ಸಿದ್ದರಾಮಯ್ಯ ಷಡ್ಯಂತ್ರ ಬಿಚ್ಚಿಡಬೇಕಾ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Jan 23, 2023, 9:03 AM IST
Highlights

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಲು ಧರ್ಮಸ್ಥಳದ ಸಿದ್ದವನದಲ್ಲಿ ನಡೆಸಿದ ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಮುದ್ದೇಬಿಹಾಳ (ಜ.23): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಲು ಧರ್ಮಸ್ಥಳದ ಸಿದ್ದವನದಲ್ಲಿ ನಡೆಸಿದ ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಾಲೂಕಿನ ಬಳವಾಟ ಗ್ರಾಮದಲ್ಲಿ ಪಂಚರತ್ನ ಯಾತ್ರೆ ವೇಳೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮತ್ತೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜೆಡಿಎಸ್‌ ಬಗ್ಗೆ ದ್ವಂದ್ವ ಹಾಗೂ ಗೊಂದಲದ ಹೇಳಿಕೆ ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ. ಜೆಡಿಎಸ್‌ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಕಿಡಿಕಾರಿದರು.

ಧರ್ಮಸ್ಥಳದ ಸಿದ್ದವನದಲ್ಲಿ ಸಭೆ ನಡೆಸಿ ಮೈತ್ರಿ ಸರ್ಕಾರ ಕೆಡವಲು ಮುಂದಾಗಿದ್ದಲ್ಲದೆ ಕೇವಲ 14 ತಿಂಗಳಲ್ಲೇ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಂಚು ರೂಪಿಸಿದ್ದು ಗೊತ್ತಿಲ್ಲದ ವಿಚಾರವಲ್ಲ. ನಾನು ಬಡವರ ಆರೋಗ್ಯ ಚಿಕಿತ್ಸೆಗಾಗಿ ಸುಮಾರು .109 ಕೋಟಿ ಹಾಗೂ .25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದು ಇಡೀ ರಾಜ್ಯದ ಜನರಿಗೆ ತಿಳಿದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ನೀವು ತೋರಿದ ಕುತಂತ್ರ ಬುದ್ಧಿಯಿಂದಲೇ ಕಾಂಗ್ರೆಸ್‌ ಸಂಪೂರ್ಣ ಅಧಿಕಾರ ಹಿಡಿಯಲು ಸಾಧ್ಯವಾಗದೆ ಹೀನಾಯ ಸ್ಥಿತಿ ತಲುಪಬೇಕಾಯಿತು ಎಂದು ಆರೋಪಿಸಿದರು.

ಜನರ ಸಂಕಷ್ಟ ನಿವಾರಣೆಗೆ ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

20 ವರ್ಷಗಳಿಂದ ಜೆಡಿಎಸ್‌ ಸರ್ಕಾರ ರಾಜ್ಯದಲ್ಲಿ ಉತ್ತಮ ಜನಪರ ಆಡಳಿತ ನೀಡುವ ಮೂಲಕ ಉತ್ತಮ ಭರವಸೆ ಮೂಡಿಸಿದೆ. ಇದೇ ಜೆಡಿಎಸ್‌ ಪಕ್ಷದಲ್ಲಿ ಬೆಳೆದು ಬಂದು ಈ ಪಕ್ಷವನ್ನೇ ನಿರ್ನಾಮ ಮಾಡಲು ಹೊರಟಿರುವ ನಿಮ್ಮ ಕುತಂತ್ರ ಬುದ್ಧಿ ಗಮನಿಸಿದ ಕಾರ್ಯಕರ್ತರು ನಿಮ್ಮನ್ನು ದೂರವಿಟ್ಟರು. ಜೆಡಿಎಸ್‌ನಲ್ಲಿದ್ದರೆ ಮುಖ್ಯಮಂತ್ರಿ ಆಗುವುದಿಲ್ಲ ಎಂಬುವುದನ್ನರಿತು ಅಧಿಕಾರದಾಸೆಗೆ ಕಾಂಗ್ರೆಸ್‌ ಪಕ್ಷ ಸೇರಿದಿರಿ. ಅಧಿಕಾರ ಇರಲಿ, ಬಿಡಲಿ ಜಯಪ್ರಕಾಶ್‌ ನಾರಾಯಣ ಅವರು ಕಟ್ಟಿಬೆಳೆಸಿದ ಜೆಡಿಎಸ್‌ ಪಕ್ಷವನ್ನು ಬಲಿಷ್ಠ ಸಂಘಟನೆ ಮಾಡುವ ಮೂಲಕ ಉಳಿಸಿ, ಬೆಳೆಸಲು ನಾವು ಮುಂದಾಗಿದ್ದೇವೆ ಎಂಬುದನ್ನು ಸಿದ್ದರಾಮಯ್ಯನವರು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದು ಹರಿಹಾಯ್ದರು.

