, ಮತ್ತೊಂದೆಡೆ ಮುಡಾ ಹಗರಣ ಬಯಲಾ ಗಿದೆ. ಪ್ರತಿಪಕ್ಷಕ್ಕೆ ಇದರಿಂದ ಬ್ರಹ್ಮಾಸ್ತ್ರಸಿಕ್ಕಿದೆ ಎನ್ನುವುದಕ್ಕಿಂತ ಅಹಿಂದ ಪರ ಎಂದು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅದೇ ಸಮುದಾಯವನ್ನು ತುಳಿಯುತ್ತಿದೆ. ರಾಜ್ಯದ ಜನತೆ ಮುಂದೆ ಸರ್ಕಾರದ ಬಂಡವಾಳ ಬಯಲುಮಾಡಬೇಕು ಮತ್ತು ಅನ್ಯಾಯಕ್ಕೊಳಗಾದವವರಿಗೆ ನ್ಯಾಯ ಕಾರಣಕ್ಕಾಗಿ ಒದಗಿಸಬೇಕು ಎಂಬ ಹೋರಾಟ ನಡೆಸಲಾಗುತ್ತಿದೆ.

• ಮೊದಲಿಗೆ ಮುಡಾ ವಿಚಾರಕ್ಕೆ ಬರುವುದಾದರೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಹೆಸರು ಇದ್ದು, ಸರ್ಕಾರಕ್ಕೆ ಒತ್ತಡದ ವಿಷಯ ವಾಗಿದೆ. ನೈತಿಕತೆ ಬದಿಗೊತ್ತಿದರೆ ಹಗರಣ ಎಲ್ಲಿದೆ?
ಬಡವರಿಗೆ ನಿವೇಶನ ಕೊಡಬೇಕೆಂಬ ಉದೇಶದಿಂದ ಮುಡಾ ರಚನೆಯಾಗಿದೆ. ಆದರೆ, ಸಿದ್ದರಾಮಯ್ಯ ಆಡಳಿತದಲ್ಲಿ ಅದು ಮಣ್ಣುಪಾಲಾಗಿದೆ. ಮನೆ ಇಲ್ಲದವರಿಗೆ, ಬಡವರಿಗೆ ನಿವೇಶನಗಳನ್ನು ನೀಡುವುದನ್ನು ಬಿಟ್ಟು ಹಾದಿಬೀದಿಯಲ್ಲಿ ಹೋಗು ವವರಿಗೆ, ಮುಖ್ಯಮಂತ್ರಿಗಳ ಹಿಂಬಾ ಲಕರಿಗೆ, ಅವರ ಕುಟುಂಬದವರಿಗೆ ನೀಡಿದ್ದು ಅಕ್ಷಮ್ಯ ಅಪರಾಧ. ಸಾವಿರಾರು ನಿವೇಶನಗಳನ್ನು " ಮನಬಂದಂತೆ ನೀಡಲಾಗಿದೆ. ಇದನ್ನು ನಾವು ಪ್ರಶ್ನಿಸುತ್ತೇವೆ. 

