ಜೋಡೆತ್ತುಗಳು ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗ್ತೀವಿ ಎಂದು ಹೇಳಿ ಈಗ ಒಂದೆತ್ತು ಬೆಂಗಳೂರಲ್ಲಿದ್ದರೇ ಮತ್ತೊಂದು ಎತ್ತು ದೆಹಲಿಗೆ ಹೋಗಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ಹಾಸನ (ಡಿ.10): ಜೋಡೆತ್ತುಗಳು ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗ್ತೀವಿ ಎಂದು ಹೇಳಿ ಈಗ ಒಂದೆತ್ತು ಬೆಂಗಳೂರಲ್ಲಿದ್ದರೇ ಮತ್ತೊಂದು ಎತ್ತು ದೆಹಲಿಗೆ ಹೋಗಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು. ಮಾರ್ಗಮಧ್ಯೆ ನಗರದ ಹೊರವಲಯದ ಬೈಪಾಸ್‌ನಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಈ ಹಿಂದೆ ಜೋಡೆತ್ತುಗಳು ಇಬ್ಬರು ದೆಹಲಿಗೆ ಹೋಗ್ತೀವಿ ಅಂತ ಹೇಳಿದ್ದರು. ಆದರೆ ಈಗ ಪಾಪ ಒಂದು ಎತ್ತನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ಒಂದು ಎತ್ತು ಬೆಂಗಳೂರಿನಲ್ಲಿದೆ.
ಮತ್ತೊಂದು ಎತ್ತು ದೆಹಲಿಯಲ್ಲಿದೆ ಎಂದು ಯಡಿಯೂರಪ್ಪ ಮತ್ತು ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪನವರು ಆರ್ ಅಶೋಕ್ ಅವರನ್ನು ಜೋಡೆತ್ತು ಮಾಡಿಕೊಂಡಿಲ್ಲ. ನಮ್ಮ ಸಮಾನವಾಗಿ ಯಾರೂ ಬೆಳೆಯಬಾರದು ಎಂಬ ಉದ್ದೇಶ ಇದಾಗಿದೆ. ಮೊದಲು ನಾವು ಇಬ್ಬರು ಜೊತೆಯಲ್ಲಿ ದೆಹಲಿಗೆ ಹೋಗ್ತೀವಿ ಅಂತ ಹೇಳಿದ್ದರು. ನಂತರ ಆಗಿದ್ದೇನು ಎಂದು ಪ್ರಶ್ನಿಸಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ನಗರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಗೆ ಬೈಯದಿದ್ದರೆ ಸಿದ್ದರಾಮಯ್ಯಗೆ ಊಟ ರುಚಿಸಲ್ಲ: ಪ್ರಲ್ಹಾದ್ ಜೋಶಿ
ವಿ ಸೋಮಣ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಷವನ್ನು ಯಾರು ಬಿಡುವುದಿಲ್ಲ. ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಯಾರ್ಯಾರು ತಮ್ಮ ಮಕ್ಕಳ ಸಲುವಾಗಿ ದುರ್ಬಲ ಅಭ್ಯರ್ಥಿಯನ್ನು ಹಾಕಿದ್ದರು, ಸೋಮಣ್ಣನನ್ನು ಯಾರು ಸೋಲಿಸಿದರು ಎಂಬುದು ಎಲ್ಲಾ ನನಗೆ ಗೊತ್ತಿದೆ. ವಿ ಸೋಮಣ್ಣ ಅವರಿಗೆ ಲಿಂಗಾಯಿತರೆ ಓಟು ಹಾಕಲಿಲ್ಲ. ಯಾರು ಈ ರೀತಿ ಮಾಡಿಸಿದರು ಎಂಬುದು ನನಗೆ ಗೊತ್ತಿದೆ. ಮೇಲಿನವರು ಇದನ್ನು ತಿಳಿದುಕೊಂಡು ನಿರ್ಣಯ ಮಾಡಬೇಕು.
ಕಾಂಗ್ರೆಸ್ ಪಕ್ಷಕ್ಕೆ ಟಯರ್ ಪಂಚರ್ ಆಗಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ
ಸೀಟು ಮೋದಿಯಿಂದ ಮಾತ್ರ ಸಾಧ್ಯ: 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದರೆ ಅದು ಮೋದಿ ಅವರಿಂದ ಮಾತ್ರವೇ ಹೊರತು ಈ ಮಹಾಪುರುಷರಿಂದಲ್ಲ. ನನ್ನನ್ನು ಬಿಟ್ಟರೆ ಕರ್ನಾಟಕದಲ್ಲಿ ಜೀರೋ ಎಂದು ಹೈಕಮಾಂಡ್ ಬಳಿ ಹೇಳಿರುತ್ತಾರೆ. ಇದಕ್ಕೆ ಪೂರಕವಾಗಿ ಒಂದೆರಡು ಜನ ಅದೇ ರೀತಿ ವರದಿಯನ್ನು ಹೈಕಮಾಂಡಿಗೆ ಸಲ್ಲಿಸಿದ್ದಾರೆ. ಇದೊಂದು ದುರಂತ ಎಂದರು. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಬೇಕೆಂಬುದು ಎಲ್ಲರ ಆಶಯವಾಗಿದೆ. ನರೇಂದ್ರ ಮೋದಿ ಹಾಗೂ ದೇಶ ಮತ್ತು ಹಿಂದುತ್ವದ ಸಲುವಾಗಿ ಯಾರು ಪಕ್ಷ ಬಿಡುವುದಿಲ್ಲ. ಈ ಹಿಂದೆ ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದ ಲೀಡರ್ ರೀತಿ ಯಾರು ಅಂತಹ ಕೆಲಸ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.