ಚುನಾವಣೆ ಹೊಸ್ತಿಲಲ್ಲಿ ಕಾಲರ್ ಹಿಡಿದು ಹೊರಗೆ ತಳ್ಳಿದ್ರೆ ಬೇಸರ ಆಗ್ತದೆ; ಸಂಸದ ಸದಾನಂದಗೌಡ ಬೇಸರ

By Sathish Kumar KHFirst Published Mar 12, 2024, 1:06 PM IST
Highlights

ಚುನಾವಣೆ ನಿಲ್ಲದಿದರಲು ನಿರ್ಧಾರ ಮಾಡಿದ ನನ್ನನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಿದರು. ಆದರೆ, ಈಗ ಟಿಕೆಟ್ ಕೊಡದೇ ಕಾಲರ್ ಹಿಡಿದು ಹೊರಗೆ ತಳ್ಳಿದರೆ ಬೇಸರ ಆಗುತ್ತದೆ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.

ಬೆಂಗಳೂರು (ಮಾ.12): ರಾಜಕಾರಣಕ್ಕೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಾನು ಚುನಾವಣೆಗೆ ನಿಲ್ಲಬಾರದು ಎಂದುಕೊಂಡಿದ್ದೆನು. ಆದರೆ, ರಾಜ್ಯ ನಾಯಕರು ಮತ್ತೆ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದರಿಂದ ಮನಸು ಬದಲಿಸಿಕೊಂಡಿದ್ದೇನೆ. ಈಗ ಚುನಾವಣೆ ಹೊಸ್ತಿಲಲ್ಲಿ ಟಿಕೆಟ್ ಕೊಡದೇ ಕಾಲರ್ ಹಿಡಿದು ಹೊರಗೆ ಹಾಕಿದರೆ ನನಗೆ ಬೇಸರವಾಗುತ್ತದೆ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.

ಲೋಕಸಭಾ ಚುನಾವಣೆಯ ಟಿಕೆಟ್ ಕೈ ತಪ್ಪುವ ಸಾಧ್ಯತೆ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೆ ಹೊಸಬರು ಬರಬಾರದು ಎಂದೇನಿಲ್ಲ. ನಾನು ರಾಜಕೀಯ ಬದಲಾವಣೆ ಕೂಡ ಅಗತ್ಯ ಇದೆ. ರಾಜ್ಯದಲ್ಲಿ 122 ಇದ್ದ ವಿಧಾನಸಭೆ ಸದಸ್ಯರು 66 ಯಾಕೆ ಬಂತು? ಚುನಾವಣೆ ಹೊಸ್ತಿಲಲ್ಲಿ ಈಗ ನನಗೆ ಕಾಲರ್ ಹಿಡಿದು ಹೊರಗೆ ತಳ್ಳಿದ್ರೆ ಬೇಸರ ಆಗ್ತದೆ. ಕೋರ್ ಕಮಿಟಿಯಲ್ಲಿ ಹಳಬರಿಗೆ ಟಿಕೆಟ್ ಕೊಡುವಂತೆ ನನ್ನ ಒಬ್ಬನದೆ ಹೆಸರು ಹೋಗಿದ್ದು ಎಂದು ಹೇಳಿದರು.

BJP Ticket to New Faces: ಹಳಬರಿಗೆ ಕೊಕ್..ಹೊಸಬರಿಗೆ ಹೈಕಮಾಂಡ್ ಅವಕಾಶ: ಯಾರು ಯಾರಿಗೆ ಈ ಬಾರಿ ಚಾನ್ಸ್‌ ಸಿಗಲಿದೆ ?