• ಮುಡಾ ನಿವೇಶನ ಪಡೆದಿದ್ದು ಕಾನೂನು ಬದ್ಧವಾಗಿದೆ ಎಂಬುದು ಮುಖ್ಯ ಮಂತ್ರಿಗಳ ವಾದ. ನೀವೇನು ಹೇಳುತ್ತೀರಿ?
ಒಂದು ಮಾತು ಹೇಳುತ್ತೇನೆ. ಯಾವ ಮುಖ್ಯ ಮಂತ್ರಿ ಮುಡಾದಲ್ಲಿ ಹಗರಣದಲ್ಲಿ ನಡೆದಿಲ್ಲ, ಎಲ್ಲವೂ ಕಾನೂನು ಬದ್ಧವಾಗಿದೆ ಹೇಳುತ್ತಾರೋ ಅದೇ ಮುಖ್ಯಮಂತ್ರಿ ಮುಂದೊಂದು ದಿನ ಮುಡಾದಲ್ಲಿ ತಪ್ಪಾಗಿದೆ, ನಮಗೆ ಬಂದಿರುವ ನಿವೇಶನ ಅಕ್ರಮವಾ ಗಿದೆ ಎಂದು ಜನತೆಯ ಮುಂದೆ ತಪ್ಪೋಪ್ಪಿಕೊಳ್ಳುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿಯೂ ಅಧಿಕಾರಿ ಚಂದ್ರ ಶೇಖರ್ ಆತ್ಮಹತ್ಯೆ ವಿಚಾರದಲ್ಲಿ ಡೆತ್‌ನೋಟ್ ಇದ್ದರೂ ಹಗರಣ ನಡೆದಿಲ್ಲ ಎಂದಿದ್ದರು. ಕಾಲಾನಂತರ ದಲ್ಲಿ ಮುಖ್ಯಮಂತ್ರಿಗಳೇ ಹಗರಣ ನಡೆದಿರುವ ಬಗ್ಗೆ ಒಪ್ಪಿಕೊಂಡರು. ಇದು ಹೀಗೆಯೇ ಆಗಲಿದೆ.

• ಮುಖ್ಯಮಂತ್ರಿಗಳಿಗೆ ಕಳಂಕ ತರಲು ಪ್ರತಿಪಕ್ಷ ಈ ರೀತಿ ಆರೋಪ ಮಾಡುತ್ತಿದೆ. ಬಿಜೆಪಿ ಸರ್ಕಾರದ ವೇಳೆ ಕೈಗೊಂಡ ನಿರ್ಣಯ ಇದಾಗಿದೆ ಎಂದು ಸಿಎಂ ಹೇಳುತ್ತಿದ್ದಾರಲ್ಲ?
ಸದನದೊಳಗೆ ಬಿಜೆಪಿ-ಜೆಡಿಎಸ್ ನಿಲುವಳಿ ಮಂಡಿಸಿದಾಗ ಚರ್ಚೆಗೆ ಅವಕಾಶ ನೀಡಬೇಕಿತ್ತು. ಪ್ರತಿಪಕ್ಷದ ಮಾತುಗಳನ್ನು ಕೇಳಿ ಈ ಮಾತನ್ನು ಹೇಳಿದರೆ ಒಪ್ಪಿಕೊಳ್ಳಬಹುದಿತ್ತು. ಆದರೆ, ಸದನದಲ್ಲಿ ಉತ್ತರ ನೀಡುವ ಬದಲು ಹೊರಗೆ ಪತ್ರಿಕಾಗೋಷ್ಠಿ ನಡೆಸಿ ಹೇಳಿದರೆ ಎಷ್ಟು ಸರಿ? ತಮ್ಮ ಕುಟುಂಬದ ವಿರುದ್ಧ ಆರೋಪಗಳು ಬಂದಾಗ ಮುಖ್ಯಮಂತ್ರಿ ಗಳು ಉತ್ತರ ನೀಡುವುದು ಅವರ ಜವಾಬ್ದಾರಿ. ಅಲ್ಲದೇ, ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕಾಗಿತ್ತು. ಆದರೆ ಅವರು ಸದನದಲ್ಲಿ ಉತ್ತರ ನೀಡುವ ಕೆಲಸ ಮಾಡಲಿಲ್ಲ.