ಅಣ್ಣ ತಮ್ಮಂದಿರ ಮಧ್ಯ ಒಡಕು ತರೋದಿಲ್ಲ: ಮುದ್ದೇಬಿಹಾಳ ತಾಲೂಕಿನಲ್ಲಿ ಭ್ರಷ್ಟಾಚಾರ, ದಬ್ಬಾಳಿಕೆಯ ಬಗ್ಗೆ ದೊಡ್ಡಮಟ್ಟದ ಚರ್ಚೆ ಆಗುತ್ತಿದೆ. ಅಂತಹ ಒಬ್ಬ ಶಾಸಕನನ್ನು ನೀವು ಆಯ್ಕೆ ಮಾಡಿಕೊಂಡಿದ್ದೀರಿ. ಅಂದು ಇಂಥವರ ಜೊತೆಗೆ ನಾನು ಇಲ್ಲಿ ವೇದಿಕೆಯಲ್ಲಿದ್ದೆ. ಅದನ್ನು ನಾನು ಮರೆತಿಲ್ಲ. ಆ ಸಂರ್ದರ್ಭದಲ್ಲಿ ನನ್ನನ್ನು ಹೇಗೆ ದುರುಪಯೋಗ ಪಡೆಸಿಕೊಂಡರು ಎಂಬುವುದು ಅವರ ಬಗ್ಗೆ ಚರ್ಚೆ ನಡೆಸುವುದು ಅನವಶ್ಯಕ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಕಳೆದ ಒಂದು ವರ್ಷದ ಹಿಂದೆ ಅವರ ಸಹೋದರರು ಹಲವಾರು ಬಾರಿ ನನ್ನ ಬಳಿ ಬಂದರು. ನನಗೆ ಮತ್ತು ನಮ್ಮ ಅಣ್ಣನಿಗೆ ದೊಡ್ಡಮಟ್ಟದ ಭಿನ್ನಾಭಿಪ್ರಾಯ ಬಂದಿದೆ. ನಮ್ಮ ಅಣ್ಣನಿಗೆ ನೆಲ ಕಾಣುತ್ತಿಲ್ಲ. ತಲೆ ತಿರುಗಿ ಹೋಗಿದೆ. ನಮ್ಮ ಮೇಲೆಯೇ ಪೊಲೀಸ್‌ ದಬ್ಬಾಳಿಕೆ ಮೂಲಕ ನನಗೆ ಹಿಂಸೆ ಕೊಡುತ್ತಿದ್ದಾರೆ. 

ದೇವೇಗೌಡರ ಕಾಲಿನ ಧೂಳಿಗೂ ನಳಿನ್‌ ಕಟೀಲ್‌ ಸಮನಲ್ಲ: ಎಚ್‌.ಡಿ.ಕುಮಾರಸ್ವಾಮಿ

ನಿಮ್ಮ ಪಕ್ಷದ ಅಭ್ಯರ್ಥಿ ಆಗಲು ತಯಾರಿದ್ದೇನೆ. ನನಗೆ ಬಿ ಫಾರಂ ಕೊಟ್ಟರೇ ಅವರ ವಿರುದ್ಧ ಹೋರಾಟ ಮಾಡುತ್ತೇನೆ ಎಂದಿದ್ದರು. ರಾಜಕಾರಣಕ್ಕೋಸ್ಕರ ನಿಮ್ಮ ಕುಟುಂಬದಲ್ಲಿ ಅಣ್ಣ-ತಮ್ಮಂದಿರ ಮಧ್ಯ ಒಡೆಯೋದಕ್ಕೆ ಹೋಗುವುದಿಲ್ಲ. ಆ ರೀತಿ ಅಕ್ರಮಗಳು ನಡೆಯುತ್ತಿವೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಅಮಾಯಕರು, ಹೋರಾಟಗಾರರ ಮೇಲೆ ಇವತ್ತು ಹಲವಾರು ರೀತಿಯ ಕೇಸ್‌ಗಳನ್ನು ಹಾಕಿ ಸುಳ್ಳು ದಾಖಲೆಗಳನ್ನು ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಅನಿಸಿದ್ದರೆ ಉತ್ತಮ ಅಭ್ಯರ್ಥಿಯೊಬ್ಬನನ್ನು ಚುನಾವಣೆಯಲ್ಲಿ ನಿಲ್ಲಿಸಿ ಹೋರಾಟ ಮಾಡಿ ಸಹಕರಿಸಿ ಎಂದು ಹೇಳಿದ್ದೇನೆ. ಆದರೆ, ಅವರ ಸಹೋದರ ವಾಪಸ್‌ ಬಂದಿಲ್ಲ ಎಂದು ಮತಕ್ಷೇತ್ರದ ರಾಜಕೀಯ ಬೆಳವಣಿಗೆಯನ್ನು ಬಿಚ್ಚಿಟ್ಟರು.

click me!