ರಾಜಕಾರಣದಲ್ಲಿ ನಾನು ಆಗಾಗ ಬದಲಾಗುವ ವ್ಯಕ್ತಿ ಅಲ್ಲ. ನಾನು ಎಲ್ಲರ ಹಾಗೆ ಆಗಾಗ ಬದಲಾಗುವ ವ್ಯಕ್ತಿ ಅಲ್ಲ. ನಾನು ಚುನಾವಣೆ ನಿಲ್ಲಬಾರದು ಎಂದು ಅಂದುಕೊಂಡಿದ್ದೆನು. ರಾಜ್ಯದ ನಾಯಕರು ಬಂದು ಚುನಾವಣೆ ನಿಲ್ಲುವಂತೆ ಒತ್ತಾಯ ಮಾಡಿದರು. ಈಗ ಬದಲಾವಣೆ ಮಾಡಿದರೆ, ಬೇಸರ ಆಗ್ತದೆ. ದೆಹಲಿಯಲ್ಲಿ ಏನು ಚರ್ಚೆ ಆಗಿದೆ ಎಂದು ನಾನು ಕೇಳಿಲ್ಲ. ನಾನು ಅದನ್ನು ತಿಳಿಯಲು ಆಸಕ್ತಿ ಹೊಂದಿಲ್ಲ. ಕಾಯೋಣ.. ಅಷ್ಟು ಕಾಯದೇ ಇದ್ದರೆ ಅವನು ರಾಜಕಾರಣಿ ಆಗೋಕೆ ನಾಲಾಯಕ್ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವೆಡೆ ಬದಲಾವಣೆ ಇರಬಹುದು. ಬದಲಾವಣೆ ಜಗತ್ತಿನ ನಿಯಮವಾಗಿದೆ. ಆದರೆ, ಬದಲಾವಣೆ ಎಲ್ಲಿ ಹೇಗೆ ಮಾಡಬೇಕು ಎಂದು ಯೋಚನೆ ಮಾಡಬೇಕು. ನೇರವಾದ ರಸ್ತೆಯಲ್ಲಿ ಜಾಸ್ತಿ ಎಕ್ಸಲೇಟರ್ ಒತ್ತಿದರೆ ಸರಿ. ಆದರೆ, ತಿರುವು ಮುರುವು ಇರುವ ರಸ್ತೆಯಲ್ಲಿ ಎಕ್ಸಲೇಟರ್ ಒತ್ತಿದ್ರೆ ಏನಾಗಬಹುದು.ವಿಧಾನಸಭೆಯಲ್ಲಿ ಉಂಟಾದ ಪರಿಸ್ಥಿತಿಯೇ ಉಂಟಾಗಬಹುದು. ಈ ನಿಟ್ಟಿನಲ್ಲಿ ಹೈಕಮಾಂಡ್ ಆಲೋಚನೆ ಮಾಡಬೇಕಿದೆ ಎಂದು ತಿಳಿಸಿದರು.

ನನ್ನ ಗೆಲುವಿಗೆ ಅಂಬರೀಶ್ ಮತಗಳು ಕಾರಣ: ಸಂಸದೆ ಸುಮಲತಾ

ಇನ್ನು ರಾಜ್ಯ ರಾಜಕಾರಣದಲ್ಲಿ ಹೊರಗಡೆ ಹೋಗಿ ಒಳಗೆ ಬಂದವರಿಗೆ ಬೆಲೆ ಜಾಸ್ತಿನಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಗಂಭೀರ ಪ್ರಶ್ನೆ ಕೂಡ ಹೌದು. ವ್ಯಂಗ್ಯವಾದ ಪ್ರಶ್ನೆ ಕೂಡ ಹೌದು. ಬೆಳಗ್ಗೆ ತಬ್ಬಿಕೊಂಡವನನ್ನು, ರಾತ್ರಿ ತಳ್ಳಿದವನನ್ನ ವ್ಯಕ್ತಿಗತವಾಗಿ ಚರ್ಚೆ ಮಾಡೋದು ಸರಿಯಲ್ಲ. ಆದರೆ, ನನಗೆ ಟಿಕೆಟ್ ಸಿಗದೆ ಹೋದರೆ ರಾಜ್ಯ ನಾಯಕರ ಮಾತಿಗೆ ಬೆಲೆ ಇಲ್ಲ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.

click me!