• ಈ ಹಗರಣವನ್ನಿಟ್ಟುಕೊಂಡು ಮುಖ್ಯ ಮಂತ್ರಿಗಳ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂಬುದು ಕಾಂಗ್ರೆಸ್ ಆರೋಪ
ಮುಖ್ಯಮಂತ್ರಿಗಳು ಒಂದು ವಿಚಾರವನ್ನು ಗಮನ ದಲ್ಲಿಟ್ಟುಕೊಳ್ಳಬೇಕು. ಪ್ರತಿಪಕ್ಷದವರು ಮುಡಾ ವಿಚಾರವನ್ನು ತೆಗೆದಿರುವುದು ಅವರ ತೇಜೋವಧೆ ಮಾಡಲು ಅಲ್ಲ. ಮುಖ್ಯಮಂತ್ರಿಯಾದ ಬಳಿಕ ರಾಜಕೀಯ ಪುಡಾರಿಗಳಿಗೆ ಕಾನೂನುಬಾಹಿರವಾಗಿ ನಿವೇಶನ ನೀಡಲಾಗಿದೆ ಎಂಬ ಆರೋಪ ಇದೆ. ಅವರು ಸತ್ಯ ಹೇಳಬೇಕು ಅಲ್ಲವೇ.

• 2021ರಲ್ಲಿ ನಿಮ್ಮದೇ ಸರ್ಕಾರ ಇತ್ತು. ಆಗಲೇ ಭೂಮಿ ಮಂಜೂರಾಗಿದ್ದು, ಅಕ್ರಮ ನಡೆಯುತ್ತಿದೆ ಎಂದು ಆಗಲೇ ಯಾಕೆ ಗಮನಕ್ಕೆ ಬರಲಿಲ್ಲ?
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 14 ನಿವೇಶನ ನೀಡಿದ್ದು ಸತ್ಯ. ಆದರೆ, ಇದು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗಿ ನೀಡಲಾಗಿದೆ. ಆಗ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ನಂತರ ಇವರದೇ ಸರ್ಕಾರ ಬಂದ ಮೇಲೆ ಜಿಲ್ಲಾಧಿಕಾರಿಗಳ ವರದಿ ಅಧಾರದ ಮೇಲೆ 50:50 ಹಂಚಿಕೆ ಅಕ್ರಮವಾಗಿದೆ ಎಂದು ರದು ಹೇಳಿದೆ. ಗೊತ್ತಾದ ಬಳಿಕ ಮಾಡುವಂತೆಯೂ ತಿಳಿಸಿತ್ತು. ಆಗ ಅವರ ಪತ್ನಿಗೆ ನಿವೇಶನ ಬಂದಿರುವ ಬಗ್ಗೆ ಅನುಮಾನ ಬಂದಿರಬೇಕಲ್ಲವೇ? ಆಗಲಾದರೂ ಸರಿಪಡಿಸಿಕೊಳ್ಳಬಹುದಿತ್ತು. ಆದರೆ ಆ ಮಾಡಲಿಲ್ಲ.

• ತಮಗೆ 62 ಕೋಟಿ ರು. ಪರಿಹಾರ ಕೆಲಸ ಕೊಡಬೇಕು, ಕೊಟ್ಟುಬಿಡಿ ಎನ್ನುತ್ತಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮಾಡಿರುವ ಮೊದಲ ತಪ್ಪು. ಬಿಜೆಪಿ ಆರೋಪದಲ್ಲಿ ಸತ್ಯಾಸತ್ಯತೆ ಇದೆಯೇ ಎಂಬುದನ್ನು ಸಮಾಧಾನದಿಂದ ನೋಡ ಬೇಕಿತ್ತು. ಆದರೆ, ಬಿಜೆಪಿ ಅವಧಿಯಲ್ಲಿ ನೀಡಲಾಗಿದೆ ಎಂದು ಎಂಜಾಯ್ ಮಾಡೋಕೆ ಆಗುತ್ತಾ? ಅಧಿ ಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಕೊಟ್ಟಿ ದ್ದಾರೋ? ಅಥವಾ ಸಿದ್ದರಾಮಯ್ಯ ಪ್ರತಿಪಕ್ಷನಾಯ ಕರಿದ್ದಾರೆ ಎಂದು ಕೊಟ್ಟಿದ್ದಾರೋ? ಗೊತ್ತಿಲ್ಲವಲ್ಲ.

