ರಾಜ್ಯ ಸರ್ಕಾರ ಮದ ಏರಿದ ಆನೆಯಂತೆ ವರ್ತಿಸುತ್ತಿದೆ: ಶಾಸಕ ಆರಗ ಜ್ಞಾನೇಂದ್ರ ಆರೋಪ

By Kannadaprabha News  |  First Published Jun 2, 2024, 5:44 PM IST

ವಾಲ್ಮೀಕಿ ನಿಗಮದ 180 ಕೋಟಿ ರುಪಾಯಿಗಳ 7-8 ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಿರ್ದೇಶನದಲ್ಲಿ ವರ್ಗಾಯಿಸಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು. 


ತೀರ್ಥಹಳ್ಳಿ (ಜೂ.02): ವಾಲ್ಮೀಕಿ ನಿಗಮದ 180 ಕೋಟಿ ರುಪಾಯಿಗಳ 7-8 ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಿರ್ದೇಶನದಲ್ಲಿ ವರ್ಗಾಯಿಸಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು. ಪಟ್ಟಣದಲ್ಲಿ ಮಾನವ ಸರಪಳಿಯೊಂದಿಗೆ ರಸ್ತೆ ತಡೆ ನಡೆಸಿ ಮಾತನಾಡಿ ದಲಿತರ ಕಲ್ಯಾಣಕ್ಕಾಗಿ ಕಾದಿರಿಸಿರುವ ಹಣ ಲೂಟಿ ಮಾಡಿರುವ ಸರ್ಕಾರದ ನಿಲುವು ಬಿಜೆಪಿ ಖಂಡಿಸುತ್ತದೆ. ಈ ಬಗ್ಗೆ ಜೂ.7ರ ನಂತರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ರಾಜ್ಯ ಸರ್ಕಾರ ಮದ ಏರಿದ ಆನೆಯಂತೆ ವರ್ತಿಸುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಸ್ಟ್ಯಾಂಪ್ ಡ್ಯೂಟಿ, ಮದ್ಯದ ಧಾರಣೆ ಮತ್ತು ವಿದ್ಯುತ್ ಶುಲ್ಕ ಏರಿಕೆ ಯಾಗಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲದ ಬಗ್ಗೆ ತಾವು ಕ್ಷಮೆ ಯಾಚಿಸುವುದಾಗಿಯೂ ತಿಳಿಸಿದರು. ರಾಜ್ಯ ಸರ್ಕಾರ ಹಗಲು ದರೋಡೆ ಮಾಡುವುದಕ್ಕೆ ಇಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನ ದಲ್ಲಿಯೇ ಹಣದ ವರ್ಗಾವಣೆ ನಡೆದಿದೆ.ಈ ಸರ್ಕಾರಕ್ಕೆ ಕನಿಷ್ಟ ಗೌರವ ಇದ್ದರೆ ಪ್ರಕರಣ ಸಿಬಿಐಗೆ ವಹಿಸಿ ಸಚಿವ ನಾಗೇಂದ್ರರ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Latest Videos

undefined

ಜೀವನ ಪದ್ಧತಿಯಲ್ಲಿ ಬದಲಾವಣೆ ಆಗದಿದ್ದರೆ ಭವಿಷ್ಯ ಭಯಾನಕ: ತೇಜಸ್ವಿನಿ ಅನಂತಕುಮಾರ್

ರಾಜ್ಯ ಸರ್ಕಾರ ಎಚ್.ಡಿ.ದೇವೇಗೌಡರ ಕುಟುಂಬ ಮುಗಿಸುವ ಹುನ್ನಾರ ನಡೆಸಿದ್ದು ಪ್ರಜ್ವಲ್ ಪ್ರಕರಣದ ತನಿಖೆ ನಡೆದಿರುವ ರೀತಿ ಅನುಮಾನಕ್ಕೆ ಕಾರಣವಾಗಿದೆ. ಇದೇ ಉದ್ದೇಶಕ್ಕಾಗಿಯೇ ವಿಶೇಷವಾಗಿ ಎಸ್ಐಟಿ ರಚಿಸಲಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಬಾಳೇಬೈಲು ರಾಘವೇಂದ್ರ ನಾಯಕ್, ಸೊಪ್ಪುಗುಡ್ಡೆ ರಾಘವೇಂದ್ರ, ಮಧುರಾಜ ಹೆಗ್ಡೆ ತೂದೂರು, ಪ್ರಶಾಂತ್ ಕುಕ್ಕೆ, ಸಂತೋಷ ದೇವಾಡಿಗ ಮುಂತಾದವರು ಇದ್ದರು.

ಸೂಕ್ತ ತನಿಖೆಯಾಗಲಿ: ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಬರೆದಿಟ್ಟಿರುವ ಡೆತ್ ನೋಟ್ ಅನೇಕ ಆಶ್ಚರ್ಯಕರ ಸಂಗತಿಗಳ ಹೊರಹಾಕಿದೆ. ದಲಿತರಿಗೆ ಪರಿಶಿಷ್ಟ ಜನಾಂಗದವರಿಗೆ ಮೀಸಲಿಟ್ಟ ಅನುದಾನ 187 ಕೋಟಿ ಅಕ್ರಮ ವರ್ಗಾವಣೆ ಆಗಿದೆ. ₹85 ಕೋಟಿಯಷ್ಟು ಅವ್ಯವಹಾರ ನಡೆದಿದೆ ಈ ಹಗರಣಕ್ಕೆ ಕಾರಣರಾರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು ಎಂದು ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕೋಲಾರ ಎಂಪಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಖಚಿತ: ಶಾಸಕ ಕೊತ್ತೂರು ಭವಿಷ್ಯ

ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಗಳ ಕಚೇರಿಯ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆಯೂ ಚಂದ್ರಶೇಖರನ್‌ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ದಲಿತರಿಗೆ ಬಡವರಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡುತ್ತಿರುವುದು ಅವ್ಯಹತವಾಗಿ ಭ್ರಷ್ಟಾಚಾರ ನಡೆದಿದೆ. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ಹೊಣೆ ಹೊತ್ತು. ಸಚಿವರು ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೋಸ ವಂಚನೆ ಮಾಡಿದೆ. ದಲಿತರ ಹಣ ಲೂಟಿ ಮಾಡುವ ಮೂಲಕ ರಾಜ್ಯದ ಜನತೆ ತಲೆತಗ್ಗಿಸುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಟೀಕಿಸಿದರು.

click me!