
ಕಲಬುರಗಿ: (ಮಾ.12): ಕರ್ನಾಟಕದಲ್ಲಿ ಕೆಲವು ಸ್ವಾಮಿಜಿಗಳಿದ್ದಾರೆ. ಅವರಿಗೆ ಭಕ್ತರ ಮೇಲೆ ಪ್ರೀತಿ ಇಲ್ಲ. ಅವರ ಪ್ರೀತಿ ಜಾಸ್ತಿ ಇರೋದು ಮೂರು ಕುಟುಂಬಗಳ ಮೇಲೆ ಮಾತ್ರ. ಯಡಿಯೂರಪ್ಪ, ಖಂಡ್ರೆ, ಶಾಮನೂರು ಫ್ಯಾಮಿಲಿ ಮೇಲೆ ಕೆಲ ಸ್ವಾಮೀಗಳ ಪ್ರೀತಿ ಜಾಸ್ತಿಯಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಕಲಬುರಗಿಯಲ್ಲಿ ಇಂದು ಪಂಚಮಸಾಲಿ ಸಮುದಾಯದ ಸಮಾವೇಶ ಉದ್ದೇಶಿಸಿ ಮಾತನಾಡಿದ ಶಾಸಕ ಯತ್ನಾಳ್, ವಿಜಯೇಂದ್ರನನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡೋದಕ್ಕೆ ಬಡಿದಾಡ್ತಿದ್ದಾರೆ. ಈ ಮೂರು ಕುಟುಂಬಗಳು ಜನರಿಗಾಗಿ ಕೆಲಸ ಮಾಡ್ತಿಲ್ಲ. ಬದಲಾಗಿ ತಮ್ಮ ತಮ್ಮ ಮಕ್ಕಳ ಸಲುವಾಗಿ ಕೆಲಸ ಮಾಡ್ತಿದ್ದಾರೆ. ಇವರು ತಮ್ಮ ಮಕ್ಕಳ ಸಲುವಾಗಿ ಮಾಡಿದ್ರೆ ನಾವು ಗಂಟೆ ಬಾರಿಸಿಕೊಂಡು ಕೂಡೋಣ್ವಾ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಸಮಾವೇಶದಲ್ಲಿ ವೇದಿಕೆ ಮೇಲೆ ಸಚಿವ ಹೆಚ್‌ಸಿ ಮಹದೇವಪ್ಪಗೆ ಮುಖಭಂಗ
ನಮ್ಮದೇ ಜಾತಿಯ ಕೆಲ ಸಚಿವರು, ನಮ್ಮ ಸ್ವಾಮೀಜಿಯವರ ಪಾದಯಾತ್ರೆ ರದ್ದು ಮಾಡೋಕೆ ಕಸರತ್ತು ನಡೆಸಿದರು. ಆದ್ರೂ ಕೂಡ ಎಲ್ಲ ಅಡೆತಡೆಗಳ ಮಧ್ಯೆ ಜಯಮೃತ್ಯುಂಜಯ ಸ್ವಾಮೀಗಳೂ 750 ಕಿಮೀ ಪಾದಯಾತ್ರೆ ಮಾಡಿದ್ರು. ಹಿಂದಿನ ಸರ್ಕಾರದಲ್ಲಿ ಮೀಸಲಾತಿ ಕೊಡಲಿಲ್ಲ. ಇವಾಗ ಮತ್ತೆ ಹೊಸ ನಾಟಕ ಕಂಪೆನಿ ಬಂದಿದೆ. ಹೋರಾಟ ಯಾಕೆ ಮಾಡ್ತೀರಿ ನಾವು ಮೀಸಲಾತಿ ಕೊಡಿಸ್ತೇವೆ ಅಂತಾ ಹೇಳ್ತಿದ್ದಾರೆ. ನಾವು ಅಧಿಕಾರದಲ್ಲಿ ಇದ್ದಾಗ ಒಂದು ನಾಟಕ ಕಂಪೆನಿ ಇತ್ತು. ಇವಾಗ ಮತ್ತೊಂದು ನಾಟಕ ಕಂಪೆನಿ ಬಂದಿದೆ. ಆಗ ಮೀಸಲಾತಿಗಾಗಿ ಪ್ರಾಣ ಕೊಡ್ತಿವಿ ಅಂತಾ ಹೇಳಿದ್ರು, ಇವಾಗ ಬೇರೆಯದ್ದೇ ನಾಟಕ ಮಾಡ್ತಿದ್ದಾರೆ ಎಂದು ಶಾಮನೂರು, ಯಡಿಯೂರಪ್ಪ, ಖಂಡ್ರೆ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.