• ಅಧಿಕಾರಿಗಳು ಮಾಡಿದ್ದು, ಆಗ ಸರ್ಕಾರಕ್ಕೆ ಗಮನಕ್ಕೆ ಬಂದಿಲ್ಲ ಎನ್ನುತ್ತೀರಿ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿಯೂ ಇದೇ ಮಾತನ್ನು ಕಾಂಗ್ರೆಸ್ ಹೇಳುತ್ತಿದೆಯಲ್ಲ? 
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಸೇರಿ ನೂರಾರು ಕೋಟಿ ರು. ಲಪಟಾಯಿಸಿ ಹೊರರಾಜ್ಯದಲ್ಲಿ ನಕಲಿ ಕಂಪನಿಗಳ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರು. ಮೋಸ ಮಾಡಿದ್ದಾರೆ ಎಂದಿಟ್ಟುಕೊಳ್ಳೋಣ. ಹಾಗಿದ್ದರೆ, ಇ.ಡಿ. ಪ್ರತಿಕಾ ಪ್ರಕಟಣೆಯಲ್ಲಿ ಏನು ಹೇಳಿದೆ? ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ. ಮದ್ಯ ಖರೀದಿಗಾಗಿ ಬಳಕೆಯಾಗಿದೆ ಎಂದು ತಿಳಿಸಿದೆ. ಇದು ಅಧಿಕಾರಿಗಳು ಮಾಡಲು ಸಾಧ್ಯವೇ? ರಾಜಕೀಯ ವ್ಯಕ್ತಿಗಳು ಇಲ್ಲದಿದ್ದರೆ ಇದು ಹೇಗೆ ನಡೆಯಲು ಸಾಧ್ಯ? ದೇಶದ ಇತಿಹಾಸದಲ್ಲಿಯೇ ರಾಜ್ಯದ ಹಣವನ್ನು ಹೊರರಾಜ್ಯಕ್ಕೆ ಕಳುಹಿಸಿ ಮದ್ಯ ಖರೀದಿಸಿರುವುದು ಇದೇ ಮೊದಲು. 

ರಾಜ್ಯದ ಖಜಾನೆಯಲ್ಲಿದ್ದ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಸಚಿವರ ಪಾಲು ಇಲ್ಲದಿದ್ದರೆ ನಾಗೇಂದ್ರ ಅವರ ರಾಜೀನಾಮೆ ಯಾಕೆ ಪಡೆದುಕೊಂಡರು? ಇ.ಡಿ.ಆರೋಪ ಮಾಡುವಾಗ ಯಾವುದಾದರೂ ಆಧಾರ ಇರಬೇಕಲ್ಲವೇ? ಜವಾಬ್ದಾರಿಯುತ ತನಿಖಾ ಸಂಸ್ಥೆ ಆಧಾರರಹಿತ ಆರೋಪ ಮಾಡಲು ಸಾಧ್ಯವೇ? ದೇಶದಲ್ಲಿನ ಬಿಜೇಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವುದೇ ಕೇಂದ್ರದ ಉದ್ದೇಶ.ಅಂತೆಯೇ ರಾಜ್ಯ ದಲ್ಲಿಯೂ ನಡೆಯುತ್ತಿದೆ ಎಂಬುದು ಆರೋಪ ಈ ರೀತಿ ಕಾಂಗ್ರೆಸ್ ಆರೋಪ ಮಾಡಿ ಆಶ್ರಯ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ವಿರುದ್ಧ ಮದ್ಯ ಹಗರಣ ನಡೆದಿಲ್ಲ ಎನ್ನುವುದಾದರೆ ಸುಪ್ರೀಂಕೋರ್ಟ್ ಯಾಕೆ ಕ್ರಮ ಕೈಗೊಂಡಿದೆ. ಕೇಂದ್ರ ಬಿಜೆಪಿ ಅಸ್ಥಿರಗೊಳಿಸುವ ಕೆಲಸ ಮಾಡಿದರೆ ನ್ಯಾಯಾಲಯ ಸುಮ್ಮನೆ ಇರುತ್ತದೆಯೇ? ರಾಜ್ಯದಲ್ಲಿಯೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.

• ಕಾಂಗ್ರೆಸ್ ಸರ್ಕಾರವು ಬಿಜೆಪಿ ಅವಧಿಯಲ್ಲಿನ 21 ಅಕ್ರಮಗಳನ್ನು ಪಟ್ಟಿ ಮಾಡಿದೆ. ಬಿಜೆಪಿಗರಿಗೆ ನೈತಿಕತೆ ಇಲ್ಲವೇ? ಎಂದು ಸಹ ಪ್ರಶ್ನೆ ಮಾಡಿದೆ.
ಆಡಳಿತ ಪಕ್ಷದವರು ಕಡ್ಲೆಕಾಯಿ ತಿನ್ನುತ್ತಿದ್ದರಾ? ತನಿಖೆ ಯಾಕೆ ಮಾಡಲಿಲ್ಲ? ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ಮಾಡಿದ ಆರೋಪ ಗಳಿಗೆ ಸರಿಯಾದ ಉತ್ತರ ನೀಡದಿರುವುದು ಕಾರಣ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಸರ್ಕಾರ ಬಂದು 15 ತಿಂಗಳಿಗೆ ಏನಾಗಿದೆ? ಮುಡಾ, ವಾಲ್ಮೀಕಿ ಹಗರಣ ಬಯಲಾಗಿವೆ. ಮುಖ್ಯ ಮಂತ್ರಿಗಳು ಮುಡಾ ವಿಚಾರದಲ್ಲಿ ಪಲಾಯನವಾದ ಮಾಡುತ್ತಿದ್ದಾರೆ. ಮುಡಾ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ಅವರು ಸದನದಲ್ಲಿ ಪ್ರತಿಪಕ್ಷಕ್ಕೆ ಸವಾಲು ಮಾಡಿ, ಉತ್ತರ ನೀಡುತ್ತೇನೆ ಎಂದು ದಿಟ್ಟತನದಿಂದ ಹೇಳಬೇಕಿತ್ತು. ಆ ಕೆಲಸವನ್ನು ಅವರು ಮಾಡಲಿಲ್ಲ.

ಮುಡಾ ಹಗರಣ: ಸಚಿವ ಬೈರತಿ ಸುರೇಶ್‌ಗೆ ಸಾರಾ, ಜಿ.ಟಿ.ದೇವೇಗೌಡ ತಿರುಗೇಟು

• ನಿಮ್ಮ ಹೋರಾಟಕ್ಕೆ ನಿಮ್ಮದೇ ಪಕ್ಷದ ಕೆಲವೆರುಯ ಸಹಕಾರ ನೀಡಲಿಲ್ಲ. ಇದಕ್ಕೆ ಏನು ಹೇಳುತ್ತೀರಿ?
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ ಬೇಕಾಗಿರುವುದು ನನ್ನ ಜವಾಬ್ದಾರಿ. ಆ ಪ್ರಯತ್ನ ವನ್ನು ಮಾಡುತ್ತಿದ್ದೇನೆ. ಪಕ್ಷದ ವರಿಷ್ಠರು ಇದೇ ವಿಶ್ವಾಸದ ಮೇಲೆ ನನಗೆ ಜವಾಬ್ದಾರಿ ನೀಡಿದ್ದಾರೆ. ಅದನ್ನು ಹುಸಿ ಮಾಡುವುದಿಲ್ಲ. ಪಕ್ಷ ಬಲವರ್ಧನೆಗೆ ಕಾರ್ಯಕರ್ತರು ಶ್ರಮ ಹಾಕುತ್ತಿದ್ದಾರೆ. ಅಡ್ಡೆಸ್ಟ್ ಮೆಂಟ್ ರಾಜಕಾರಣ ಮಾಡಿದರೆ ಪಕ್ಷ ಕಟ್ಟಿದ್ದ ಕಾರ್ಯಕರ್ತರಿಗೆ ಮಾಡುವ ಅವಮಾನ.

click me!